ರೂ. ೩೨ ಕೋಟಿ ಮೌಲ್ಯದ ಚಿನ್ನ ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು

ಮುಂಬೈ, ನ. ೧೩: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ರೂ. ೩೨ ಕೋಟಿ ಮೌಲ್ಯದ ೬೧ ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದು, ಇದು ವಿಮಾನ ನಿಲ್ದಾಣದಲ್ಲಿ ಒಂದೇ ದಿನದಲ್ಲಿ ವಶಪಡಿಸಿಕೊಂಡ ಅತ್ಯಧಿಕ ಮೌಲ್ಯವಾಗಿದೆ ಎನ್ನಲಾಗಿದೆ. ಶುಕ್ರವಾರ ನಡೆದ ದಾಳಿಯಲ್ಲಿ ಐವರು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿ ಕನಿಷ್ಟ ಏಳು ಪ್ರಯಾಣಿಕರನ್ನು ಬಂಧಿಸಲಾಗಿದೆ. ಮೊದಲ ಕಾರ್ಯಾಚರಣೆ ಯಲ್ಲಿ, ತಾಂಜಾನಿಯಾದಿAದ ಹಿಂದಿರುಗಿದ ನಾಲ್ವರು ಭಾರತೀಯರು ೧ ಕೆ.ಜಿ. ಚಿನ್ನದ ತುಂಡುಗಳನ್ನು ಸಾಗಿಸುತ್ತಿರುವುದು ಕಂಡುಬAದಿದೆ. ಅವುಗಳನ್ನು ಬಹು ಪಾಕೆಟ್‌ಗಳೊಂದಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬೆಲ್ಟ್ಗಳಲ್ಲಿ ಮರೆಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರು ತಮ್ಮ ಸೊಂಟದಲ್ಲಿ ಧರಿಸಿದ್ದ ಬೆಲ್ಟ್ಗಳಿಂದ ೨೮.೧೭ ಕೋಟಿ ರೂಪಾಯಿ ಮೌಲ್ಯದ ೫೩ ಕೆ.ಜಿ. ಯುಎಇ ನಿರ್ಮಿತ ಚಿನ್ನದ ತುಂಡುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಯಾಣದ ಸಮಯದಲ್ಲಿ ದೋಹಾ ವಿಮಾನ ನಿಲ್ದಾಣದಲ್ಲಿ ಸುಡಾನ್ ಪ್ರಜೆಯೊಬ್ಬರು ಪ್ರಯಾಣಿಕರಿಗೆ ಬೆಲ್ಟ್ಗಳನ್ನು ಹಸ್ತಾಂತರಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ. ನಾಲ್ವರು ಪ್ರಯಾಣಿಕರನ್ನು ಬಂಧಿಸಿ ನ್ಯಾಯಾಲಯವು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅದೇ ರೀತಿ ದುಬೈನಿಂದ ಬಂದಿದ್ದ ಮೂವರು ಪ್ರಯಾಣಿಕರಿಂದ ಕಸ್ಟಮ್ಸ್ ಅಧಿಕಾರಿಗಳು ೩.೮೮ ಕೋಟಿ ಮೌಲ್ಯದ ೮ ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು. ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಚಿನ್ನದ ಪುಡಿಯನ್ನು ಮೇಣದ ರೂಪದಲ್ಲಿ ಸಾಗಿಸುತ್ತಿದ್ದರು. ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದರು.

