ನಾಪೋಕ್ಲು: ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ವಿವಿಧ ಶಾಲೆಗಳಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು. ಇಲ್ಲಿನ ಕಶಾಲೆಯ ವಿದ್ಯಾರ್ಥಿಗಳು ಪಟ್ಟಣದಲ್ಲಿ ಮತದಾನದ ಜಾಗೃತಿ ಜಾಥಾವನ್ನು ನಡೆಸಿದರು.

ಈ ಸಂದರ್ಭ ನಾಮಫಲಕವನ್ನು ಹಿಡಿದು ಘೋಷಣೆಗಳನ್ನು ಕೂಗಿ ರ್ನಾಟಕ ಪಬ್ಲಿಕ್ ಮತದಾನದ ಅಗತ್ಯತೆಯ ಮಹತ್ವವನ್ನು ಸಾರಿದರು. ಇದೇ ರೀತಿ ಹೋಬಳಿ ವ್ಯಾಪ್ತಿಯ ವಿವಿಧ ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಸುಂಟಿಕೊಪ್ಪ: ಸರಕಾರಿ ಪ್ರೌಢಶಾಲೆ, ಸುಂಟಿಕೊಪ್ಪ ಮತದಾರರ ಸಾಕ್ಷರತೆ ಸಂಘ ಮತ್ತು ರಾಷ್ಟಿçÃಯ ಸೇವಾ ಯೋಜನೆ ಸಂಯುಕ್ತ ಆಶ್ರಯದಲ್ಲಿ ಮತದಾನ ಕುರಿತು ಜಾಗೃತಿ ಜಾಥಾವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.

ಸುಂಟಿಕೊಪ್ಪ ನಾಡ ಕಚೇರಿಯ ಉಪತಹಶೀಲ್ದಾರ್ ಶಿವಪ್ಪ ಅವರು ಸರಕಾರಿ ಪ್ರೌಢಶಾಲೆಯಲ್ಲಿ ಮತದಾನ ಹಕ್ಕು ಜಾಗೃತಿ ಮತ್ತು ಆರಿವು ಮೂಡಿಸುವ ಜಾಥಾಕ್ಕೆ ಬ್ಯಾಂಡ್ ಬಡಿಯುವ ಮೂಲಕ ಚಾಲನೆ ನೀಡಿದರು. ಶಾಲಾ ವಿದ್ಯಾರ್ಥಿಗಳು ವಿವಿಧ ಭಿತ್ತಿಪತ್ರ ಗಳನ್ನು ಹಿಡಿದು ಪಟ್ಟಣದಾದ್ಯಂತ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಈ ಸಂದರ್ಭ ಪ್ರೌಢಶಾಲೆಯ ಉಪಪ್ರಾಂಶುಪಾಲ ಬಾಲಕೃಷ್ಣ, ಕಂದಾಯ ಪರವೀಕ್ಷಕ ಪ್ರಶಾಂತ್, ಶಿಕ್ಷಕ ಸಿ.ಟಿ. ಸೋಮಶೇಖರ್, ಎನ್. ಪ್ರಕಾಶ್, ಎಸ್.ಆರ್. ಚಿತ್ರ, ಎಂ.ಪಿ. ಲಿಯೋನ, ಹೆಚ್.ಎನ್. ಜಯಶ್ರೀ ಹಾಗೂ ವಿದ್ಯಾರ್ಥಿಗಳು ಇದ್ದರು.ಆಲೂರು-ಸಿದ್ದಾಪುರ ಸರಕಾರಿ ಪ್ರೌಢಶಾಲೆ: ಸಮೀಪದ ಆಲೂರು-ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಮತದಾರನ ಜಾಗೃತಿ ಅಭಿಯಾನ ದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆ ಆವರಣದಿಂದ ಹೊರಟು ಆಲೂರು-ಸಿದ್ದಾಪುರ ಜಂಕ್ಷನ್‌ವರೆಗೆ ಮೆರವಣಿಗೆಯಲ್ಲಿ ಸಾಗಿ ಮತದಾನದ ಮಹತ್ವದ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ಮತ್ತು ಸ್ಲೋಗನ್‌ಗಳನ್ನು ಹಿಡಿದು ಜನರನ್ನು ಜಾಗೃತಿಗೊಳಿಸಿದರು.

ಮತದಾನ ಜಾಗೃತಿ ಅಭಿಯಾನದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಎ.ಸಿ. ಶೃತಿ, ಶಿಕ್ಷಕರಾದ ಜವರಯ್ಯ, ಮಂಜಪ್ಪ, ಎಸ್. ಭಾಗ್ಯಜ್ಯೋತಿ, ಧರ್ಮಪ್ಪ, ಸಹನಾ, ಕಾಂತ, ತೇಜಸ್ವಿನಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಮುಳ್ಳೂರು: ಸಮೀಪದ ನಿಡ್ತ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಜಾಥಾದಲ್ಲಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲಾ ಆವರಣದಿಂದ ಹೊರಟು ಗ್ರಾಮದ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಚುನಾವಣೆಯಲ್ಲಿ ಮತದಾರರು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸುವಂತೆ ಜನರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಿದರು.

ಜಾಥಾ ಕಾರ್ಯಕ್ರಮದಲ್ಲಿ ಶಾಲೆಯ ಪ್ರಬಾರ ಮುಖ್ಯ ಶಿಕ್ಷಕಿ ಎಂ.ವಿ. ರೂಪ, ಶಿಕ್ಷಕರಾದ ಪ್ರಿಯಾಂಕ, ಡಿ.ಎಂ. ಮಹಾದೇವಿ, ಇಂದ್ರಾಣಿ, ಗೀತಾ, ಅಭಿಷೇಕ್ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.