*ಗೋಣಿಕೊಪ್ಪ, ನ. ೧೨: ಪೊನ್ನಪ್ಪಸಂತೆ ನಲ್ಲೂರು ಬೆಸಗೂರು ರಸ್ತೆ ಡಾಂಬರೀಕರಣಕ್ಕೆ ರೂ. ೧ ಕೋಟಿ ಅನುದಾನದಲ್ಲಿ ಕಾಮಗಾರಿ ನಡೆಸಲು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.

ಬೆಸಗೂರು ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿದ ಶಾಸಕರು ರಸ್ತೆ ಡಾಂಬರೀಕರಣದ ಟೆಂಡರ್ ಪಡೆದುಕೊಂಡರೂ ಗುತ್ತಿಗೆದಾರ ಕೆಲಸ ನಿರ್ವಹಿಸದೇ ಇರುವುದರಿಂದ ಈ ಭಾಗದ ರಸ್ತೆಯೊಂದು ಡಾಂಬರೀ ಕರಣವಾಗದೇ ಹಾಗೆಯೇ ಉಳಿದು ಕೊಂಡಿದೆ. ಈ ಕಾರಣವನ್ನು ಗಂಭೀರ ವಾಗಿ ಪರಿಗಣಿಸಿ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸುವುದರೊಂದಿಗೆ ಮರು ಟೆಂಡರ್ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ಸದಸ್ಯ ಆದೇಂಗಡ ವಿನು ಚಂಗಪ್ಪ, ತೀತರಮಾಡ ಕುಶಾಲಪ್ಪ, ಮಹಿಳಾ ಮೋರ್ಚಾ ತಾಲೂಕು ಅಧ್ಯಕ್ಷೆ ಕವಿತಾ ಬೋಜಪ್ಪ, ಗುತ್ತಿಗೆದಾರ ನಾಮೇರ ನವೀನ್, ಪುಳ್ಳಂಗಡ ನಟೇಶ್, ಬಿಜೆಪಿ ಪ್ರಕೋಷ್ಟ ಸಂಚಾಲಕ ಪುಳ್ಳಂಗಡ ಪವನ್, ಶಕ್ತಿ ಕೇಂದ್ರ ಪ್ರಮುಖ್ ಬಲ್ಯಮಾಡ ಸಂಪತ್, ಬೂತ್ ಅಧ್ಯಕ್ಷ ಪೊಡಂಗಡ ಜಗದೀಶ್, ಪಕ್ಷದ ಕಾರ್ಯಕರ್ತರು ಹಾಗೂ ಊರಿನ ಹಿರಿಯರು ಇದ್ದರು.