ಆಸಿಯಾನ್ ಶೃಂಗಸಭೆ: ಜೈಶಂಕರ್-ಬ್ಲಿAಕನ್ ಭೇಟಿ

ಕಾಂಬೋಡಿಯಾ, ನ. ೧೩: ಭಾರತ - ಆಸಿಯಾನ್ ರಾಷ್ಟçಗಳ(ಆಗ್ನೇಯ ಏಷ್ಯಾ ರಾಷ್ಟçಗಳ ಒಕ್ಕೂಟ) ಶೃಂಗಸಭೆಯಲ್ಲಿ ಭಾಗವಹಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಭಾನುವಾರ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರನ್ನು ಭೇಟಿ ಮಾಡಿದರು. ಬ್ಲಿಂಕನ್ ಮತ್ತು ಜೈಶಂಕರ್ ಅವರು ಭಾರತ - ಅಮೆರಿಕ ದ್ವಿಪಕ್ಷೀಯ ಸಂಬAಧಗಳ ಬಗ್ಗೆ, ಉಕ್ರೇನ್ ಸಂಘರ್ಷದ ಬಗ್ಗೆ, ಇಂಧನ ಸಮಸ್ಯೆಗಳು, ಜಿ ೨೦ ಮತ್ತು ಇಂಡೋ-ಪೆಸಿಫಿಕ್‌ನ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ಕಾಂಬೋಡಿಯಾ ರಾಜಧಾನಿಯಲ್ಲಿ ನಡೆಯುತ್ತಿರುವ ಭಾರತ - ಆಸಿಯಾನ್ ಶೃಂಗಸಭೆಯಲ್ಲಿ ಜೈಶಂಕರ್ ಹಾಗೂ ಉಪ ರಾಷ್ಟçಪತಿ ಜಗದೀಪ್ ಧನಕರ್ ಅವರು ಹಾಗೂ ಭಾರತದ ಉನ್ನತಮಟ್ಟದ ಅಧಿಕಾರಿಗಳ ನಿಯೋಗ ಭಾಗವಹಿಸಿದೆ. ನವೆಂಬರ್ ೧೫ ರಿಂದ ೧೬ ರವರೆಗೆ ಇಂಡೋನೇಷ್ಯಾದ ಬಾಲಿಯಲ್ಲಿ ಜಿ -೨೦ ಶೃಂಗಸಭೆ ನಡೆಯಲಿದ್ದು, ಈ ವೇಳೆ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಅದಕ್ಕು ಮುನ್ನ ಜೈಶಂಕರ್ ಮತ್ತು ಬ್ಲಿಂಕೆನ್ ಭೇಟಿ ಮಾಡಿ ಉಭಯ ದೇಶಗಳ ದ್ವಿಪಕ್ಷೀಯ ಸಂಬAಧದ ಬಗ್ಗೆ ಚರ್ಚಿಸಿದ್ದಾರೆ. ಉಕ್ರೇನ್, ಇಂಡೋ-ಪೆಸಿಫಿಕ್, ಇಂಧನ, ಉ೨೦ ಮತ್ತು ದ್ವಿಪಕ್ಷೀಯ ಸಂಬAಧಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ" ಎಂದು ಜೈಶಂಕರ್ ಅವರು ಟ್ವೀಟ್ ಮಾಡಿದ್ದಾರೆ.

ಇಂಗ್ಲೆAಡ್ ಮುಂದೆ ಮುಗ್ಗರಿಸಿದ ಪಾಕ್

ಮೆಲ್ಬೋರ್ನ್, ನ. ೧೩: ಐಸಿಸಿ ಟಿ-೨೦ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆAಡ್ ಭರ್ಜರಿ ಗೆಲುವಿನ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು ಇಂಗ್ಲೆAಡ್ ಎರಡನೇ ಬಾರಿಗೆ ಟಿ-೨೦ ವಿಶ್ವಕಪ್ ಚಾಂಪಿಯನ್ ಆಗಿದೆ. ಮೆಲ್ಬರ್ನ್ನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆAಡ್ ತಂಡ ೫ ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಫೈನಲ್ ಪಂದ್ಯದಲ್ಲಿ ಇಂಗ್ಲೆAಡ್ ತಂಡದ ನಾಯಕ ಜಾಸ್ ಬಟ್ಲರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನಕ್ಕೆ ಆಂಗ್ಲ ಬೌಲರ್‌ಗಳ ಕಾಡಿದರು. ಪಾಕ್ ಪರ ಆರಂಭಿಕರಾಗಿ ಕಣಕ್ಕಿಳಿದ ಮೊಹಮ್ಮದ್ ರಿಜ್ವಾನ್ ೧೫ ಹಾಗೂ ಬಾಬರ್ ಅಜಾಂ ೩೨ ರನ್ ಪೇರಿಸಿದರು. ಮೊಹಮ್ಮದ್ ಹ್ಯಾರಿಸ್ ೮, ಶಾನ್ ಮಸೂದ್ ೩೮, ಶದಾಬ್ ಖಾನ್ ೨೦ ರನ್ ಪೇರಿಸಿದ್ದು ಆ ಮೂಲಕ ಪಾಕಿಸ್ತಾನ ೮ ವಿಕೆಟ್ ನಷ್ಟಕ್ಕೆ ೧೩೭ ರನ್ ಪೇರಿಸಿದ್ದು ಇಂಗ್ಲೆAಡ್ ತಂಡಕ್ಕೆ ೧೩೮ ರನ್‌ಗಳ ಗುರಿ ನೀಡಿತ್ತು. ಇನ್ನು ಪಾಕ್ ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆAಡ್ ಪರ ಬೆನ್ ಸ್ಟೋಕ್ಸ್ ೫೨ ರನ್‌ಗಳ ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇನ್ನುಳಿದಂತೆ ಇಂಗ್ಲೆAಡ್ ಪರ ಜೋಸ್ ಬಟ್ಲರ್ ೨೬, ಸಾಲ್ಟ್ ೧೦, ಹ್ಯಾರಿ ಬ್ರೋಕ್ ೨೦, ಮೋಯಿನ್ ಅಲಿ ೧೯ ಹಾಗೂ ಲಿವಿಂಗ್ಸ್ಟೋನ್ ಅಜೇಯ ೧ ರನ್ ಗಳಿಸಿದ್ದಾರೆ. ಪಾಕ್ ಪರ ಬೌಲಿಂಗ್‌ನಲ್ಲಿ ಹಾರಿಸ್ ರೌಫ್ ಮೊಹಮ್ಮದ್ ವಾಸೀಂ ತಲಾ ೨ ವಿಕೆಟ್, ಶಾಹೀನ್ ಶಾ ಆಫ್ರಿದಿ, ಶಬಾದ್ ಖಾನ್ ತಲಾ ೧ ವಿಕೆಟ್ ಪಡೆದಿದ್ದಾರೆ.

