(ಕಳೆದ ಸಂಚಿಕೆಯಿAದ) ಇಲ್ಲಿಯವರೆಗೆ ನಡೆಸಿದ ಇಪ್ಪತ್ತು ವರ್ಷಗಳ ಕೊಡವ ಅಂತರ್ ಕುಟುಂಬ ಹಾಕಿ ಹಬ್ಬದ ಖರ್ಚಿನ ಬಗೆಗಿನ ವಿಶ್ಲೇಷಣೆ ಎರಡು ವಿಷಯಗಳು ಗಣನೆಗೆ ಬರುತ್ತವೆ.
(೧) ಆಟದ ಮೈದಾನದ ತಯಾರಿ. ೨. ಆಟದ ಮೈದಾನದ ಮೇಲ್ಮೆöÊ ಯನ್ನು ಪಂದ್ಯಾಟ ಆಡಬಹುದಾದ ಉತ್ತಮ ಗುಣಮಟ್ಟಕ್ಕೆ ಸಮತಟ್ಟು ಮಾಡಿ ಎಲ್ಲಾ ಮ್ಯಾಚ್ಗಳು ಮುಗಿಯುವವರೆಗೆ ಅದರ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು. ಇದರ ಮಧ್ಯದಲ್ಲಿ ಮಳೆ ಬಂದರೆ ಪುನಃ ಮೇಲ್ಮೆöÊಯನ್ನು ಅದೇ ಗುಣಮಟ್ಟಕ್ಕೆ ತರುವುದು. ಮೇಲ್ಮೆöÊಯಲ್ಲಿ ನೀರು ನಿಂತು ಆಟವನ್ನು ಮುಂದೂಡುವುದು. ಇದರಿಂದ ಶೆಡ್ಯೂಲ್ ಯೋಜನೆಯಂತೆ ನಡೆಸಲಾಗದೆ ಮಂದೂಡಿ ಹೆಚ್ಚ್ಚು ದಿನಗಳನ್ನು ತೆಗೆದುಕೊಳ್ಳುವುದು. ಇವೆಲ್ಲವೂ ಅತೀವ ಪರಿಶ್ರಮ, ವಿಪರೀತ ಖರ್ಚಾಗುವುದು.
೧೯೯೯ರಲ್ಲಿ ಕಾಕೋಟುಪರಂಬುವಿನಲ್ಲಿ ನಡೆದ ಬಲ್ಲಚಂಡ ಕಪ್ ಫೈನಲ್ನಂದು ಭಾರೀ ಮಳೆಯಿಂದಾಗಿ ಫೈನಲ್ಸ್ ಆಡಿಸಲು ಸಾಧ್ಯವಾಗದೆ ಎರಡೂ ಫೈನಲಿಸ್ಟ್ ಟೀಮ್ಗಳನ್ನು ಜಂಟಿ ವಿಜೇತರು ಎಂದು ಘೋಷಿಸಿ ಪುರಸ್ಕರಿಸಿದರು. ಕ್ರೀಡಾಸಕ್ತರ ಉತ್ಸಾಹ ಮಳೆ ನೀರಿನಲ್ಲಿ ಕೊಚ್ಚಿಹೋಯಿತು. ಹಬ್ಬ ನಡೆಸಿದ ವಿವಿಧ ಕುಟುಂಬದವರ ಪ್ರಕಾರ ಆಟದ ಮೈದಾನದ ತಯಾರಿ ಮತ್ತು ಪಂದ್ಯಾಟ ಮುಗಿಯುವವರೆಗೆ ಗುಣಮಟ್ಟ ಕಾಪಾಡಲು ಸಾಧಾರಣ ೩೦ ಲಕ್ಷಗಳವರೆಗೂ ಖರ್ಚಾದುದನ್ನು ಸ್ಮರಿಸುತ್ತಾರೆ.
