ಮಡಿಕೇರಿ, ನ. ೧೨: ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಜಿಲ್ಲೆಯಲ್ಲಿ ಹೆಸರು ಮಾಡಿ ಹೋದಂತ ಸಾಹಿತಿಗಳ ಬದುಕು, ಬರಹದ ಕುರಿತು ತಿಂಗಳಿಗೊAದು ಉಪನ್ಯಾಸ ನಡೆಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ನುಡಿದರು. ಅವರು ಸರಕಾರಿ ಹಿರಿಯ ಪದವಿ ಕಾಲೇಜಿನ ಕನ್ನಡ ಸಂಘ ಏರ್ಪಡಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರಿದ ಅವರು ಕಾಲೇಜಿನ ಕನ್ನಡ ಸಂಘ ನಡೆಸುತ್ತಿರುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಡೆಸಿದ ಜಾನಪದ ನೃತ್ಯ ಮತ್ತು ಕನ್ನಡದ ಬಗ್ಗೆ ಮಾಹಿತಿ ಇರುವ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ, ಅವರಿಂದ ಉಪನ್ಯಾಸ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕನ್ನಡ ನಾಡು ನುಡಿ ಸಂಸ್ಕೃತಿ ಪರಂಪರೆ ಮತ್ತು ಕನ್ನಡ ನಾಡಿನ ಏಕೀಕರಣದ ಸಮಯದಲ್ಲಿ ಆಲೂರು ಮಡಿಕೇರಿ, ನ. ೧೨: ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಜಿಲ್ಲೆಯಲ್ಲಿ ಹೆಸರು ಮಾಡಿ ಹೋದಂತ ಸಾಹಿತಿಗಳ ಬದುಕು, ಬರಹದ ಕುರಿತು ತಿಂಗಳಿಗೊAದು ಉಪನ್ಯಾಸ ನಡೆಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ನುಡಿದರು. ಅವರು ಸರಕಾರಿ ಹಿರಿಯ ಪದವಿ ಕಾಲೇಜಿನ ಕನ್ನಡ ಸಂಘ ಏರ್ಪಡಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರಿದ ಅವರು ಕಾಲೇಜಿನ ಕನ್ನಡ ಸಂಘ ನಡೆಸುತ್ತಿರುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಡೆಸಿದ ಜಾನಪದ ನೃತ್ಯ ಮತ್ತು ಕನ್ನಡದ ಬಗ್ಗೆ ಮಾಹಿತಿ ಇರುವ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ, ಅವರಿಂದ ಉಪನ್ಯಾಸ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕನ್ನಡ ನಾಡು ನುಡಿ ಸಂಸ್ಕೃತಿ ಪರಂಪರೆ ಮತ್ತು ಕನ್ನಡ ನಾಡಿನ ಏಕೀಕರಣದ ಸಮಯದಲ್ಲಿ ಆಲೂರು ಸಾಹಿತಿಗಳು, ಕನ್ನಡ ಹೋರಾಟಗಾರರು ಕಂಡ ಕನಸು ಇಂದಿಗೂ ಸಾಫಲ್ಯ ಗೊಂಡಿಲ್ಲ, ಹುಯಿಲುಗೋಳ ನಾರಾಯಣರಾಯರು ಉದಯವಾಗಲಿ ಚೆಲುವ ಕನ್ನಡ ನಾಡು ಎನ್ನುವ ಕವನವನ್ನು ರಚಿಸಿದರೂ ಇಂದಿಗೂ ಸಂಪೂರ್ಣ ಕನ್ನಡ ನಾಡು ಉದಯ ವಾಗಲೇ ಇಲ್ಲ. ಎಲ್ಲರೂ ಸೇರಿ ಕನ್ನಡ ನಾಡಿನ ಉದಯದತ್ತ ಹೆಜ್ಜೆ ಇಡಬೇಕಾದ ದಿನಗಳು ನಮ್ಮ ಮುಂದಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ, ವಸಂತಕುಮಾರಿ ಮಾತನಾಡಿ, ಹಳ್ಳಿಗಾಡಿನಲ್ಲಿ ಕನ್ನಡ ಸತ್ತಿಲ್ಲ, ಹಳ್ಳಿ ಜನರ ಮನಸ್ಸು ಮತ್ತು ಮಾತಿನಲ್ಲಿ ಕನ್ನಡ ಇದೆ. ಆದರೆ ನಗರ ಪ್ರದೇಶಗಳಲ್ಲಿ ಒತ್ತಡದಿಂದ ಕನ್ನಡ ಭಾಷೆಯ ಉಪಯೋಗ ಕುಂಠಿತಗೊAಡಿದೆ. ಕನ್ನಡ ಅಳಿದು ಹೋಗಲು ಸಾಧ್ಯವೇ ಇಲ್ಲ. ನಾವು ಹೆಚ್ಚು ಹೆಚ್ಚು ಭಾಷೆಯ ಬಳಕೆ ಮಾಡಿದರೆ ಕನ್ನಡ ನಿರಂತರವಾಗಿ ಉಳಿಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಐಕ್ಯೂಎಸ್ಆರ್ ಸಂಚಾಲಕ ಡಾ. ಅನುಪಮಾ ಸಭಾಪತಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ಕನ್ನಡ ಜಾನಪದ ಸ್ವಾಗತ ನೃತ್ಯ ಏರ್ಪಡಿಸಲಾಗಿತ್ತು. ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ನಾಡಿನ ವಿವಿಧ ಹಾಡುಗಳನ್ನು ಒಂದೇ ಗುಂಪಿನಲ್ಲಿ ಹಾಡುವ ಮೂಲಕ ವಿಶೇಷ ಮನೋರಂಜನೆ ನೀಡಿದರು. ಕಾರ್ಯಕ್ರಮದ ಸಂಯೋಜಕರಾದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಕಾವೇರಿ ಪ್ರಕಾಶ್ ಅವರು ಎಲ್ಲರನ್ನು ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಕುಸುಮ ಅವರು ನಿರೂಪಿಸಿದರು. ಕನ್ನಡ ಉಪನ್ಯಾಸಕ ಮಿಥುನ್ ಹೆಚ್.ಆರ್. ಅವರು ವಂದಿಸಿದರು.