ರಾಷ್ಟçಪತಿಗಳ ಕುರಿತು ವಿವಾದಾತ್ಮಕ ಹೇಳಿ: ಕ್ಷಮೆಯಾಚಿಸಿದ ಪಶ್ಚಿಮ ಬಂಗಾಳ ಸಚಿವ

ನಂದಿಗ್ರಾಮ, ನ. ೧೩: ರಾಷ್ಟçಪತಿ ದ್ರೌಪದಿ ಮುರ್ಮು ಅವರ ಕುರಿತು ಅವಹೇಳನಾಕಾರಿ ಹೇಳಿಕೆ ನೀಡುವ ಮೂಲಕ ವಿವಾದದಲ್ಲಿ ಸಿಲುಕಿದ್ದ ಪಶ್ಚಿಮ ಬಂಗಾಳ ಸಚಿವ ಅಖಿಲ್ ಗಿರಿ ಅವರು ವ್ಯಾಪಕ ಟೀಕೆಯ ನಂತರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಗಿರಿ ಅವರ ಹೇಳಿಕೆಯ ವೀಡಿಯೋ ಕ್ಲಿಪ್ ವೈರಲ್ ಆದ ನಂತರ ಪ್ರತಿಪಕ್ಷ ಬಿಜೆಪಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅವರ ಪಕ್ಷ ಬುಡಕಟ್ಟು ವಿರೋಧಿ ಎಂದು ಟೀಕಿಸಿತ್ತು. ಗೌರವಾನ್ವಿತ ರಾಷ್ಟçಪತಿಗಳಿಗೆ ಅಗೌರವ ತೋರುವ ಯಾವುದೇ ಉದ್ದೇಶ ನನಗೆ ಇರಲಿಲ್ಲ. ಬಿಜೆಪಿ ನಾಯಕರು ನನ್ನ ಮೇಲೆ ವಾಗ್ದಾಳಿ ನಡೆಸಿದ್ದಕ್ಕೆ ಉತ್ತರ ನೀಡುತ್ತಿದ್ದೇನೆ. ಇಂತಹ ಹೇಳಿಕೆ ನೀಡಿದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ನಮ್ಮ ದೇಶದ ರಾಷ್ಟçಪತಿಗಳ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಅಖಿಲ್ ಗಿರಿ ಹೇಳಿದ್ದಾರೆ. ಶುಕ್ರವಾರ ನಂದಿಗ್ರಾಮದ ಹಳ್ಳಿಯೊಂದರಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಗಿರಿ, ನಾನು ನೋಡಲು ಚೆನ್ನಾಗಿಲ್ಲ ಎಂದು ಅವರು (ಬಿಜೆಪಿ) ಹೇಳುತ್ತಾರೆ. ಯಾರನ್ನೂ ಅವರ ಬಾಹ್ಯ ನೋಟದಿಂದ ತೀರ್ಮಾನಿಸಬಾರದು. ನಾವು ರಾಷ್ಟ್ರಪತಿ ಕಚೇರಿಯನ್ನು ಗೌರವಿಸುತ್ತೇವೆ. ಆದರೆ ನಮ್ಮ ರಾಷ್ಟçಪತಿ ನೋಡಲು ಹೇಗಿದ್ದಾರೆ? ಎಂದು ಪ್ರಶ್ನಿಸಿದ್ದರು.