ಪ್ರಸ್ತುತ ಸಮಯದಲ್ಲಿ ಎಲ್ಲಾ ರಾಜ್ಯಗಳ ರಾಷ್ಟಿçÃಯ ಮತ್ತು ಅಂತರ್ರಾಷ್ಟಿçÃಯ ಮಟ್ಟದ ಹಾಕಿ ಪಂದ್ಯಾಟಗಳು ಕೃತಕಹುಲ್ಲು ಹಾಸಿನ ಮೇಲೆಯೇ ಆಡಿಸಲ್ಪಡುತ್ತಿವೆ. ಚಿಕ್ಕಮಕ್ಕಳಿಗೂ ಇಂತಹ ಕೃತಕ ಹುಲ್ಲು ಹಾಸಿನ ಮೇಲೆ ಆಡುವ ಉತ್ಸುಕತೆ ಅಭಿಲಾಷೆ ಇರುತ್ತದೆ. ಅಂಥದ್ದರಲ್ಲಿ ಕೊಡವ ಅಂತರ್ ಕುಟುಂಬ ಹಾಕಿ ಪಂದ್ಯಾಟಗಳನ್ನು ಮಣ್ಣು ಮತ್ತು ಮರಳು ಹಾಸಿನ ಮೈದಾನಗಳಲ್ಲೇ ಇಲ್ಲಿಯವರೆಗೆ ಬೇರೆ-ಬೇರೆ ಕುಟುಂಬ ಗಳು ಬೇರೆ-ಬೇರೆ ಸ್ಥಳಗಳಲ್ಲಿ ಹಾಕಿ ಪಂದ್ಯಾಟಗಳನ್ನು ಆಡಿಸಿರುವರು. ಕೃತಕ ಹುಲ್ಲಿನ ಮೈದಾನದಲ್ಲಿ ಆಡಿದ ರಾಷ್ಟಿçÃಯ, ಅಂತರ್ರಾಷ್ಟಿçÃಯ ಆಟಗಾರರು ಮಣ್ಣು ಮಿಶ್ರಿತ ಮರಳು ಮೈದಾನದಲ್ಲಿ ಹೇಗೆ ತಮ್ಮ ಸ್ವಾಭಾವಿಕ ಆಟದ ವೇಗ, ವೈಖರಿ, ನೈಪುಣ್ಯತೆ ಚಾಕಚಕ್ಯತೆಯ ಆಟವನ್ನು ಪ್ರದರ್ಶಿಸಲು ಸಾದ್ಯವಾಗಬಲ್ಲುದು. ಕೃತಕ ಹುಲ್ಲಿನ ಹಾಸಿನ ಮೇಲಿನ ಆಟವನ್ನು ಸುಲಲಿತವಾಗಿ ಅಂಪೈರಿAಗ್ ಮಾಡುವ ಅಂಪರ್ಸ್ ಈ ಮಣ್ಣಿನ ಹಾಸಿನ ಮೇಲೆ ಆಡುವ ಆಟವನ್ನು ಅತ್ಯಂತ ಪರಿಶ್ರಮದಿಂದ ನಡೆಸ ಬೇಕಾಗುತ್ತದೆ. ಪ್ರೇಕ್ಷಕರೂ ಕೂಡ ಕೃತಕ ಹುಲ್ಲಿನ ಮೇಲಿನ ಆಟವನ್ನೇ ಅಪೇಕ್ಷಿಸುತ್ತಾರೆ. ತಪ್ಪಿದ್ದಲ್ಲಿ ನಿರಾಶರಾಗಿ ಮುಂದಿನ ಆಟಗಳಲ್ಲಿ ಗ್ಯಾಲರಿಯಲ್ಲಿ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗಬಹುದು.
