*ಗೋಣಿಕೊಪ್ಪ, ನ. ೧೫: ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯ ವಿವೇಕ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.

೨೦೨೨-೨೩ನೇ ಸಾಲಿನ ರಾಜ್ಯ ವಲಯ ವಿವೇಕ ಶಾಲಾ ಯೋಜನೆಯಡಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸಂಬAಧಿಸಿದAತೆ ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರೂ. ೧೩.೯೦ ಲಕ್ಷದ ಅನುದಾನದಲ್ಲಿ ಕೊಠಡಿ ನಿರ್ಮಾಣವಾಗಲಿದೆ.

ಪೊನ್ನಂಪೇಟೆ ತಾಲೂಕಿನಲ್ಲಿ ೧೦ ಶಾಲೆಗಳಿಗೆ ರೂ. ೧೮೮.೨೦ ಲಕ್ಷ ಅನುದಾನ ಮತ್ತು ವೀರಾಜಪೇಟೆ ತಾಲೂಕಿನಲ್ಲಿ ಆರು ಶಾಲೆಗಳಿಗೆ ರೂ. ೧೩೫.೧೦ ಲಕ್ಷ ವೆಚ್ಚದಲ್ಲಿ ಕೊಠಡಿ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದು ಶಾಸಕರು ಮಾಹಿತಿ ನೀಡಿದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೈತ್ರ ಬಿ. ಚೇತನ್, ಜಿಲ್ಲಾ ಶಿಕ್ಷಣಾ ಇಲಾಖೆ ಉಪನಿರ್ದೇಶಕ ವೇದಮೂರ್ತಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೆಳಗಿ, ಜಿ.ಪಂ. ಹಿರಿಯ ಇಂಜಿನಿಯರ್ ನಾಗೇಂದ್ರಪ್ಪ, ತಾಲೂಕು ಇಂಜಿನಿಯರ್ ಮಹದೇವ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಕೆ. ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸುರೇಂದ್ರ, ಗ್ರಾ.ಪಂ. ಸದಸ್ಯರುಗಳಾದ ಬಿ.ಎನ್. ಪ್ರಕಾಶ್, ರಾಮಕೃಷ್ಣ ಭಟ್, ರಾಜೇಶ್ ಕೆ., ವಿವೇಕ್ ರಾಯ್ಕರ್, ಸೌಮ್ಯ ಬಾಲು, ಜಿ.ಕೆ. ಗೀತಾ, ಮಂಜುಳಾ, ರತಿ ಅಚ್ಚಪ್ಪ, ಶಕ್ತಿ ಕೇಂದ್ರದ ಪ್ರಮುಖ್ ಸುರೇಶ್ ರೈ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಂತಿ ಕೆ.ಆರ್., ಶಿಕ್ಷಕಿಯರುಗಳಾದ ದಮಯಂತಿ, ಕಮಲ, ನಿರ್ಮಲ, ರಮಾನಂದ, ಬಿ.ಆರ್. ಸತೀಶ್, ಮಾತೃಶಕ್ತಿ ತಾಲೂಕು ಸಂಚಾಲಕಿ ಧನಲಕ್ಷಿö್ಮ ಇದ್ದರು.