ಮಡಿಕೇರಿ, ನ. ೧೨ : ಮೂರ್ನಾಡು ಕಿಗ್ಗಾಲು ಗ್ರಾಮದ ತೋಟದಲ್ಲಿ ಕಾಡು ಕೋಣ ಪ್ರತ್ಯಕ್ಷವಾಗಿದ್ದು ಬೆಳೆಗಾರ ರಂಜಿತ್ ಕಿಗ್ಗಾಲ್ ಅವರು ತಮ್ಮ ಫೋನ್ ಕ್ಯಾಮರಾದಲ್ಲಿ ಅದರ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಕಳೆದ ೨ ದಿನಗಳ ಹಿಂದೆ ರಾತ್ರಿ ಸುಮಾರು ೮ ಗಂಟೆಗೆ ತೋಟದೊಳಗೆ ಸಂಚರಿಸುತ್ತಿದ್ದಾಗ ಸುಮಾರು ೫೦ ಅಡಿ ಅಂತರದಲ್ಲಿ ಕೋಣ ಪ್ರತ್ಯಕ್ಷವಾಗಿದ್ದು, ರಂಜಿತ್ ಅವರು ಅದರ ಚಿತ್ರ ಸೆರೆಹಿಡಿದಿದ್ದಾರೆ. ಈ ವ್ಯಾಪ್ತಿಯಲ್ಲಿ ೨ ಕೋಣಗಳಿದ್ದು ತೋಟದ ಬೇಲಿಯ ಸುತ್ತ ಬೆಳೆಸಲಾದ ಗಿಡಗಳನ್ನು ಸೇವಿಸುತ್ತಿವೆಯಾದರೂ ಬೆಳೆಗೆ ಯಾವುದೇ ಹಾನಿ ಮಾಡುತ್ತಿಲ್ಲ. ಆದರೆ ತೋಟದ ಕಾರ್ಮಿಕರು ಕೆಲಸಕ್ಕೆ ತೆರಳಲು ಹಿಂಜರಿಕೆ ಹಾಕುತ್ತಿರುವುದಾಗಿ ತಿಳಿಸಿದ್ದಾರೆ .