ಇದಕ್ಕೆಲ್ಲಾ ಪರಿಹಾರವೆಂದರೆ ಜಿಲ್ಲೆಯ ಎಲ್ಲಾ ಹಾಕಿ ಪಂದ್ಯಾಟಗಳನ್ನು ಒಂದೇ ಕಡೆ ಕೃತಕ ಹುಲ್ಲು ಹಾಸಿರುವ, ಸಮೀಪವಿರುವ ಎರಡು ಮೈದಾನಗಳನ್ನು ತಯಾರು ಮಾಡುವುದು. ಇದರಿಂದ ವರ್ಷದ ಯಾವುದೇ ಸಮಯದಲ್ಲಿ ಶೆಕೆ, ಮಳೆ, ಚಳಿ, ಧೂಳಿನ ಗೊಡವೆ ಇಲ್ಲದೇ ಯಾವುದೇ ಟೂರ್ನಮೆಂಟ್ನ್ನು ಶೆಡ್ಯೂಲ್ ಪ್ರಕಾರ ಪಂದ್ಯಾಟವನ್ನು ಆಡಿಸಬಹುದು. ಟರ್ಫ್ಗಳ ಸಂರಕ್ಷಣೆ ಮತ್ತು ನಿರ್ವಹಣೆ ಅತೀ ಸುಲಭ. ಆಟಕ್ಕೆ ಮೊದಲು ಸೆಕ್ಷನ್ ಸ್ವೀಪರ್ಅನ್ನು ಓಡಿಸಿ ಧೂಳು, ಕಸಕಡ್ಡಿಗಳನ್ನು ತೆಗೆದುಹಾಕಬಹುದು. ನಂತರ ೧೫೦೦ ಗ್ಯಾಲನ್ ಅಂದರೆ ಸುಮಾರು ೬೫೦೦ ಲೀಟರ್ ನೀರನ್ನು ಸಿಂಪಡಿಸಿ ಮೇಲ್ಮೆöÊಯ ೪೦ಈ ನಷ್ಟು ಹೆಚ್ಚಿರುವ ಉಷ್ಣತೆಯನ್ನು ತಣಿಸಬೇಕು, ಇಲ್ಲದಿದ್ದರೆ ಕಾಲಿನ ‘‘ಮೀನಖಂಡ’’ ಸ್ನಾಯು ೧೮ ನಿಮಿಷದ ಆಟದಲ್ಲೇ ಆಯಾಸಗೊಳ್ಳು ವುದು ಎಂದು ರೀಸರ್ಚ್ ತಿಳಿಸಿರುವುದು. ನೀರು ಚಿಮುಕಿಸಿದ ನಂತರ ಸಿಂಥಟಿಕ್ ರ್ಪೇಸ್ ಹಚ್ಚಹಸುರಾಗಿ ನಯನಮನೋಹರವಾಗಿರುತ್ತದೆ.
ಕೊಡಗಿನಲ್ಲಿ ಹಾಲಿ ಎರಡು ಅಕ್ಕ-ಪಕ್ಕದಲ್ಲಿ ರಚನೆಯಾಗಬಲ್ಲ, ಕೃತಕÀ ಹುಲ್ಲುಹಾಸಿನ ಮೈದಾನಗಳನ್ನು ರಚಿಸಲು ದಕ್ಷಿಣ ಕೊಡಗಿನ ಬಾಳುಗೋಡುವಿನಲ್ಲಿ ವಿಪುಲ ಸ್ಥಳಾವಕಾಶದಿಂದ ಸಾಧ್ಯವಾಗಬಲ್ಲದು, ಇವುಗಳ ತಯಾರಿಕೆಗೆ ೮ ಕೋಟಿಗಳಷ್ಟು ಹಣ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಕೊಡಗಿನ ಹಾಕಿ ಕ್ಲಬ್ಗಳಿಗೆ ಎಲ್ಲಾ ಕೊಡಗಿನ ಒಳಗೆ ಇರುವ ಮತ್ತು ಹೊರಗಿನ ಕೊಡವ ಸಮಾಜಗಳಿಗೆ, ಕೊಡಗಿನ ಎಲ್ಲಾ ಹಾಲಿ ಮಾಜಿ ಆಂತರ್ರಾಷ್ಟಿçÃಯ ಹಾಕಿ ಆಟಗಾರರಿಗೆ, ಕೊಡಗಿನ ಕಾಫಿ ಪ್ಲಾಂರ್ಸ್ಗಳಿಗೆ ಕೊಡವ ಹಾಕಿ ಅಕಾಡೆಮಿಗೆ ಹಾಕಿ ಕೂರ್ಗ್ ಸಂಸ್ಥೆಗೆ, ವಿದೇಶದಲ್ಲಿರುವ ಕೊಡವ ಸಮಾಜಗಳಿಗೆ, ರಾಜ್ಯ ಸರ್ಕಾರಕ್ಕೆ ಮನಮುಟ್ಟುವಂತ ಒಂದು ವಿಜ್ಞಾಪನಾ ಪತ್ರ ಕಳುಹಿಸಿದರೆ ಆ ಸಂಸ್ಥೆಗಳೂ, ವ್ಯಕ್ತಿಗಳೂ ಪ್ರೋತ್ಸಾಹಿಸಬಹುದು. ಅಕ್ಕ-ಪಕ್ಕದ ಕೃತಕಹುಲ್ಲು ಹಾಸಿನ ಮೈದಾನಗಳ ಕನಸು ನನಸಾಗಬಲ್ಲದು.
ಪ್ರೇಕ್ಷಕರ ಗ್ಯಾಲರಿ ನಿರ್ಮಾಣ: ಕೊಡಗಿನಲ್ಲಿ ಕೆಲವು ಹಾಕಿ ಪಂದ್ಯಾಟಗಳು ಪೂರ್ವಾಹ್ನ ಮತ್ತು ಅಪರಾಹ್ನ ಎರಡೂ ಸಮಯಗಳಲ್ಲಿ ನಡೆಯುತ್ತಿರುತ್ತವೆ ಮತ್ತು ಒಂದು ತಿಂಗಳವರೆಗೂ ನಡೆಯುತ್ತಿರುತ್ತವೆ. ಕ್ರೀಡಾಭಿಮಾನಿಗಳು ಇವುಗಳನ್ನು ವೀಕ್ಷಿಸಲು ಆಸನಗಳ ವ್ಯವಸ್ಥೆಯನ್ನು ಅಪೇಕ್ಷಿಸುವರು. ಆಟದ ಆಯೋಜಕರು ಕೂಡ ಈ ವ್ಯವಸ್ಥೆಯನ್ನು ಮಾಡಬಯಸುವರು. ಉದಾಹರಣೆಗೆ ಕೊಡವರ ಅಂತರ್ ಕುಟುಂಬಗಳ ಹಾಕಿ ಪಂದ್ಯಾಟಗಳು ಪೂರ್ವಾಹ್ನ ಮತ್ತು ಅಪರಾಹ್ನಗಳಲ್ಲೂ ನಡೆಸಲ್ಪಟ್ಟು ಒಂದು ತಿಂಗಳವರೆಗೂ ನಡೆಸಲ್ಪಡುತ್ತವೆ. ಪ್ರತಿವರ್ಷ ಆಟ ಆಡಿಸುವ ಮೈದಾನಗಳ ಸುತ್ತಲೂ ಪ್ರೇಕ್ಷಕರ ಗ್ಯಾಲರಿಗಳನ್ನು ರಚಿಸುವರು. ಪ್ರಾರಂಭಿಕ ವರ್ಷಗಳಲ್ಲಿ ಅಡಿಕೆ ಮರದ ಕಂಬಗಳನ್ನು ನೆಟ್ಟು ಅದರದ್ದೇ ಹಾಳೆಯನ್ನು ಹಾಸಿ ವೇದಿಕೆ ತಯಾರು ಮಾಡುತ್ತಿದ್ದರು. ನಂತರ ಮರದ ಕಂಬಗಳನ್ನು ನೆಟ್ಟು ಮರದ ಹಲಗೆಗಳನ್ನು ಹಾಸಿ ಗ್ಯಾಲರಿ ಮಾಡಿದರು. ಈಗೀಗ ಕಬ್ಬಿಣದ ಪೈಪ್ಗಳನ್ನು ನೆಟ್ಟು ಹಲಗೆಗಳಿಂದ ಗ್ಯಾಲರಿ ರಚಿಸುತ್ತಾರೆ. ಪಂದ್ಯಾಟಗಳ ಮಧ್ಯದಲ್ಲಿ ಮಳೆ ಅಥವಾ ವಿಪರೀತ ಬಿಸಿಲಿನ ಝಳವಿದ್ದರೆ ಕೂರುವ ಗ್ಯಾಲರಿಗಳು ಒದ್ದೆಯಾಗುವುವು ಅಥವಾ ಬಿಸಿಲಿಗೆ ಕೊಡೆಗಳನ್ನು ಉಪಯೋಗಿಸ ಬೇಕಾಗಬಹುದು. ಪ್ರತಿವರ್ಷ ಪಂದ್ಯಾಟಗಳು ಮುಗಿದ ಕೂಡಲೇ ಗ್ಯಾಲರಿ ರಚನೆಯ ಗುತ್ತಿಗೆದಾರರು ಹಣ ಪಡೆದು ಎಲ್ಲವನ್ನೂ ಬಿಚ್ಚಿ ತೆಗೆದುಕೊಂಡು ಹೋಗುವರು. ಹಾಕಿ ಸಂಘಟಿಸಿದ ಕುಟುಂಬದ ಹೇಳಿಕೆಯಂತೆ ಗ್ಯಾಲರಿಯ ಕಂಟ್ರಾö್ಯಕ್ಟ್ ಸಾಧಾರಣ ೨೫-೩೦ ಲಕ್ಷಗಳಷ್ಟಾಗುವುದೆಂದು ತಿಳಿಸಿರುವರು.
ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು. ಬಾಳುಗೋಡುವಿನಲ್ಲಿ ಅಥವಾ ಕೊಡಗಿನ ಬೇರೆ ಯಾವುದೇ ಸ್ಥಳದಲ್ಲಿ ಎರಡು ಕೃತಕ ಹುಲ್ಲುಹಾಸಿನ ಮೈದಾನಗಳನ್ನು ಅಕ್ಕ-ಪಕ್ಕದಲ್ಲಿ ತಯಾರಿಸುವುದು. ಇಪ್ಪತ್ತು ವರ್ಷ ಹಾಕಿ ಹಬ್ಬ ನಡೆಸಿದ ಇಪ್ಪತ್ತು ಕುಟುಂಬಗಳು ಹಬ್ಬವನ್ನು ಆಚರಿಸಿದರ ಜ್ಞಾಪಕಾರ್ಥವಾಗಿ ಒಂದೇ ಅಗಲದ ಮತ್ತು ಒಂದೇ ಎತ್ತರದ ೫ ಮೆಟ್ಟಿಲುಗಳ ಗ್ಯಾಲರಿ ಮಾಡಿ ತಮ್ಮ ತಮ್ಮ ಗ್ಯಾಲರಿಗಳಿಗೆ ತಮ್ಮ ತಮ್ಮ ಕುಟುಂಬದ ಹೆಸರಿನ ಪೆವಿಲಿಯನ್ ಅಥವಾ ಸ್ಟಾö್ಯಂಡ್ ಎಂದು