ಸೋಮವಾರಪೇಟೆ, ನ. ೧೧: ತಾಲೂಕಿನ ಹಲವಷ್ಟು ಗ್ರಾಮೀಣ ಪ್ರದೇಶದ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿವೆ. ಲೋಕೋಪಯೋಗಿ ಇಲಾಖೆಗೆ ಒಳಪಡುವ ರಾಜ್ಯ ಹೆದ್ದಾರಿಯಿಂದ ಹಿಡಿದು ಜಿಲ್ಲಾ ಪಂಚಾಯಿತಿಯ ರಸ್ತೆಗಳೂ ಸಹ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ.ಲೋಕೋಪಯೋಗಿ ಇಲಾಖೆಗೆ ಸಂಬAಧಿಸಿದAತೆ ಸುಮಾರು ೭೬ ಕಿ.ಮೀ ರಸ್ತೆ ದುಸ್ಥಿತಿಗೆ ತಲುಪಿದೆ. ಅತೀ ಹೆಚ್ಚು ಮಳೆ, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದೇ ಇರುವುದು, ಸಮರ್ಪಕ ಚರಂಡಿ ಹಾಗೂ ಮೋರಿಯ ಕೊರತೆಯಿಂದಾಗಿ ಗ್ರಾಮೀಣ ಪ್ರದೇಶದ ರಸ್ತೆಗಳ ಸ್ಥಿತಿ ಆ ದೇವರಿಗೇ ಪ್ರೀತಿ ಎಂಬAತಿದೆ. ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಳೂರು ಶೆಟ್ಟಳ್ಳಿ-ಸುಗ್ಗಿದೇವಸ್ಥಾನ-ದೊಡ್ಡಮನೆಕೊಪ್ಪ- ಚಿಕ್ಕತೋಳೂರು ರಸ್ತೆಯ ಸ್ಥಿತಿಯಂತೂ ಹೇಳತೀರದ್ದಾಗಿದೆ.

ಕಳೆದ ಅನೇಕ ದಶಕಗಳಿಂದ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಆಗ್ರಹಿಸುತ್ತಿರುವ ಗ್ರಾಮಸ್ಥರ ಕೂಗು ಅರಣ್ಯರೋಧನವಾಗಿದೆ. ತೋಳೂರು ಶೆಟ್ಟಳ್ಳಿಯಿಂದ ದೊಡ್ಡಮನೆಕೊಪ್ಪದವರೆಗಿನ ರಸ್ತೆಯಲ್ಲಿ ಬಾಳೆ ಗಿಡಗಳನ್ನು ನೆಡುವಷ್ಟು ಗುಂಡಿಗಳು ನಿರ್ಮಾಣವಾಗಿವೆ. ಈ ಭಾಗದಲ್ಲಿ ಕೃಷಿಕ ವರ್ಗವೇ ಹೆಚ್ಚಿದ್ದು, ತಮ್ಮ ಕೃಷಿ ಫಸಲನ್ನು ಮನೆ ತುಂಬಿಸಿಕೊಳ್ಳುವುದೂ ಕಷ್ಟಕರವಾಗಿದೆ.

ಇದರೊಂದಿಗೆ ಈ ಭಾಗದಲ್ಲಿ ದಿನಂಪ್ರತಿ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳುತ್ತಿದ್ದು, ರಸ್ತೆಯ ಅವ್ಯವಸ್ಥೆಯಿಂದಾಗಿ ಶಾಲಾ ವಾಹನಗಳು ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಿವೆ. ಆಟೋಗಳೂ ಸಹ ಈ ರಸ್ತೆಗೆ ಇಳಿಯಲು ಹಿಂದೆ ಮುಂದೆ ನೋಡುತ್ತಿದ್ದು, ದುಬಾರಿ ಬಾಡಿಗೆ ನೀಡುವ ಸ್ಥಿತಿ ನಿರ್ಮಾಣವಾಗಿದೆ.

ರಸ್ತೆಯ ಗುಂಡಿಗಳಿಗೆ ಮುಕ್ತಿ ನೀಡುವಂತೆ ಎರಡು ದಶಕಗಳಿಂದ ಬೇಡಿಕೆ ಇಡುತ್ತಿದ್ದರೂ ಪ್ರಯೋಜನ ಶೂನ್ಯವಾಗಿದೆ ಎಂದು ಗ್ರಾಮಸ್ಥರಾದ ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ಮಾಡಿದ ಸಂದರ್ಭ, ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಅಭಿಯಂತರ ವೀರೇಂದ್ರ ಅವರು ಭರವಸೆ ನೀಡಿದ್ದರು.

