ಸೋಮವಾರಪೇಟೆ, ನ. ೧೪: ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸಹ ಮತದಾನ ಮಾಡಲು ಅರ್ಹರಾಗಿದ್ದು, ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು. ಜವಾಬ್ದಾರಿಯಿಂದ ಮತ ಚಲಾಯಿಸಿ ಎಂದು ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತç ಸಹಾಯಕ ಪ್ರಾಧ್ಯಾಪಕರಾದ ಕೆ.ಹೆಚ್. ಧನಲಕ್ಷಿö್ಮ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು. ಮತದಾರರ ದಿನದ ಅಂಗವಾಗಿ ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ನಡೆದ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹದಿನೆಂಟು ವರ್ಷ ಪೂರೈಸಿರುವ ವಿದ್ಯಾರ್ಥಿಗಳು ಸಾರ್ವಜನಿಕರು ಇನ್ನೂ ಸಹ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಂಡಿರದಿದ್ದಲ್ಲಿ ಆದಷ್ಟು ಬೇಗನೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಮಾಡಿಸಿಕೊಳ್ಳುವAತೆ ತಿಳಿಸಿದರು. ವಿದ್ಯಾರ್ಥಿಗಳು ಕಾಲೇಜಿನ ಬ್ಯಾನರ್ ಹಿಡಿದು "ಮತದಾನ ನಮ್ಮ ಹಕ್ಕು", "ಮತದಾನ ಯುವ ಜನರ ಜವಾಬ್ದಾರಿ", ಮತದಾನ ಮಾಡಿ ಪ್ರಜಾಪ್ರಭುತ್ವ ಬಲಪಡಿಸಿ" ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ಯಡೂರು ಗ್ರಾಮದಲ್ಲಿ ಸಾಗಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹೆಚ್.ಎನ್. ರಾಜು, ಪ್ರಾಧ್ಯಾಪಕರುಗಳಾದ ಎಂ.ಎಸ್. ಶಿವಮೂರ್ತಿ, ಉಪನ್ಯಾಸಕರಾದ ಎಂ.ಎಸ್. ಸುನಿಲ್, ಬಿ.ಎಸ್. ದೇವರಾಜು, ಸಚಿನ್, ಸಿದ್ದೇಶ್, ಫೌಜಿಯಾ, ವಿಂದ್ಯಾ ಇದ್ದರು.