ಮಡಿಕೇರಿ, ನ. ೧೫: ಕ್ರೀಡಾ ಜಿಲ್ಲೆ ಕೊಡಗಿನಲ್ಲಿ ಫುಟ್ಬಾಲ್ ಹಬ್ಬ ಆರಂಭಗೊAಡಿದೆ. ನವೆಂಬರ್ ತಿಂಗಳಿನಿAದ ನಿರಂತರವಾಗಿ ಯಾವುದೇ ಬಿಡುವಿಲ್ಲದೆ ಮುಂದಿನ ವರ್ಷ ಮೇ ತಿಂಗಳವರೆಗೆ ಜಿಲ್ಲೆಯಲ್ಲಿ ವಿವಿಧ ಕ್ಲಬ್‌ಗಳು ಹಾಗೂ ಸಂಘ-ಸAಸ್ಥೆಗಳು ರಾಜ್ಯ, ರಾಷ್ಟçಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಜಿಲ್ಲೆಯಲ್ಲಿ ಆಯೋಜನೆ ಮಾಡುತ್ತಿವೆ.

ಇದರಿಂದ ಗ್ರಾಮೀಣ ಭಾಗದ ಯುವ ಫುಟ್ಬಾಲ್ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ದೊರಕುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಫುಟ್ಬಾಲ್ ಪಂದ್ಯಾವಳಿಗಳು ಆಯೋಜನೆ ಗೊಳುತ್ತಿರಲಿಲ್ಲ. ಸತತ ಎರಡು ವರ್ಷಗಳ ಪ್ರಾಕೃತಿಕ ವಿಕೋಪ, ನಂತರ ಎರಡು ವರ್ಷಗಳ ಕಾಲ ಲಾಕ್‌ಡೌನ್‌ನಿಂದ ಜಿಲ್ಲೆಯಲ್ಲಿ ಫುಟ್ಬಾಲ್ ಪಂದ್ಯಾವಳಿಗಳು ನಡೆಯುತ್ತಿರಲಿಲ್ಲ.

ಆದರೆ ಈ ವರ್ಷ ಮಳೆ ಕಡಿಮೆಯಾದ ದಿನದಿಂದಲೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಫುಟ್ಬಾಲ್ ಪಂದ್ಯಾವಳಿಗಳು ವಿಜೃಂಭಣೆಯಿAದ ನಡೆಯುತ್ತಿವೆ.

ಬೇಬಿಸ್ ಲೀಗ್ ಹಾಗೂ ಅಂಡರ್ ೧೬ ಕಾಲ್ಚೆಂಡು ಪಂದ್ಯಾವಳಿ

ಕೊಡಗು ಫುಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ‘ಅಂಡರ್ -೧೬’ ಜಿಲ್ಲೆಯ ಎಲ್ಲಾ ಪ್ರೌಢ ಶಾಲೆಗಳ ನಡುವೆ ಫುಟ್ಬಾಲ್ ಪಂದ್ಯಾವಳಿ ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ.

ಅದೇ ರೀತಿ ಅಂಡರ್ ೧೨ ಬೇಬಿಸ್ ಲೀಗ್, ಅಮ್ಮತ್ತಿ, ವೀರಾಜಪೇಟೆ, ಹಾಲುಗುಂದ, ಮರಗೋಡು, ಗೋಣಿಕೊಪ್ಪ ಭಾಗಗಳಲ್ಲಿ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆಯಲಿದೆ.

ವಿವಿಧ ಕ್ಲಬ್‌ಗಳಿಂದ ರಾಜ್ಯ, ರಾಷ್ಟçಮಟ್ಟದ ಫುಟ್ಬಾಲ್ ಪಂದ್ಯಾವಳಿ

ನವೆAಬರ್ ತಿಂಗಳ ೨೫ ರಿಂದ ೨೭ ರವರೆಗೆ ಅಮ್ಮತ್ತಿಯ ಚೌಡೇಶ್ವರಿ ಫುಟ್ಬಾಲ್ ಕ್ಲಬ್ ಆಶ್ರಯದಲ್ಲಿ ಅಮ್ಮತ್ತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟçಮಟ್ಟದ ಎರಡನೇ ವರ್ಷದ ಸೂಪರ್ ಫೈವ್ಸ್ ಕಾಲ್ಚೆಂಡು ಪಂದ್ಯಾವಳಿ ನಡೆಯಲಿದೆ.

ಡಿಸೆಂಬರ್ ೨ ರಿಂದ ೪ ರವರೆಗೆ ಯುನೈಟೆಡ್ ಕುಂಜಿಲ ತಂಡದ ವತಿಯಿಂದ ಕುಂಜಿಲದಲ್ಲಿ ಮೊದಲನೇ ವರ್ಷದ ಹೊನಲು ಬೆಳಕಿನ ರಾಷ್ಟçಮಟ್ಟದ ಸೂಪರ್ ಫೈವ್ಸ್ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ.

