ಕುಶಾಲನಗರದಲ್ಲಿ ಜರುಗಿದ ಗಣಪತಿ ದೇವರ ವಾರ್ಷಿಕ ರಥೋತ್ಸವದಲ್ಲಿ ೫ ಲಕ್ಷ ಬೆಲೆಯ ಜೋಡು ಎತ್ತುಗಳು ಭಕ್ತರ ಗಮನ ಸೆಳೆದವು.
ಹೆಬ್ಬಾಲೆ ಬಳಿಯ ಹಳಗೋಟೆ ಗ್ರಾಮದ ಜಗದೀಶ್ ಎಂಬವರು ಸಾಕಿರುವ ನೀಳವಾದ ಕೊಂಬುಗಳಿರುವ ರುದ್ರ ಹಾಗೂ ಚಿನ್ನು ಎಂಬ ಹೆಸರಿನ ಜೋಡಿ ಎತ್ತುಗಳು ನೋಡುಗರ ಗಮನ ಸೆಳೆದವು. ಈ ಪೈಕಿ ಅನೇಕ ಮಂದಿ ಈ ಅಲಂಕೃತ ಎತ್ತುಗಳ ಮುಂಬದಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು. ಕಳೆದ ಹಲವು ವರ್ಷಗಳಿಂದ ರಥೋತ್ಸವದ ಮುಂಬದಿ ಈ ಅಲಂಕೃತ ಎತ್ತುಗಳ ಮೆರವಣಿಗೆ ನಡೆಯುತ್ತದೆ.
ಜಗದೀಶ್ ಮನರಂಜನೆಗೆAದೇ ಸಲಹಿರುವ ಈ ಜೋಡಿ ಎತ್ತುಗಳನ್ನು ವಾಹನದಲ್ಲಿ ತಂದು ಗಣಪತಿ ದೇವಾಲಯದಿಂದ ರಥಬೀದಿಯ ಬಸವೇಶ್ವರ ದೇವಾಲಯದವರೆಗೂ ಮೆರವಣಿಗೆ ನಡೆಸಿ ಬಳಿಕ ಮನೆಗೆ ಕೊಂಡೊಯ್ಯುತ್ತಾರೆ.
ಗಮನ ಸೆಳೆದ ೫ ಲಕ್ಷ ಬೆಲೆಯ ಎತ್ತುಗಳು