ಸೋಮವಾರಪೇಟೆ, ನ. ೧೪: ಚಿತ್ರದುರ್ಗದ ಬೃಹನ್ಮಠದಿಂದ ಸೋಮವಾರಪೇಟೆ ಪಟ್ಟಣದಲ್ಲಿರುವ ವಿರಕ್ತ ಮಠವನ್ನು ಕಣೆಗಣಿಸ ಲಾಗುತ್ತಿದ್ದು, ತಕ್ಷಣವೇ ಸ್ವಾಮೀಜಿ ಯನ್ನು ನೇಮಕ ಗೊಳಿಸದಿದ್ದರೆ ವೀರಶೈವ ಸಮಾಜ ದಿಂದಲೇ ಮಠಕ್ಕೆ ಸ್ವಾಮೀಜಿಯನ್ನು ನೇಮಿಸಿಕೊಳ್ಳ ಲಾಗುವುದು ಎಂದು ಸಮುದಾಯದ ಪ್ರಮುಖರು ಹೇಳಿದರು.
ಪಟ್ಟಣದ ವಿರಕ್ತ ಮಠದ ಆವರಣದಲ್ಲಿ ವಿರಕ್ತಮಠ, ವೀರಶೈವ ಸಮಾಜ, ಅಕ್ಕನ ಬಳಗ ಹಾಗೂ ಬಸವೇಶ್ವರ ಯುವಕ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಲಿಂಗೈಕ್ಯ ವಿಶ್ವೇಶ್ವರ ಸ್ವಾಮೀಜಿಯ ಮೂರನೇ ವರ್ಷದ ಸಂಸ್ಮರಣೋತ್ಸವ ಕಾರ್ಯ ಕ್ರಮದಲ್ಲಿ ಮಠಕ್ಕೆ ಸಂಬAಧಿಸಿದAತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಮಠಕ್ಕೆ ಶೀಘ್ರವಾಗಿ ಸ್ವಾಮೀಜಿ ನೇಮಕವಾಗಬೇಕು ಹಾಗೂ ಮಠದ ಅಭಿವೃದ್ದಿಯಾಗಬೇಕು. ಈ ಬಗ್ಗೆ ಯಾರೂ
(ಮೊದಲ ಪುಟದಿಂದ) ಸಹ ಗಮನ ಹರಿಸುತ್ತಿಲ್ಲವೆಂದು ಸೋಮವಾರಪೇಟೆ ವೀರಶೈವ ಸಮಾಜದ ಪ್ರಮುಖರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಚಿತ್ರದುರ್ಗ ಬೃಹನ್ಮಠದ ಉಸ್ತುವಾರಿ ಪೀಠಾಧ್ಯಕ್ಷರಾದ ಶ್ರೀ ಬಸವಪ್ರಭು ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ಸಮಾಜದ ಮುಖಂಡರು, ಕಳೆದ ಮೂರು ವರ್ಷಗಳಿಂದ ಮಠಕ್ಕೆ ಸ್ವಾಮೀಜಿ ನೇಮಿಸಿಲ್ಲ. ಮಠದ ಕಟ್ಟqದÀ ಕೆಲವು ಭಾಗ ಕುಸಿಯುತ್ತಿದೆ. ಈ ಬಗ್ಗೆಯೂ ಗಮನ ಹರಿಸುತ್ತಿಲ್ಲ ಎಂದರು.
ಈ ಸಂದರ್ಭ ಮಾತನಾಡಿದ ಬಸವಪ್ರಭು ಸ್ವಾಮೀಜಿ, ಈ ಬಗ್ಗೆ ನಮ್ಮ ಎಲ್ಲಾ ಶಾಖಾಮಠದ ಸ್ವಾಮೀಜಿಗಳು ಹಾಗೂ ಬೃಹನ್ಮಠದ ಸಲಹಾ ಸಮಿತಿಯೊಂದಿಗೆ ಚರ್ಚಿಸಿ ಆದಷ್ಟು ಬೇಗ ಸ್ವಾಮೀಜಿಯನ್ನು ನೇಮಿಸಲಾಗು ವುದು. ಇದರೊಂದಿಗೆ ಮಠದ ಅಭಿವೃದ್ದಿ ಕಾರ್ಯ ಕೈಗೊಳ್ಳಲಾಗು ವುದು ಎಂದು ತಿಳಿಸಿದರು.
ಮಠ ಮಾನ್ಯಗಳು ಸಮಾಜಕ್ಕೆ ಪೂರಕವಾದ ಕಾರ್ಯಗಳನ್ನು ಮಾಡಿದಾಗ ಸಮಾಜದ ಅಭಿವೃದ್ದಿ ಸಾಧ್ಯ. ನೂರಾರು ವರ್ಷಗಳ ಇತಿಹಾಸವಿರುವ ಈ ವಿರಕ್ತ ಮಠದಲ್ಲಿ ಲಿಂಗೈಕ್ಯ ವಿಶ್ವೇಶ್ವರ ಸ್ವಾಮೀಜಿ ತಮ್ಮ ಕಷ್ಟಗಳ ನಡುವೆಯೂ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅದನ್ನು ನಾವು ಸ್ಮರಿಸಬೇಕೆಂದರು.
ಧಾರ್ಮಿಕ ಸಮಾರಂಭದ ಅಧ್ಯಕ್ಷತೆಯನ್ನು ರಾವಂದೂರು ಮಠಾಧೀಶರಾದ ಮೋಕ್ಷಪತಿ ಸ್ವಾಮೀಜಿ ವಹಿಸಿದ್ದರು. ಕಾರ್ಯ ಕ್ರಮದ ವೇದಿಕೆಯಲ್ಲಿ ಕೊಡ್ಲಿಪೇಟೆ ಕಲ್ಲುಮಠದ ಮಹಾಂತ ಸ್ವಾಮೀಜಿ, ಕಲ್ಲಲ್ಲಿ ಮಠದ ರುದ್ರಮುನಿ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಬಸವಾಪಟ್ಟಣ ತೋಂಟದಾರ್ಯ ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ, ಚಿಕ್ಕಬಳ್ಳಾಪುರದ ನಿಷ್ಚಲದೇಶೀಕೆಂದ್ರ ಸ್ವಾಮೀಜಿ, ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ, ವೀರಶೈವ ಸಮಾಜದ ಯಜಮಾನ ಶಿವಕುಮಾರ್, ಶೆಟ್ರು ಮೃತ್ಯುಂಜಯ, ಕಾರ್ಯದರ್ಶಿ ನಾಗರಾಜ್, ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಂಸ್ಮರಣೋತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ವಿಶ್ವೇಶ್ವರ ಸ್ವಾಮೀಜಿಗಳ ಗದ್ದುಗೆಗೆ ಅರ್ಚಕರಾದ ವಿನೀತ್ ಹಿರೇಮಠ್ ಪೌರೋಹಿತ್ವದಲ್ಲಿ ರುದ್ರಾಭಿಷೇಕ, ಅಷ್ಟೋತ್ತರ ಸೇರಿದಂತೆ ಇತರ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.