ಮಡಿಕೇರಿ, ನ. ೧೫: ಕೊಡಗಿನ ಶಾಸಕರ ಆಡಳಿತ ವೈಫಲ್ಯವೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಕೊಡಗು ಕಾಂಗ್ರೆಸ್‌ನ ಹಿರಿಯ ಮುಖಂಡರು ಒಕ್ಕೊರಲಿನ ಅಭಿಮತ ವ್ಯಕ್ತಪಡಿಸಿದ್ದಾರೆ.

ಗುರುವಾರದಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಮೂರ್ನಾಡು ವಲಯ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಿದ ನಂತರ ವಲಯ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಒಗ್ಗಟ್ಟಿನ ಪ್ರದರ್ಶನ ಮಾಡಿದ ರಾಜ್ಯ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರು ೨೦೨೩ ರ ವಿಧಾನ ಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ದರ್ಮಜ ಉತ್ತಪ್ಪ, ಮಾಜಿ ಎಂ.ಎಲ್.ಸಿ ಶಾಂತೆಯAಡ ವೀಣಾ ಅಚ್ಚಯ್ಯ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಚಂದ್ರಮೌಳಿ,ಯುವ ಮುಖಂಡ ಡಾ. ಮಂಥರ್ ಗೌಡ, ಮಾಜಿ ಡಿಸಿಸಿ ಅಧ್ಯಕ್ಷ ಟಿ.ಪಿ.ರಮೇಶ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಧೀರ್ಘಕೇಶಿ ಶಿವಣ್ಣ, ಪಾಪು ಸಣ್ಣಯ್ಯ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನ, ಡಿಸಿಸಿ ಕಾರ್ಯದರ್ಶಿ ಮಂದ್ರೀರ ಮೋಹನ್ ದಾಸ್, ಕೆಪಿಸಿಸಿ ವಿಭಾಗೀಯ ಸಂಚಾಲಕ ಐಚೆಟ್ಟಿರ ಚಿಣ್ಣಪ್ಪ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಕೇಶವ, ಚೆರಿಯಮನೆ ಭಾರ್ಗವರವರು ಮಾತನಾಡಿ ಚುನಾವಣೆಗೆ ಸಜ್ಜಾಗುವಂತೆ ಕಾರ್ಯಕರ್ತರನ್ನು ಹುರಿದುಂಬಿಸಿದರು. ಜಿಲ್ಲೆಯಲ್ಲಿ ಅನೇಕ ಸಮಾಜಮುಖಿ ಕಾರ್ಯಗಳಿಗೆ ನೆರವಾಗುತ್ತಿರುವ ಡಾ. ಮಂಥರ್‌ಗೌಡ ಅವರನ್ನು ಮಡಿಕೇರಿ ಬ್ಲಾಕ್ ಮಹಿಳಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು, ಡಿಸಿಸಿ ಸದಸ್ಯರಾದ ಮುಂಡAಡ ಭಾಗೇಶ್ , ಅಬ್ದುಲ್‌ರಜಾಕ್, ಪ್ರಕಾಶ್ ಆಚಾರ್ಯ, ಖಾಲಿದ್ ಹಾಕತ್ತೂರು, ಬ್ಲಾಕ್ ಉಪಾಧ್ಯಕ್ಷರಾದ ಧನಂಜಯ, ಪ್ರಭುರೈ, ಪ್ರಧಾನ ಕಾರ್ಯದರ್ಶಿ ಯಶ್ ದೋಲ್ಪಾಡಿ, ಮರಗೋಡು ವಲಯಾಧ್ಯಕ್ಷರಾದ ವಿವೇಕಾನಂದ, ಹೊದ್ದೂರು ವಲಯಾಧ್ಯಕ್ಷರಾದ ಇಬ್ರಾಹಿಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ ಹಾಗೂ ವಲಯ ಅಧ್ಯಕ್ಷರಾದ ಕೇಶವರವರ ನೇತೃತ್ವದಲ್ಲಿ ಇತರ ಪಕ್ಷಗಳ ಕಾರ್ಯಕರ್ತರಾದ ಟಿ.ಎಸ್.ರಮ್ಯ, ಕೆ.ಬಾಬು, ಸದೀಕ್, ಬೇಬಿ, ಹೆಚ್.ಟಿ. ಶಶಿ, ದೇವಜನ ಗಣಪತಿ, ಎ.ಜೆ.ಕಾವೇರಪ್ಪ, ಕಾವ್ಯ, ರಾಜ, ಎನ್.ಎಮ್.ರಜಾಕ್, ಟಿ.ಎನ್.ಶ್ರೀನಿವಾಸ್, ಟಿ.ಎಂ.ದಿನೇಶ್, ಹೆಚ್.ಎಲ್. ಕಮಲ, ಹೆಚ್.ಎ. ಸೋಮಪ್ಪ, ಕೆ.ಹಚ್.ಸುಬೇರ್, ಸತೀಶ್, ಸುಬ್ರಮಣಿ, ಸುನೀಲ್, ರವಿ, ಸೋಮಯ್ಯ, ಸುಂದರ, ಅಯ್ಯಪ್ಪ, ಉಂಬಾಯಿ, ಮೊಯ್ದು, ರಾಕೇಶ್, ಸುಲ್ತಾನ್, ಕುಂಞ ಅಹಮದ್, ಲೋಕೇಶ್ ಸೇರಿದಂತೆ ಮೂವತ್ತಕ್ಕೂ ಅಧಿಕ ಮಂದಿಯನ್ನು ಶಲ್ಯ ಹೊದಿಸುವ ಮೂಲಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಹಾಗೂ ನಾಯಕರು ಪಕ್ಷಕ್ಕೆ ಬರಮಾಡಿಕೊಂಡರು. ಕೇಶವ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶಿವು ವಂದಿಸಿದರು. ಸಾಧಿಕ್ ಹಾಗೂ ಮೀನಾಕ್ಷಿ ಕೇಶವರವರು ಕಾರ್ಯಕ್ರಮ ನಿರೂಪಿಸಿದರು.