ಹೆಸರಿಸಬಹುದು. ಉದಾ: ಪಾಂಡAಡ ಸ್ಟಾö್ಯಂಡ್ ಬಲ್ಲಚಂಡ ಸ್ಟಾö್ಯಂಡ್, ಕುಲ್ಲೇಟಿರ ಸ್ಟಾö್ಯಂಡ್ ಇತ್ಯಾದಿ. ಇಲ್ಲಿಯವರೆಗೆ ಇಪ್ಪತ್ತು ಕುಟುಂಬಗಳ ಸ್ಟಾö್ಯಂಡ್ಗಳು ತಯಾರಾಗಿ ಬಹಳಷ್ಟು ಮೈದಾನದ ಸುತ್ತ ಸುತ್ತುವರಿಯುತ್ತಿದ್ದವು. ಹಾಗೆಯೇ ವರ್ಷಗಳು ಕಳೆದಂತೆ ಬೇರೆ ಬೇರೆ ಕುಟುಂಬಗಳ ಹೆಸರಿನ ಸ್ಟಾö್ಯಂಡ್ ಬರುವುವು. ಇದೇ ರೀತಿ ಕೊಡವ ಸಮಾಜಗಳು ಭಾರತದಲ್ಲಿರುವ ಮತ್ತು ಹೊರದೇಶದಲ್ಲಿರುವ ಕೊಡವ ಒಕ್ಕೂಟಗಳು ಕೂಡ ಪೆವಿಲಿಯನ್ ಅಥವಾ ಸ್ಟಾö್ಯಂಡ್ ರಚಿಸಲು ಅವಕಾಶ ಒದಗಿಸಿದರೆ ಎರಡೂ ಮೈದಾನಗಳ ಸುತ್ತ ಆದಷ್ಟು ಬೇಗನೆ ಪೆವಿಲಿಯನ್ ಮತ್ತು ಸ್ಟಾö್ಯಂಡ್ಗಳು ರಚಿಸಲ್ಪಡುವ ಅವಕಾಶವಿರುವುದು.
ಹಾಕಿ ಉತ್ಸವದ ಮತ್ತೊಂದು ಸಾಧಾರಣ ಖರ್ಚಿನ ಬಾಪ್ತು ಅಂದರೆ ಹಾಕಿ ಸ್ಟಿಕ್, ಶಿನ್ಗಾರ್ಡ್ ಮತ್ತು ಗೋಲ್ಕೀಪರ್ ಕಿಟ್ಗಳನ್ನು ಹೊಂದಿಸಿ ಕೊಳ್ಳುವುದು. ಹಾಕಿ ಸ್ಟಿಕ್ ಒಂದಕ್ಕೆ ೨೫೦೦ ರೂಪಾಯಿವರೆಗಿದೆ. ಒಂದು ಟೀಮ್ಗೆ ಸ್ಟಿಕ್ಗೆನೇ ಸುಮಾರು ೪೦,೦೦೦ ರೂಪಾಯಿಗಳಷ್ಟಾಗು ವುದು. ಗೋಲ್ಕೀಪರ್ ಕಿಟ್ಗೆ ಸುಮಾರು ೪೦,೦೦೦ ರೂಪಾಯಿಗಳು ಎಂದು ತಿಳಿದು ಬಂದಿದೆ. ಒಂದು ಟೀಂ ಆಡಬೇಕಿದ್ದರೆ ಇಷ್ಟು ಹಣ ಹೊಂದಿಸಿಕೊಳ್ಳಬೇಕಾಗುತ್ತದೆ. ಒಂದೋ ಪ್ರಾಯೋಜಕತ್ವ ಮಾಡಿಸಿಕೊಳ್ಳಬೇಕು ಇಲ್ಲಾಂದ್ರೆ ತಮ್ಮ ಸ್ವಂತ ಜವಾಬ್ದಾರಿಯಿಂದ ಎರವಲು ಪಡೆದುಕೊಳ್ಳಬೇಕು. ಹಾಗಾಗಿ ನೈಪುಣ್ಯ ಇರುವ ಕೆಲವು ಕುಟುಂಬಗಳು ಎಂಟ್ರಿ ಕಳುಹಿಸಲು ಸಾಧ್ಯವಾಗದೇ ಇರಬಹುದು. ಅದಕ್ಕಾಗಿಯೇ ಕೆಲವು ಅಂತರ್ರಾಷ್ಟಿçÃಯ ಪಂದ್ಯಾಟಗಳನ್ನು ನಡೆಸುವ ವೇಳೆ ಮೈದಾನದಲ್ಲಿ ಎರಡು ತೆರೆದ ಪೆಟ್ಟಿಗೆಗಳಲ್ಲಿ ನಿಯಮಬದ್ಧವಾದ ಹಾಕಿ ಸ್ಟಿಕ್ ಮತ್ತು ಗೋಲ್ಕೀಪರ್ ಕಿಟ್ಗಳನ್ನು ಒಂದೊAದು ಟೀಮ್ಗೆ ಇಟ್ಟಿರುತ್ತಾರೆ. ಸ್ಟಿಕ್ ಮತ್ತು ಕಿಟ್ ಬೇಕಾದ ತಂಡದವರು ನಿಯಮ ಬದ್ಧವಾಗಿ ಅವುಗಳನ್ನು ಪಡೆದು ಮ್ಯಾಚ್ ಮುಗಿದ ನಂತರ ಹಿಂದಿರುಗಿಸುವರು. ಈ ಸೌಲಭ್ಯದಿಂದಲೂ ಆಡಲು ಬಯಸುವ ಪಂಗಡಕ್ಕೆ ಭಾಗವಹಿಸಲು ಒತ್ತಾಸೆ ಕೊಟ್ಟಂತಾಗಿ ಭಾಗವಹಿಸುವ ತಂಡಗಳ ಸಂಖ್ಯೆಯೂ ಹೆಚ್ಚಾಗಬಲ್ಲದು.
ಈ ಮೇಲಿನ ಮೂರು ಖರ್ಚಿನ ಬಾಪ್ತ್ತುಗಳನ್ನು ಪರಿಹರಿಸಿಕೊಂಡರೆ ಯಾವುದೇ ಹಾಕಿ ಹಬ್ಬ ನಡೆಸಲು ಇಚ್ಛಿಸುವ ಕುಟುಂಬದ ಖರ್ಚಿನ ಶೇ. ೮೦ನ್ನು ಪೂರೈಸಿದಂತಾಗಿ ಇನ್ನುಳಿದ ೨೦% ಖರ್ಚನ್ನು ಪ್ರಸ್ತುತ ಪರಿಸ್ಥಿಯಲ್ಲಿ ಯಾವುದೇ ಕುಟುಂಬ ನಿಭಾಯಿಸುವ ಸಾಮರ್ಥ್ಯ ಹೊಂದಿರುವ ಸಾಧ್ಯತೆ ಇದೆ.
ಮೈದಾನಗಳ ತಯಾರಿಯ ಒತ್ತಡ, ವೀಕ್ಷಕರ ಗ್ಯಾಲರಿಯ ನಿರ್ಮಾಣದ ಒತ್ತಡ, ಆಟದ ಉಪಕರಣಗಳನ್ನು ಹೊಂದಿಸಿಕೊಳ್ಳುವ ಒತ್ತಡ, ಪರಿಶ್ರಮದ ಒತ್ತಡಗಳಿಲ್ಲದೆ, ಕುಟುಂಬಗಳು ಹಬ್ಬ ನಡೆಸಲು ಉತ್ಸುಕರಾಗಿರುವರು. ಇದರಿಂದ ಕೊಡವ ಅಂತರ್ ಕುಟುಂಬಗಳ ಹಾಕಿ ಉತ್ಸವವು ನಿರಂತರವಾಗಿ ನಡೆಸಲು ಸಾಧ್ಯವಾಗಬಹುದು.
