ಕುಶಾಲನಗರ, ನ. ೧೨: ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ಗ್ರಾಮಾಂತರ ಪ್ರದೇಶಗಳಲ್ಲಿ ಮಾಟ, ಮಂತ್ರ, ದೇವಾನುದೇವತೆಗಳು ಮೈ ಮೇಲೆ ಬರುವ ಬಗ್ಗೆ ಜನರಲ್ಲಿ ಹುಸಿ ನಂಬಿಕೆ ಮೂಡಿಸುವುದು ಸೇರಿದಂತೆ ಹಲವು ರೀತಿಯ ಮೂಢನಂಬಿಕೆ ಅಸ್ತç ಗಳನ್ನು ಬಳಸಿ ಕೆಲವು ವಂಚಕರು, ನಾಗರಿಕರನ್ನು ನಂಬಿಸಿ ವಂಚಿಸುತ್ತಿರುವ ಪ್ರಕರಣಗಳು ಅಧಿಕಗೊಳ್ಳುತ್ತಿದೆ.

ಕುಶಾಲನಗರ ಪಟ್ಟಣದಲ್ಲಿ ಕೆಲವು ವ್ಯಕ್ತಿಗಳು ಲಾಡ್ಜ್ಗಳಲ್ಲಿ ನೆಲೆಸಿ, ಅಮಾಯಕರನ್ನು ನಂಬಿಸಿ ವಂಚಿಸುವ ಮೂಲಕ ಬೆಡ್ ರೂಂ ಜ್ಯೋತಿಷಿಗಳಾಗಿ ತಮ್ಮ ದಂಧೆ ಯನ್ನು ನಡೆಸುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬಂದಿದೆ. ಇನ್ನೂ ಕೆಲವರು ಮನೆಯಲ್ಲಿಯೇ ದೇವಾನು ದೇವತೆಗಳ ಹೆಸರಿನಲ್ಲಿ ವಸೂಲಿ ಅಮಾಯಕರನ್ನು ನಂಬಿಸಿ ಸುಲಿಗೆ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅಮಾವಾಸ್ಯೆ ಬಂತೆAದರೆ ಸಾಕು, ಬಡ ಮಹಿಳೆಯರು ಇಂತಹ ವಂಚಕರÀ ಮುಂದೆ ತಮ್ಮ ಬದುಕಿನ ಸಮಸ್ಯೆಗಳ ಸರಮಾಲೆಯನ್ನು ಬಿಚ್ಚುತ್ತಾರೆ. ಇದನ್ನೇ ಬಂಡವಾಳ ವನ್ನಾಗಿಸಿಕೊಂಡು ವಂಚಕರು, ಅಮಾಯಕರ ಕುಟುಂಬದ ಮಾಹಿತಿ ಪಡೆದು ಮಾಟ, ಮಂತ್ರಗಳ ಹೆಸರಿನಲ್ಲಿ ಬೆದರಿಸಿ ಸಮಸ್ಯೆಯನ್ನು ಪರಿಹರಿಸುವ ನಾಟಕದಲ್ಲಿ ಯಶಸ್ವಿ ಯಾಗುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ.