ಡಿಸೆಂಬರ್ ೮ ರಿಂದ ೧೧ ವರೆಗೆ ಮರಗೋಡುವಿನಲ್ಲಿ ವೈಷ್ಣವಿ ಎಫ್.ಸಿ. ವತಿಯಿಂದ ಏಳನೇ ವರ್ಷದ ಸೂಪರ್ ಸೆವೆನ್ಸ್ ‘ಹುತ್ತರಿ ಕಪ್’ ನಡೆಯಲಿದೆ.

ಡಿಸೆಂಬರ್ ೨೨ ರಿಂದ ೨೫ ವರೆಗೆ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಗಾಂಧಿ ಯೂತ್ ಕ್ಲಬ್ ಕಂಡಕರೆ ಆಶ್ರಯದಲ್ಲಿ ಮೊದಲನೇ ವರ್ಷದ ಸೂಪರ್ ನೈನ್ಸ್ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ.

ಅದೇ ರೀತಿ ವೀರಾಜಪೇಟೆ ಆಕ್ಸ್ಫರ್ಡ್ ಕ್ಲಬ್ ವತಿಯಿಂದ ಆಲ್ ಇಂಡಿಯಾ ಸೂಪರ್ ನೈನ್ಸ್ ಫುಟ್ಬಾಲ್ ಪಂದ್ಯಾವಳಿ ಡಿಸೆಂಬರ್ ೨೭ ರಿಂದ ೩೦ ರವರೆಗೆ ಸಂತ ಅನ್ನಮ್ಮ ಮೈದಾನದಲ್ಲಿ ನಡೆಯಲಿದೆ.

ಸ್ಕಿಪರ್ಸ್ ಎಫ್.ಸಿ ಪೊನ್ನಂಪೇಟೆ ಇವರ ಆಶ್ರಯದಲ್ಲಿ "ಶಿವಕುಮಾರ್" ಮೆಮೋರಿಯಲ್ ಕಾಲ್ಚೆಂಡು ಪಂದ್ಯಾವಳಿ ಡಿಸೆಂಬರ್ ೩೦ ಹಾಗೂ ೩೧ ರಂದು ಪೊನ್ನಂಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಹೊನಲು ಬೆಳಕಿನಲ್ಲಿ ನಡೆಯಲಿದೆ.

ಜನವರಿಯಲ್ಲಿ ಮಿಲನ್ಸ್ ಕಪ್

ಅಮ್ಮತ್ತಿಯ ಮಿಲನ್ಸ್ ಫುಟ್ಬಾಲ್ ಕ್ಲಬ್ ವತಿಯಿಂದ ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ರಾಜ್ಯ ಹಾಗೂ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ಮೊದಲನೇ ವರ್ಷದ ನಿಗದಿತ ೧೬ ತಂಡಗಳ ಸೂಪರ್ ಇಲೆವೆನ್ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ.

ಈ ಪಂದ್ಯಾವಳಿ ಜನವರಿ ೨೦ ರಿಂದ ೨೯ ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ. ೧,೫೦,೦೦೦ ಲಕ್ಷ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. ೧ ಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಮೈದಾನಲ್ಲಿ ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಗ್ಯಾಲರಿ ರೂಪದಲ್ಲಿ ಮೈದಾನವನ್ನು ಸಜ್ಜುಗೊಳಿಸಲಾಗುತ್ತಿದೆ. ಫೆಬ್ರವರಿ ತಿಂಗಳಲ್ಲಿ ಸಿ.ಸಿ.ಬಿ. ವೀರಾಜಪೇಟೆ ರಾಷ್ಟçಮಟ್ಟದ ಸೂಪರ್ ಫೈವ್ಸ್ ಹಾಗೂ ಗೋಣಿಕೊಪ್ಪಲಿನ ಚೆಲ್ಸಿ ಫುಟ್ಬಾಲ್ ಕ್ಲಬ್ ವತಿಯಿಂದ ಕೊಡಗು ಚಾಂಪಿಯನ್ ಲೀಗ್ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ. ಕೊಡಗಿನಲ್ಲಿ ಈ ಒಂದು ವರ್ಷ ಫುಟ್ಬಾಲ್ ಹಬ್ಬವೇ ನಡೆಯಲಿದೆ.

ಜಿಲ್ಲೆಯಲ್ಲಿ ಬೆಳೆದು ಬರುತ್ತಿರುವ ಯುವ ಫುಟ್ಬಾಲ್ ಪಟುಗಳಿಗೆ ಈ ಕ್ರೀಡಾ ಕೂಟಗಳು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಯಾಗಿದೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