ಕೊಡಗಿನಲ್ಲಿ ಈ ಹಾಕಿ ಹಬ್ಬದ ಜೊತೆಯಲ್ಲಿ ಬೇರೆ-ಬೇರೆ ಸಂಘಟನೆಗಳು, ಬೇರೆ-ಬೇರೆ ಉದ್ದೇಶಗಳಿಗೆ ಬೇರೆ-ಬೇರೆ ಸ್ಥಳಗಳಲ್ಲಿ ಹಾಕಿ ಪಂದ್ಯಾಟಗಳನ್ನು ನಡೆಸುತ್ತಿರುವರು. ಅವುಗಳು ಕೊಡಗಿನ ಯುವ ಅದರಲ್ಲೂ ಶಾಲಾ ಮಟ್ಟದ ಹಾಕಿ ಆಟಗಾರರಿಗೆ ಪ್ರತಿಭೆ ಬೆಳೆಸಲು ಅವಕಾಶಗಳ ಕೊರತೆ ಕಾಣುತ್ತದೆಂದು ಕ್ರೀಡಾಭಿಮಾನಿ ಪೋಷಕರ ಕಳಕಳಿಯ ಅಭಿಮತ. ಈ ಕೊರತೆಯನ್ನು ಕೊಡವ ಹಾಕಿ ಅಕಾಡೆಮಿ ಯವರು ತಕ್ಕುದಾದ ಯೋಜನೆಯನ್ನು ರೂಪಿಸಿ ಪರಿಹರಿಸಬಹುದು.
ಕೊಡಗಿನ ಯುವ ಆಟಗಾರರು ಸತತ ವೈಜ್ಞಾನಿಕವಾದ ಆಧುನಿಕ ರೀತಿಯ ತರಬೇತಿ ಹಾಗೂ ನಿರಂತರ ಅಭ್ಯಾಸದಿಂದ ಗುಣಮಟ್ಟದ ಆಟಗಾರರಾಗಬಲ್ಲರು. ಏಕೆಂದರೆ ಅವರಲ್ಲಿ ಚಿಕ್ಕಂದಿನಿAದಲೇ ಕ್ರೀಡೆ ರಕ್ತಗತವಾಗಿದೆ. ಆದ್ದರಿಂದ ಕೊಡಗು ಜಿಲ್ಲೆ ಭಾರತಕ್ಕೆ ಅತ್ಯಂತ ಹೆಚ್ಚಿನ ಗುಣಮಟ್ಟದ ಹಾಕಿ ಆಟಗಾರರನ್ನು ನಿರಂತರವಾಗಿ ಒದಗಿಸಬಲ್ಲದು.
ಅಂತಿಮವಾಗಿ ಕೊಡಗಿನ ಎಲ್ಲಾ ಕ್ರೀಡಾಸಕ್ತರಿಗೆ ಹಾಕಿ ಕ್ರೀಡೆಯ ಆಟಗಾರರಿಗೆ, ಕ್ರೀಡಾಭಿಮಾನಿಗಳಿಗೆ ಹಾಗೂ ಕ್ರೀಡಾ ಪೋಷಕರಿಗೆ ಅವರ ಪ್ರಯತ್ನಕ್ಕೆ ಶ್ರೀ ಈಶ್ವರ ಇಗ್ಗುತ್ತಪ್ಪ, ಕಾವೇರಮ್ಮ ತಾಯಿಯ ಆಶೀರ್ವಾದ ಸದಾ ಅವರ ಮೇಲಿರಲಿ ಎಂದು ಪ್ರಾರ್ಥಿಸುವ. (ಮುಗಿಯಿತು.)
-ಕಲ್ಯಾಟಂಡ ಡಾ|| ಚಿಣ್ಣಪ್ಪ,
ಕುಂಜಿಲ ಕಕ್ಕಬೆ,
ಮೊ : ೯೫೩೫೦೬೮೭೬೬