(ಮೊದಲ ಪುಟದಿಂದ) ಅದರಂತೆ ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದ್ದು, ಈವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ.

ಉದ್ದೇಶಿತ ರಸ್ತೆ ದುರಸ್ತಿಗೆ ಮಳೆಹಾನಿ ಪರಿಹಾರ ನಿಧಿಯಡಿ ೨ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈವರೆಗೆ ಹಣ ಬಂದಿಲ್ಲ. ಅನುದಾನ ಬಂದ ನಂತರ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್ ಹಾಗೂ ಅಭಿಯಂತರ ವೆಂಕಟೇಶ್ ನಾಯಕ್ ತಿಳಿಸಿದ್ದಾರೆ.

ಇನ್ನು ಸೋಮವಾರಪೇಟೆ- ಕೂಡುರಸ್ತೆ- ತೋಳೂರುಶೆಟ್ಟಳ್ಳಿ- ಕೂತಿ-ವನಗೂರು ಕೂಡುರಸ್ತೆ-ಸುಬ್ರಹ್ಮಣ್ಯ ಸಂಪರ್ಕಿಸುವ ೧೫ ಕಿ.ಮೀ. ಉದ್ದದ ರಸ್ತೆಯೂ ಕಿರಿದಾಗಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಈ ರಸ್ತೆಯನ್ನು ಅಗಲೀಕರಣ ಮಾಡುವಂತೆ ಗ್ರಾಮಸ್ಥರು ಗ್ರಾ.ಪಂ. ಚುನಾವಣೆಯನ್ನು ಬಹಿಷ್ಕರಿಸಿದ್ದರೂ ಸಹ ಈವರೆಗೆ ಯಾವುದೇ ಕ್ರಮವಾಗಿಲ್ಲ.

ಈ ರಸ್ತೆಯ ಅಗಲೀಕರಣಕ್ಕೆ ರೂ. ೧ಕೋಟಿ ಅನುದಾನ ಬಿಡುಗಡೆ ಮಾಡಲು ಕ್ರಮವಹಿಸಲಾಗುವುದು ಎಂದು ಶಾಸಕ ಅಪ್ಪಚ್ಚುರಂಜನ್ ಅವರು ಭರವಸೆ ನೀಡಿದ್ದಾರೆ. ಹಣ ಬಂದ ತಕ್ಷಣ ರಸ್ತೆ ಅಗಲೀಕರಣ ಮಾಡುವುದಾಗಿ ಇಲಾಖೆಯ ಅಧಿಕಾರಿ ಮಹೇಂದ್ರಕುಮಾರ್ ಮಾಹಿತಿ ನೀಡಿದ್ದಾರೆ.

ಮಸಗೋಡು-ಅರೆಯೂರು-ಯಲಕನೂರು-ಕಣಿವೆ ರಸ್ತೆಯನ್ನು ಇದೀಗ ತಾತ್ಕಾಲಿಕವಾಗಿ ದುರಸ್ತಿಪಡಿಸುತ್ತಿದ್ದು, ೧೨ ಕೋಟಿ ಅನುದಾನಕ್ಕೆ ಲೋಕೋಪಯೋಗಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಸದ್ಯಕ್ಕೆ ಗುಂಡಿ ಮುಚ್ಚುವ ಕಾಮಗಾರಿ ಪ್ರಗತಿಯಲ್ಲಿದೆ.

ಮಡಿಕೇರಿ-ಸೋಮವಾರಪೇಟೆ-ಕೊಡ್ಲಿಪೇಟೆ ರಾಜ್ಯ ಹೆದ್ದಾರಿಯ ಗೌಡಳ್ಳಿ, ನಂದಿಗುAದ, ಕೊಡ್ಲಿಪೇಟೆ ಭಾಗದಲ್ಲಿ ರಸ್ತೆಯು ಅಧೋಗತಿಗೆ ತಲುಪಿದ್ದು, ಕಳೆದ ತಾ. ೭ರಂದು ೧೨ ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಶಾಸಕ ಅಪ್ಪಚ್ಚುರಂಜನ್ ಅವರು ಚಾಲನೆ ನೀಡಿದ್ದಾರೆ. ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ.

ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು-ಕಟ್ಟೆಪುರ ರಸ್ತೆಯಂತೂ ಆಡಳಿತ ವರ್ಗದ ಅನಾದರಕ್ಕೆ ಹಿಡಿದ ಕೈಗನ್ನಡಿಯಂತಿದೆ. ಮೊದಲೇ ಕಾಡಾನೆಗಳ ಹಾವಳಿ ಹೆಚ್ಚಿರುವ ಈ ಭಾಗದಲ್ಲಿ ರಸ್ತೆಯ ಬೇಡಿಕೆಯ ಕೂಗು ಅರಣ್ಯರೋಧನವೇ ಆಗಿದೆ. ಗ್ರಾಮದಲ್ಲಿ ೧೦೦ ಮೀಟರ್ ಕಾಂಕ್ರೀಟ್ ರಸ್ತೆ ಆಗಿರುವುದನ್ನು ಹೊರತುಪಡಿಸಿದರೆ, ಉಳಿದ ೨ ಕಿ.ಮೀ. ರಸ್ತೆ ಸಂಪೂರ್ಣ ಗುಂಡಿಬಿದ್ದಿದೆ.

ಕಾವೇರಿ ನೀರಾವರಿ ನಿಗಮದಿಂದ ರಸ್ತೆಯನ್ನು ದುರಸ್ತಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದ್ದು, ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ತಕ್ಷಣ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಕಟ್ಟೆಪುರದ ಸಂತೋಷ್ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.

ಈ ಹಿಂದೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಪ್ರಮುಖ ೧೨ ರಸ್ತೆಗಳನ್ನು ಇತ್ತೀಚೆಗಷ್ಟೇ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇದರÀಲ್ಲಿ ಸಿದ್ದಲಿಂಗಪುರ-ಕಣಗಾಲು ರಸ್ತೆಯನ್ನು ಪ್ರಸಕ್ತ ಸಾಲಿನಲ್ಲಿ ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆಯಾಗಿದೆ. ಉಳಿದ ೧೧ ರಸ್ತೆಗಳು ಮೇಲ್ದರ್ಜೆಗೇರಿದ್ದರೂ ಅನುದಾನದ ಭಾಗ್ಯ ಕಂಡಿಲ್ಲ! ಇದರಲ್ಲಿ ತೋಳೂರುಶೆಟ್ಟಳ್ಳಿ-ದೊಡ್ಡಮನೆಕೊಪ್ಪದ ರಸ್ತೆಯೂ ಸೇರಿದೆ.

ಲೋಕೋಪಯೋಗಿ ಇಲಾಖೆಯೊಂದಿಗೆ ಗ್ರಾಮೀಣ ಭಾಗದ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳೂ ಹಾಳಾಗಿವೆ. ಗ್ರಾಮೀಣ ಪ್ರದೇಶದ ಮಂದಿ ದಿನಂಪ್ರತಿ ಅವಲಂಭಿಸಿರುವ ರಸ್ತೆಗಳು ಅಧೋಗತಿಯಲ್ಲಿವೆ.

ತೋಳೂರುಶೆಟ್ಟಳ್ಳಿಯ ಕೂತಿ-ಕೆರೆಕೊಪ್ಪ-ನಗರಳ್ಳಿ ಸಂಪರ್ಕಿಸುವ ೩ ಕಿ.ಮೀ. ರಸ್ತೆ ದುಸ್ಥಿತಿಗೆ ತಲುಪಿದೆ. ಇದರಲ್ಲಿ ಪ್ರತಿದಿನ ೨ ಸಾರಿಗೆ ಬಸ್, ಶಾಲಾ ಕಾಲೇಜು ವಾಹನ, ಸಾರ್ವಜನಿಕ ವಾಹನಗಳು ಸಂಚರಿಸುತ್ತಿವೆ. ಹರಪಳ್ಳಿ, ಬಸವನಕಟ್ಟೆ-ಶಾಂತಳ್ಳಿ ರಸ್ತೆ ಹಾನಿಗೀಡಾಗಿ ವರ್ಷಗಳೇ ಕಳೆದಿವೆ.

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗೂರು-ಯಡವಾರೆ ಸಂಪರ್ಕಿಸುವ ೧.೫ ಕಿ.ಮೀ., ಯಡವಾರೆಯಿಂದ ಸಜ್ಜಳ್ಳಿ ಸಂಪರ್ಕಿಸುವ ೨ ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿವೆ. ಐಗೂರು-ಕಿರಗಂದೂರು ಮುಖ್ಯರಸ್ತೆ ಹಾಳಾಗಿದೆ. ಕಿರಗಂದೂರು ಗ್ರಾ.ಪಂ.ನ ಕಡ್ಲೆಮನೆ, ಕೋವೆರ ಮನೆ ರಸ್ತೆ ಕಣ್ಮರೆಯಾಗಿ ದಶಕಗಳೇ ಕಳೆದಿದ್ದರೂ ಈವರೆಗೆ ದುರಸ್ತಿಯಾಗಿಲ್ಲ. ಆಟೋಗಳಿರಲಿ.., ನಡೆದುಕೊಂಡು ಹೋಗುವುದೇ ತ್ರಾಸದಾಯಕವಾಗಿದೆ.

ಹೊಸತೋಟದಿಂದ ಕಿಬ್ರಿ ಎಸ್ಟೇಟ್ ಸಂಪರ್ಕ ರಸ್ತೆ ದುಸ್ಥಿತಿಯಲ್ಲಿದೆ. ಹಾನಗಲ್ಲು ಗ್ರಾ.ಪಂ. ವ್ಯಾಪ್ತಿಯ ಹಾನಗಲ್ಲು ಬಾಣೆಯಿಂದ- ಹಾನಗಲ್ಲು ಶೆಟ್ಟಳ್ಳಿ ಸಂಪರ್ಕ ರಸ್ತೆಯಲ್ಲಿ ಡಾಂಬರು ಹುಡುಕುವಂತಾಗಿದೆ. ಚೌಡ್ಲು ಗ್ರಾ.ಪಂ. ವ್ಯಾಪ್ತಿಯ ಚೌಡ್ಲು-ಅರೆಬೆಟ್ಟ-ಕಲ್ಕಂದೂರು ಸಂಪೂರ್ಣ ಹಾನಿಯಾಗಿದೆ. ಕಿಬ್ಬೆಟ್ಟ-ಬರಗಳ್ಳಿ ರಸ್ತೆ ೨ ಕಿ.ಮೀ. ರಸ್ತೆ, ಕಿಬ್ಬೆಟ್ಟ ಎಸ್ಟೇಟ್‌ನಿಂದ ಕಿಬ್ಬೆಟ್ಟ ಊರೊಳಗೆ ಸಂಪರ್ಕಿಸುವ ರಸ್ತೆಯ ಸ್ಥಿತಿ ಹೇಳತೀರದಾಗಿದೆ.

ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣಗೂರು-ನಾಗವಾಲ-ಯರಪಾರೆ ಸಂಪರ್ಕಿಸುವ ೩ ಕಿ.ಮೀ. ರಸ್ತೆ, ಪದಾರ್ತಿಮನೆ ಹತ್ತಿರದಿಂದ ಆಲದಮರ ರಸ್ತೆ, ಗಣಗೂರು-ಹಿತ್ಲಗದ್ದೆ ರಸ್ತೆಗಳು ಗುಂಡಿಮಯವಾಗಿವೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.

ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ಮೋರಿಕಲ್ಲು ರಸ್ತೆ, ನೇರುಗಳಲೆ-ಅರೆಯೂರು ರಸ್ತೆ, ದೊಡ್ಡಬ್ಬೂರು-ಅಬ್ಬೂರುಕಟ್ಟೆ ರಸ್ತೆ, ಹೊಸಳ್ಳಿ-ಅರೆಯೂರು ರಸ್ತೆ, ಅರೆಯೂರಿನಿಂದ ಜಯಣ್ಣಮನೆ ರಸ್ತೆ, ವಳಗುಂದ ರಸ್ತೆಯಿಂದ ಭಕ್ತರಳ್ಳಿ ಸಂಪರ್ಕ ರಸ್ತೆ, ಕಾಡನೂರು-ಹಿತ್ಲುಮಕ್ಕಿ ರಸ್ತೆ, ತಣ್ಣೀರುಹಳ್ಳ-ವಳಗುಂದ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿವೆ.

