ಚೆಟ್ಟಳ್ಳಿ, ನ. ೧೨: ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವತಿಯಿಂದ ಬುಡಕಟ್ಟು ಉಪಯೋಜನೆಯಡಿಯಲ್ಲಿ ಸುಸ್ಥಿರ ಬೆಳೆ ಉತ್ಪಾದನೆ ಕುರಿತು ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮ ಮತ್ತು ಸಂಪನ್ಮೂಲ ವಿತರಣೆಯನ್ನು ಇತ್ತೀಚೆಗೆ ವಾಲ್ನೂರು ಸಮೀಪದ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲೆಯ ಪರಿಶಿಷ್ಟ ಪಂಗಡದವರನ್ನು ಗುರುತಿಸಿ ವಿವಿಧ ತರಬೇತಿಗಳೊಂದಿಗೆ ಸಾಮರ್ಥ್ಯ ಬಲವರ್ಧನೆ ಮಾಡುವುದು ಹಾಗೂ ಸಂಪನ್ಮೂಲಗಳನ್ನು ವಿತರಿಸಿ ಅವರ ಆದಾಯ ಹೆಚ್ಚಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಚೆಟ್ಟಳ್ಳಿಯ ತೋಟಗಾರಿಕಾ ವಿಜ್ಞಾನಿ ಮಧುರವರು ಮಾತನಾಡಿ, ಸ್ಥಳೀಯರಿಗೆ ಹಾಗೂ ಮಕ್ಕಳಿಗೆ ಸವಾಲಾಗಿರುವ ಅಪೌಷ್ಟಿಕತೆ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಹಣ್ಣುಗಳ ಪಾತ್ರ ಬಹುಮುಖ್ಯ ಎಂದರು. ಜೊತೆಗೆ ಟ್ರೆöÊಕೋಡರ್ಮದ ಮಹತ್ವವನ್ನೂ ತಿಳಿಸಿದರು. ಚೆಟ್ಟಳ್ಳಿ ಕೇಂದ್ರದ ಮುಖ್ಯಸ್ಥ ಡಾ. ರಾಜೇಂದಿರನ್ ವಿವಿಧ ಹಣ್ಣುಗಳÀ ಮಹತ್ವದ ಬಗ್ಗೆ ತಿಳಿಸಿದರು. ಹಣ್ಣಿನ ಬೆಳೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೇಂದ್ರಕ್ಕೆ ಭೇಟಿ ನೀಡಿ ಸಲಹೆ ಪಡೆದುಕೊಳ್ಳÀಬಹುದು ಎಂದರು. ಕೇಂದ್ರದ ಕೀಟಶಾಸ್ತç ವಿಜ್ಞಾನಿ ಡಾ. ರಾಣಿ ಪ್ರಮುಖ ಕೀಟಗಳ ಬಗ್ಗೆ ಹಾಗೂ ಅದರ ನಿರ್ವಹಣೆ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಫಲಾನುಭವಿಗಳಿಗೆ ೧೦ ಬಗೆಯ ೩೦ ಹಣ್ಣಿನ ಗಿಡಗಳು ಹಾಗೂ ೨ ಕೆ.ಜಿ. ಟ್ರೆöÊಕೋಡೆರ್ಮಾವನ್ನು ವಿತರಿಸಲಾಯಿತು. ವಾಲ್ನೂರು, ತ್ಯಾಗತ್ತೂರು, ಬಾಳೆಗುಂಡಿ, ಮೀನುಕೊಲ್ಲಿ, ಹೊಸಪಟ್ಟಣ, ಮಾವಿನಹಳ್ಳ, ಕಟ್ಟೆಹಾಡಿ, ಕಬ್ಬಿನಗದ್ದೆ, ದೊಡ್ಡಬೆಟ್ಟಗೇರಿ, ಯಡವನಾಡು, ಸಜ್ಜಾಲಿ ಹಾಡಿಗಳಿಂದ ೧೦೦ಕ್ಕೂ ಹೆಚ್ಚು ಗಿರಿಜನ ಫಲಾನುಭವಿಗಳು ಆಗಮಿಸಿ, ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮುವ್‌ಮೆಂಟ್‌ನ ಇತರ ಸಿಬ್ಬಂದಿ ವರ್ಗದವರೂ ಸೇರಿದಂತೆ ವಾಲ್ನೂರು ಗ್ರಾಮ ಪಂಚಾಯಿತಿ ಸದಸ್ಯರೂ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಸ್ವಾಮಿ ವಿವೇಕಾನಂದ ಯೂತ್ ಮುವ್‌ಮೆಂಟ್‌ನ ಸಿಬ್ಬಂದಿ ಸುನಿತಾ ಸ್ವಾಗತಿಸಿದರು. ವಾಲ್ನೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಪ್ರಾರ್ಥನಾ ಗೀತೆಯನ್ನು ಹಾಡಿದರು.