ಕೂಡಿಗೆ, ನ. ೧೫: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದಲ್ಲಿರುವ ಶ್ರೀ ಶನೈಶ್ವರ ದೇವಸ್ಥಾನದಲ್ಲಿ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಅಣ್ಣಪ್ಪ ಹಯ ಪರಿವಾರ ದೈವಗಳಿಗೆ ನರ್ತನ ಸೇವೆ, ಹಾಗೂ ಶ್ರೀ ಅಣ್ಣಪ್ಪ, ಪಂಜುರ್ಲಿ - ಕರ್ಲ್ಲುಟ್ಟಿ ಹಾಗೂ ಚಾಮುಂಡಿ, ಗುಳಿಗ ಕೋಲ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮ ನಡೆದವು. ಕಾರ್ಯಕ್ರಮದ ಅಂಗವಾಗಿ ಗಣಯಾಗ, ಪ್ರಧಾನ ಹೋಮ ಪರಿವಾರ ದೈವಗಳಿಗೆ ವಿಶೇಷ ಹೋಮ ಹವನಗಳು ನಡೆದವು.