ಕೂಡಿಗೆ, ನ. ೧೩: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ ೫೪ನೇ ವಾರ್ಷಿಕ ರಥೋತ್ಸವವು ತಾ ೨೯ ರಂದು ನಡೆಯಲಿದೆ.
ರಥೋತ್ಸವದ ಹಿಂದಿನ ದಿನ ತಾ. ೨೮ ರಂದು ಬೆಳಿಗ್ಗೆ ಪುಣ್ಯಾಹ ಪಂಚಗವ್ಯಶುದ್ಧಿ, ಅಂಕುರಾರ್ಪಣ, ಧ್ವಜಾರೋಹಣ, ಗಣಹೋಮ ಹಾಗೂ ಸುಬ್ರಹ್ಮಣ್ಯ ಹೋಮ ನಡೆದು ೧೨ ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ , ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಅಂದು ಸಂಜೆ ೭.೩೦ ಕ್ಕೆ ರಾಜ ಬೀದಿಯಲ್ಲಿ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿಯ ಪ್ರಕಟಣೆ ತಿಳಿಸಿದೆ.