ಕುಶಾಲನಗರ ಸಮೀಪ ಕೊಪ್ಪ ಗ್ರಾಮದಲ್ಲಿ ವ್ಯಕ್ತಿಯೊಬ್ಬನ ಇಡೀ ಕುಟುಂಬ ಸದಸ್ಯರು ಮಾಟ, ಮಂತ್ರ ತಂತ್ರಗಾರಿಕೆಯ ದಂಧೆಯಲ್ಲಿ ತೊಡಗಿಸಿಕೊಂಡು ಇದೀಗ ಕೋಟ್ಯಾಧಿಪತಿ ಕುಳವಾಗಿ ಮಾರ್ಪಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೊಪ್ಪ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಮಾಟ, ಮಂತ್ರ ಹೆಸರಿನಲ್ಲಿ ತಡೆ ಒಡೆಯುವುದು, ಮಾಟ ತೆಗೆಯುವುದು, ಇಂತಹದೇ ಕಾಯಕ ನಿರಂತರವಾಗಿ ನಡೆಯುತ್ತಿದೆ. ಕುಶಾಲನಗರ ಪಟ್ಟಣದ ಬಡಾವಣೆಯೊಂದರಲ್ಲಿ ಸಾಲದ ಹೊರೆಯಿಂದ ಹೊರ ಬರಲಾರದೆ ಪತಿ ಪತ್ನಿಯರಿಬ್ಬರಿಗೆ ಇದೀಗ ಮೈ ಮೇಲೆ ದೇವರು ಬರಲು ಪ್ರಾರಂಭವಾಗಿದ್ದು, ಸಾಮಾನ್ಯ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆಯನ್ನು ನೀಡಲು ಪ್ರಾರಂಭಿಸಿರುವುದು ಕಂಡು ಬಂದಿದೆ.

ಕೊಡಗು - ಮೈಸೂರು ಜಿಲ್ಲೆಯ ವಿವಿಧ ಕಡೆಗಳಿಂದ ಅಮಾವಾಸ್ಯೆ ದಿನಗಳಲ್ಲಿ ಈ ಮಾಟಗಾರರ ಮನೆ ಎದುರುಗಡೆ ಅಮಾಯಕರ ಸಾಲು ಮುಂಜಾನೆ ೪ ಗಂಟೆಯಿAದಲೇ ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಈ ಮಂತ್ರವಾದಿಗಳನ್ನು ಭೇಟಿಯಾಗಿ ಸಮಸ್ಯೆಗಳ ಬಗ್ಗೆ ಮಾತನಾಡ ಬೇಕಾದರೆ ಟೋಕನ್ ವ್ಯವಸ್ಥೆ ಕೂಡ ಆರಂಭಗೊAಡಿದೆ ಎಂದರೆ ಎಷ್ಟರ ಮಟ್ಟಿಗೆ ಮಾಟ, ಮಂತ್ರ ತಂತ್ರಗಾರಿಕೆ ದಂಧೆ ಬೆಳೆದಿದೆ ಎನ್ನುವುದನ್ನು ಊಹಿಸಲು ಅಸಾಧ್ಯ.

ವಂಚನೆಯ ಮಿತಿ ಮೀರಿ ದೇವರು ಮೈ ಮೇಲೆ ಬಂದಾಗ ಭಕ್ತರಿಂದ ಕಾಣಿಕೆ ಪಡೆಯುವ ವಿವಿಧ ರೀತಿಗಳಿದ್ದು, ಕೆಲವು ದೇವರಿಗೆ ೪ ಕಾಲು, ಇನ್ನುಳಿದ ಭಕ್ತರಿಂದ ೨ ಕಾಲುಗಳುಳ್ಳ ಪ್ರಾಣಿಗಳ ಹರಕೆಯನ್ನು ಒಪ್ಪಿಸುವಂತೆ ಮಂತ್ರವಾದಿ ಫರ್ಮಾನ್ ಹೊರಡಿಸಿದರೆ, ಇನ್ನು ಕೆಲವು ದೇವರುಗಳಿಗೆ ಚಿನ್ನ, ಬೆಳ್ಳಿ, ನಗದು ಹರಕೆ ಮಾತ್ರ ಒಪ್ಪಿಸುವುದು ಅನಿವಾರ್ಯವಾಗಿದೆ.

