ಗೋಣಿಕೊಪ್ಪ ವರದಿ, ನ. ೧೪: ಸರ್ಕಾರದಿಂದ ವಿಶೇಷಚೇತನರಿಗೆ ವಿವಿಧ ಸೌಲಭ್ಯಗಳನ್ನು ನೀಡಲು ಸಾಕಷ್ಟು ನಿಯಮ ಇದ್ದರೂ ಕೂಡ ಅಧಿಕಾರಿಗಳು ನಿರ್ಲಕ್ಷö್ಯ ತೋರುತ್ತಿದ್ದಾರೆ ಎಂದು ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕು ಸಮಿತಿ ಅಧ್ಯಕ್ಷ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಆರೋಪಿಸಿದರು.

ಪೊನ್ನಂಪೇಟೆಯಲ್ಲಿರುವ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ದಿವ್ಯಾಂಗ ಒಕ್ಕೂಟಕ್ಕೆ ಕಂಪ್ಯೂಟರ್ ಮತ್ತು ಪ್ರಿಂಟರ್ ಕೊಡುಗೆ ನೀಡಿ ಮಾತನಾಡಿದರು. ಬಡತನದೊಂದಿಗೆ ವಿಶೇಷಚೇತನರಿಗೆ ಕೂಡ ಸಾಕಷ್ಟು ಸವಲತ್ತು ಕಲ್ಪಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಅಧಿಕಾರಿಗಳು ಮನಸು ಮಾಡುತ್ತಿಲ್ಲ. ಸರ್ಕಾರದ ಸವಲತ್ತು ಪಡೆಯಲು ದಿವ್ಯಾಂಗ ಒಕ್ಕೂಟದ ಸದಸ್ಯರೊಂದಿಗೆ ಹೋರಾಟಕ್ಕೂ ಸಿದ್ದ ಎಂದು ಹೇಳಿದರು.

ಈ ಸಂದರ್ಭ ಕಾಂಗ್ರೆಸ್ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಮುಖಂಡರಾದ ಕೊಲ್ಲೀರ ಬೋಪಣ್ಣ, ಕುಲ್ಲಚಂಡ ಗಣಪತಿ, ನಾಮೇರ ಅಂಕಿತ್, ದಿವ್ಯಾಂಗ ಒಕ್ಕೂಟ ಅದ್ಯಕ್ಷ ಕಾರೇಟಿರ ಗಣೇಶ್, ಖಜಾಂಚಿ ಎಂ.ಕೆ. ಅನಿಲ್ ಇದ್ದರು.