ಸಿದ್ದಾಪುರ, ನ. ೧೩: ಗುಹ್ಯ ಗ್ರಾಮದ ತಾಯಿ-ಮಗ ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ನಿವಾಸಿ ಹಾಗೂ ಸಿದ್ದಾಪುರದ ಪ್ರೌಢಶಾಲೆಯ ನಿವೃತ್ತ ಅಂಟೆAಡರ್ ಕೃಷ್ಣಪ್ಪ ಎಂಬವರ ಪತ್ನಿ ಭಾಗ್ಯ (೬೦) ಹಾಗೂ ಅವರ ಮಗ ಶ್ರೀನಿವಾಸ (೩೩) ಎಂಬವರುಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಕಳೆದ ಕೆಲವು ತಿಂಗಳಿನಿAದ ಬೆಂಗಳೂರಿನಲ್ಲಿ ನೆಲೆಸಿದ್ದರು. ಕೃಷ್ಣಪ್ಪ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ಕೂಡ ಬೆಂಗಳೂರಿನಲ್ಲಿ ವಾಸವಾಗಿದ್ದರು. ಕೃಷ್ಣಪ್ಪ ಅವರ ಹಿರಿಯ ಮಗ ಶ್ರೀನಿವಾಸನಾಗಿದ್ದು, ಮತ್ತೋರ್ವ ಪುತ್ರಿಯನ್ನು ವಿವಾಹ ಮಾಡಿಕೊಡಲಾಗಿದೆ.

ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭಾಗ್ಯ ಮತ್ತು ಅವರ ಮಗನಾದ ಶ್ರೀನಿವಾಸ ಅವರ ಮೃತದೇಹಗಳನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.