ಮಾಟ, ಮಂತ್ರ ಪರಿಹರಿಸುವ ದಂಧೆ ಎಷ್ಟರ ಮಟ್ಟಿಗೆ ಇದೆ ಎಂದರೆ, ಗ್ಯಾರೇಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ತನ್ನ ಕಾಯಕಕ್ಕೆ ತಿಲಾಂಜಲಿ ಇಟ್ಟು, ಹೆಂಡತಿ ಮಕ್ಕಳನ್ನು ತ್ಯಜಿಸಿ ಇದೀಗ ಬಾಡಿಗೆ ಮನೆಯೊಂದರಲ್ಲಿ ನೆಲೆಸಿ ಮಾಟ, ಮಂತ್ರ ತೆಗೆಯುವ ಕಾಯಕದಲ್ಲಿ ತೊಡಗಿರುವುದು ಕಂಡು ಬಂದಿದೆ.

ಬಡಾವಣೆಗಳ ರಸ್ತೆ ಬದಿಯಲ್ಲಿ ಎಲ್ಲಿ ಕಂಡರೂ, ಮಾಟ, ಮಂತ್ರಗಳಿಗೆ ಬಳಸುವ ವಸ್ತುಗಳು ಚೆಲ್ಲಾಡಿರುವುದು, ಇದು ಈ ಭಾಗದ ಜನರಲ್ಲಿ ಒಂದು ರೀತಿಯ ಭಯವನ್ನು ಸೃಷ್ಟಿ ಮಾಡುತ್ತಿದೆ. ಇಲ್ಲಿನ ಪಂಚಾಯಿತಿ ಸದಸ್ಯನೊಬ್ಬ ಈ ಕುಟುಂಬದ ಎಲ್ಲಾ ಕುಕೃತ್ಯಗಳಿಗೆ ಬೆನ್ನೆಲುಬಾಗಿ ನಿಂತಿರುವುದು ಅಚ್ಚರಿಯ ಸಂಗತಿ.

ಕುಶಾಲನಗರ- ಕೊಪ್ಪ ಗಡಿಭಾಗದ ಕಾವೇರಿ ನದಿ ಸೇತುವೆ ಕೆಳಭಾಗದಲ್ಲಿ ನದಿ ಮತ್ತು ರಸ್ತೆ ಉದ್ದಕ್ಕೂ ಎಲ್ಲಿ ನೋಡಿದರಲ್ಲಿ ನಿಂಬೆಹಣ್ಣು, ಮೊಟ್ಟೆ, ಕುಡಿಕೆ, ಅರಶಿನ, ಕುಂಕುಮ ರಾಶಿ ರಾಶಿ ಬಿದ್ದಿರುವುದು ಸಾಮಾನ್ಯವಾಗಿದೆ. ಇದರಿಂದ ಜಲಮೂಲಗಳು ಸಂಪೂರ್ಣ ಕಲುಷಿತಗೊಳ್ಳುತ್ತಿವೆ ಎಂದು ನದಿ ತಟದ ನಿವಾಸಿಗಳು ‘ಶಕ್ತಿ’ಯೊಂದಿಗೆ ದೂರಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸ್ ದೂರು ಗಳನ್ನು ನೀಡಿರುವ ಪ್ರಕರಣಗಳು ನಡೆದಿವೆ.