ವಿಶ್ವಯುದ್ಧ ಕಾಲದ ವಿಮಾನಗಳು ಪರಸ್ಪರ ಡಿಕ್ಕಿ, ೬ ಮಂದಿ ಸಾವು

ಟೆಕ್ಸಾಸ್, ನ. ೧೩: ೨ನೇ ವಿಶ್ವಯುದ್ಧದ ಸ್ಮರಣಾರ್ಥಕವಾಗಿ ಶನಿವಾರ ನಡೆದ ವೈಮಾನಿಕ ಪ್ರದರ್ಶನದಲ್ಲಿ ೨ನೇ ವಿಶ್ವಯುದ್ಧ ಕಾಲದ ಎರಡು ವಿಮಾನಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಘಟನೆಯಲ್ಲಿ ೬ ಮಂದಿ ಸಾವನ್ನಪ್ಪಿರುವ ಘಟನೆ ಅಮೆರಿಕದ ಟೆಕ್ಸಾಸ್ ನಗರದಲ್ಲಿ ನಡೆದಿದೆ. ಬೋಯಿಂಗ್ ಬಿ-೧೭ ಫ್ಲೈಯಿಂಗ್ ಫೋರ್ಟ್ರೆಸ್ ಬಾಂಬರ್ ಮತ್ತು ಬೆಲ್ ಪಿ-೬೩ ಕಿಂಗ್‌ಕೋಬ್ರಾ ಎಂಬ ಎರಡನೇ ವಿಶ್ವಯುದ್ಧ ಕಾಲದ ಎರಡು ಯುದ್ಧ ವಿಮಾನಗಳು ಡಲ್ಲಾಸ್ ಎಕ್ಸಿಕ್ಯೂಟಿವ್ ಏರ್‌ಪೋರ್ಟ್ನಲ್ಲಿ ನಡೆದ ಏರ್‌ಶೋನಲ್ಲಿ ಭಾಗಿಯಾಗಿದ್ದವು. ಆದರೆ, ಮಧ್ಯಾಹ್ನ ಸುಮಾರಿಗೆ ಪ್ರದರ್ಶನದ ವೇಳೆ ಎರಡೂ ಯುದ್ಧ ವಿಮಾನಗಳ ವಿಂಗ್ಸ್ ತಗುಲಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆ ವೇಳೆ ೬ ಮೃತ ದೇಹ ಪತ್ತೆಯಾಗಿರುವ ಮಾಹಿತಿ ಸಿಕ್ಕಿದ್ದು ಇನ್ನಷ್ಟು ಸಿಬ್ಬಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಇರಾನ್ ಹಿಜಾಬ್ ವಿರೋಧಿ ಪ್ರತಿಭಟನೆ: ಭದ್ರತಾ ಪಡೆಗಳಿಂದ ೩೨೬ ಮಂದಿಯ ಹತ್ಯೆ

ಪ್ಯಾರಿಸ್, ನ. ೧೩: ನೈತಿಕ ಪೊಲೀಸರ ಕಸ್ಟಡಿಯಲ್ಲಿದ್ದ ಮಹ್ಸಾ ಅಮಿನಿನ ಸಾವಿನ ನಂತರ ತೀವ್ರಗೊಂಡ ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ನಿರತವಾಗಿರುವ ಇರಾನ್‌ನ ಭದ್ರತಾ ಪಡೆಗಳು ಕನಿಷ್ಟ ೩೨೬ ಜನರನ್ನು ಹತ್ಯೆ ಮಾಡಿದೆ ಎಂದು ಇರಾನ್ ಮಾನವ ಹಕ್ಕುಗಳು ಗುಂಪು ತಿಳಿಸಿದೆ. ಇಸ್ಲಾಮಿಕ್ ಗಣರಾಜ್ಯದಲ್ಲಿ ಸೆ. ೧೬ ರಂದು ಅಮಿನಿಯ ಸಾವಿನ ಬಗ್ಗೆ ಪ್ರತಿಭಟನೆಗಳು ತೀವ್ರವಾಗಿದ್ದವು. ಬೀದಿಗಿಳಿದ ಮಹಿಳೆಯರು ಬುರ್ಕಾ ಮತ್ತು ತಮ್ಮ ತಲೆ ಕೂದಲನ್ನು ಕತ್ತರಿಸಿಕೊಂಡು ಪ್ರತಿಭಟನೆ ಆರಂಭಿಸಿದರು. ಇದಾದ ಮೂರು ದಿನಗಳ ನಂತರ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ್ದಕ್ಕಾಗಿ ನೂರಾರು ಮಹಿಳೆಯರ ಹಾಗೂ ಪುರುಷರನ್ನು ಬಂಧಿಸಲಾಯಿತು.