ಸೋಮವಾರಪೇಟೆ, ನ. ೧೪: ಕಾಫಿ ಪಲ್ಪಿಂಗ್ ಘಟಕದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಕಾಫಿ ಬೆಳೆಗಾರರೋರ್ವರು ಮೃತಪಟ್ಟಿರುವ ಘಟನೆ ತಾಲೂಕಿನ ಕೋಟೆಯೂರು ಗ್ರಾಮದಲ್ಲಿ ನಡೆದಿದೆ.
ಕೋಟೆಯೂರು ಗ್ರಾಮದ ಕಾಫಿ ಬೆಳೆಗಾರರಾದ ವಿ.ಈ. ಲಕ್ಷಿö್ಮÃನಾರಾಯಣ (೬೨) ಅವರು ಇಂದು ಬೆಳಗ್ಗಿನ ಜಾವ ತಮ್ಮ ಕಾಫಿ ಪಲ್ಪಿಂಗ್ ಘಟಕದಲ್ಲಿ ತೆರಳುತ್ತಿದ್ದ ಸಂದರ್ಭ ಕಾಲು ಜಾರಿ ಬಿದ್ದಿದ್ದು ತಲೆಗೆ ತೀವ್ರತರದ ಪೆಟ್ಟಾಗಿತ್ತು.
ತಕ್ಷಣ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಲಕ್ಷಿö್ಮÃನಾರಾಯಣ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರಿ, ಪುತ್ರನನ್ನು ಅಗಲಿದ್ದಾರೆ. ಮೃತರು ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗು ಗೌಡಳ್ಳಿ ಪ್ರೌಢಶಾಲಾ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಸಹಕಾರ ಸಂಘ ಹಾಗೂ ವಿದ್ಯಾಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ, ಸಮಾಜ ಸೇವಕರಾಗಿದ್ದ ದಿ. ವಿ.ಟಿ. ಈರಪ್ಪ ಅವರ ಪುತ್ರರಾಗಿದ್ದಾರೆ.