ವಶೀಕರಣ, ಆಸ್ತಿ-ಪಾಸ್ತಿ ಮಾರಾಟ, ಪ್ರೀತಿ ವೈಫಲ್ಯ, ವಿರೋಧಿಗಳನ್ನು ಹತ್ತಿಕುವುದು, ಪತಿ-ಪತ್ನಿಯ ಕಲಹ, ಅತ್ತೆ-ಸೊಸೆ ಜಗಳ, ರೋಗ ರುಜಿನಗಳ ಪರಿಹಾರ, ನಿದ್ರೆ ಬಾರದಿರುವುದು, ವಿವಾಹ ವಿಚ್ಛೇದನ, ಉದ್ಯೋಗ ಸಮಸ್ಯೆ, ಶಿಕ್ಷಣದಲ್ಲಿ ಆಸಕ್ತಿ ಕೊರತೆ ಮುಂತಾದ ವಿಷಯಗಳೇ ಮಾಟ, ಮಂತ್ರ ವಾದಿಗಳಿಗೆ ಬಂಡವಾಳವಾಗಿದ್ದು, ದಿನನಿತ್ಯ ಗ್ರಾಮಾಂತರ ಪ್ರದೇಶ ಗಳಿಂದ ಅಮಾಯಕರ ದಂಡೇ ಇವರೆಡೆಗೆ ಹರಿದು ಬರುತ್ತಿದೆ. ಮಾಟ, ಮಂತ್ರ ಮತ್ತಿತರ ಕಾಯಿಲೆಗಳ ನಿವಾರಣೆಗೆ ಬಂದ ಬಡ ಅಮಾಯಕರಿಂದ ಚಿನ್ನಾಭರಣ, ಹಣ ವಸೂಲಿ ಮಾಡುತ್ತಿರುವುದು ಈ ವಂಚಕರಿAದ ನಿರಂತರವಾಗಿ ನಡೆಯುತ್ತಿದ್ದು, ವಿರೋಧ ವ್ಯಕ್ತಗೊಂಡಲ್ಲಿ ಭಯ ಹುಟ್ಟಿಸುವ ಇಂತಹ ಬೆಡ್ ರೂಂ ಜ್ಯೋತಿಷಿಗಳ ಕಾಯಕಕ್ಕೆ ಶಾಶ್ವತ ಕಡಿವಾಣ ಹಾಕಬೇಕಾಗಿದೆ ಎನ್ನುವುದು ಸ್ಥಳೀಯರ ಕೋರಿಕೆಯಾಗಿದೆ.

ಈ ರೀತಿಯ ವಂಚನೆ ಬಗ್ಗೆ ವೈಜ್ಞಾನಿಕÀ ಸಂಶೋಧನಾ ಪರಿಷತ್ ಮೂಲಕ ಸ್ಥಳೀಯ ಅಧಿಕಾರಿಗಳಿಗೆ ನಾಗರಿಕರು ದೂರು ನೀಡಿದ್ದು, ನಿಯಮಾನುಸಾರ ಕ್ರಮ ಕೈಗೊಳ್ಳು ವುದಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆ ಕೊಪ್ಪ ಸಮೀಪದ ಚನಕಲ್ ಕಾವಲ್ ಬಳಿ ಮಹಿಳೆಯೊಬ್ಬಳು ತನ್ನ ಬಳಿ ಸಮಸ್ಯೆ ಹೇಳಿಕೊಂಡು ಬಂದ ಅಮಾಯಕರಿಗೆ ಮನಬಂದAತೆ ಥಳಿಸಿ ಅವರ ಮೈಯಿಂದ ದೆವ್ವ ಓಡಿಸುವ ಪ್ರಕರಣವೊಂದು ಅತಿರೇಕಕ್ಕೆ ತಿರುಗಿ ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ ನಡೆದಿತ್ತು.

ಸರ್ಕಾರ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಜಾರಿಗೆ ತಂದರೂ, ಅದನ್ನು ಅನುಷ್ಠಾನU ೆÆಳಿಸುವಲ್ಲಿ ಸ್ಥಳೀಯ ಅಧಿಕಾರಿಗಳು ದಿವ್ಯಮೌನಕ್ಕೆ ಶರಣಾಗಿರುವುದೇ ಈ ಎಲ್ಲ ಅವಾಂತರಗಳಿಗೆ ಪ್ರಮುಖ ಕಾರಣವಾಗಿದೆ.

ಜಿಲ್ಲಾಧಿಕಾರಿಗಳು ಈ ಬಗ್ಗೆ ಸಂಬAಧಿಸಿದ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಇಂತಹ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಬೇಕೆನ್ನುವುದು ನಾಗರಿಕರ ಆಗ್ರಹವಾಗಿದೆ.

- ಎಂ.ಎನ್. ಚಂದ್ರಮೋಹನ್