ಕುಶಾಲನಗರ, ನ. ೧೨: ಕುಶಾಲನಗರ ಗಣಪತಿ ದೇವಾಲಯದ ೧೦೨ನೇ ವರ್ಷದ ರಥೋತ್ಸವ ಭಕ್ತಿಭಾವದಿಂದ ನಡೆಯಿತು.

ಮೋಡ ಮುಸುಕಿದ ವಾತಾವರಣದ ನಡುವೆ ಮಧ್ಯಾಹ್ನ ೧೨ ಗಂಟೆಗೆ ಕೃಷ್ಣ ಪಕ್ಷದಲ್ಲ್ಲಿ ನಡೆದ ರಥೋತ್ಸವದ ಅಂಗವಾಗಿ ಗಣಪತಿ ದೇವಾಲಯದಲ್ಲಿ ಬೆಳಗ್ಗೆಯಿಂದ ದೇವರಿಗೆ ಪಂಚಾಮೃತ ಅಭಿಷೇಕ, ಏಕವಾರ, ರುದ್ರಾಭಿಷೇಕ, ಪುಷ್ಪಾಲಂಕಾರ ನಂತರ ರಥಪೂಜೆ, ರಥಬಲಿ ಪೂಜಾ ಕಾರ್ಯಕ್ರಮಗಳು ಜರುಗಿದವು. ದೇವಾಲಯದ ಪ್ರಧಾನ ಅರ್ಚಕರಾದ ಆರ್.ಕೆ. ನಾಗೇಂದ್ರ ನೇತೃತ್ವದಲ್ಲಿ

(ಮೊದಲ ಪುಟದಿಂದ) ರಾಘವೇಂದ್ರ ಭಟ್ ಮತ್ತು ಅರ್ಚಕರ ತಂಡದಿAದ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭ ಅರ್ಚಕರು ಗೋ ಪೂಜೆ ನೆರವೇರಿಸಿದರು.

ರಥೋತ್ಸವದಲ್ಲಿ ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ನೆರೆಯ ಜಿಲ್ಲೆಗಳ ಸಾವಿರಾರು ಭಕ್ತರು ಪಾಲ್ಗೊಂಡರು. ದೇವಾಲಯ ದಿಂದ ರಥಬೀದಿಯ ಉದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈಡುಗಾಯಿ ಒಡೆದು ಹರಕೆ ತೀರಿಸುತ್ತಿದ್ದ ದೃಶ್ಯ ಗೋಚರಿಸಿತು. ರಥಬೀದಿಯ ವರ್ತಕರಿಂದ, ಭಕ್ತಾದಿ ಗಳಿಗೆ ಪುಳಿಯೊಗರೆ, ತಂಪು ಪಾನೀಯ, ಸಿಹಿ ವಿತರಣೆ ನಡೆಯಿತು.

ಮೆರವಣಿಗೆ ಪ್ರಾರಂಭದಲ್ಲಿ ರಥದ ಮುಂಭಾಗದಲ್ಲಿ ಅಯ್ಯಪ್ಪ ವ್ರತಧಾರಿ ಗಳು ಅಯ್ಯಪ್ಪ ಸ್ಮರಣೆಯೊಂದಿಗೆ ದೇವರ ಕೀರ್ತನೆ ಹಾಡಿದರು.

ಗಣಪತಿ ರಥೋತ್ಸವ ಅನ್ನ ಸಂತರ್ಪಣೆ ಸಮಿತಿ ವತಿಯಿಂದ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಸ್ಥಳೀಯ ಮಾರುಕಟ್ಟೆ ರಸ್ತೆ ಗಾಯತ್ರಿ ಕಲ್ಯಾಣ ಮಂಟಪ ಆವರಣದಲ್ಲಿ ಅನ್ನಸಂತರ್ಪಣೆ ನಡೆಯಿತು. ದೇವಾಲಯ ಸಮಿತಿಯ ಪ್ರಮುಖರಾದ ಎಂ.ಕೆ. ದಿನೇಶ್, ಕೆ.ಎನ್. ಸುರೇಶ್ ನೇತೃತ್ವದ ತಂಡ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯ ನೆರವೇರಿಸಿದರು.

-ಚಂದ್ರಮೋಹನ್