ದೊಡ್ಡಮಳ್ತೆ ಗ್ರಾ.ಪಂ. ವ್ಯಾಪ್ತಿಯ ಅಂಬೇಡ್ಕರ್ ನಗರ, ಹಾರೋಹಳ್ಳಿ, ಮೂಕನಕಟ್ಟೆ, ಗ್ರಾ.ಪಂ. ಎದುರಿನ ರಸ್ತೆ, ಸುಳಿಮಳ್ತೆ ರಸ್ತೆಗಳು ಹೊಂಡಮಯವಾಗಿವೆ.

ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೆರೋಡು ಹೊಸಗುತ್ತಿ-ಹೊಸಳ್ಳಿ ರಸ್ತೆ, ದೊಡ್ಡ ಕಣಗಾಲು, ಗಾರೆಕಟ್ಟ ಊರೊಳಗಿನ ರಸ್ತೆ, ಹೊಸಗುತ್ತಿ-ಮುಳ್ಳೂರು ರಸ್ತೆ, ಮುಖ್ಯರಸ್ತೆಯಿಂದ ಕಣಿವೆ ಬಸವನಹಳ್ಳಿ ರಸ್ತೆ, ಅಂಬಳ್ಳಿ-ಬಡುಬನಹಳ್ಳಿ, ನಾಯಿಕಾಲುಮಂಟಿ ರಸ್ತೆಗಳು ತೀರಾ ಹಾಳಾಗಿವೆ.

ಕೊಡ್ಲಿಪೇಟೆ ಗ್ರಾ.ಪಂ. ವ್ಯಾಪ್ತಿಯ ಕೊಡ್ಲಿಪೇಟೆ-ಕೆಳಕೊಡ್ಲಿ ರಸ್ತೆ, ನವಗ್ರಾಮ ರಸ್ತೆ, ಕೊಡ್ಲಿಪೇಟೆ ಮುಖ್ಯರಸ್ತೆಯಿಂದ ಕಲ್ಲಳ್ಳಿ ಮಠ ರಸ್ತೆ, ಕಲ್ಲಾರೆ ರಸ್ತೆಗಳು ದುರಸ್ತಿಗೀಡಾಗಿವೆ. ಬೆಸೂರು ಗ್ರಾ.ಪಂ.ನ ನೀರುಗುಂದ-ಚಿಕ್ಕಾಕುAದ-ಮನುಗನಹಳ್ಳಿ-ಜನಾರ್ದನಹಳ್ಳಿ, ಹರಕನಹಳ್ಳಿ-ಲಕ್ನಿ ರಸ್ತೆ, ಕೂಡ್ಲೂರು ರಸ್ತೆಗಳು ಹಾಳಾಗಿವೆ. ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯ ಊರುಗುತ್ತಿ ಊರೊಳಗಿನ ರಸ್ತೆ, ಈಚಲಪುರ ಗ್ರಾಮ ಸಂಪರ್ಕ ರಸ್ತೆ, ಬ್ಯಾಡಗೊಟ್ಟ ಮುಖ್ಯರಸ್ತೆಯಿಂದ ಬಸವಣ್ಣ ಮಾಸ್ಟರ್ ಮನೆ ಮಾರ್ಗವಾಗಿ ಊರೊಳಗೆ ತೆರಳುವ ರಸ್ತೆ, ಹಾರೋಹಳ್ಳಿ ಗ್ರಾಮ ಸಂಪರ್ಕ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿವೆ.

ಹಂಡ್ಲಿ ಗ್ರಾಮ ಪಂಚಾಯಿತಿಯ ಬಾಗೇರಿ ಗ್ರಾಮ ಸಂಪರ್ಕ ರಸ್ತೆ, ಶನಿವಾರಸಂತೆ ಗ್ರಾ.ಪಂ.ನ ಪೊಲೀಸ್ ಠಾಣೆ ರಸ್ತೆ, ಯಶಸ್ವಿ ಚಿತ್ರಮಂದಿರ-ಕಾವೇರಿ ಕಾಲೇಜು ರಸ್ತೆ, ಹೆಮ್ಮನೆ ರಸ್ತೆ, ಗೋಪಾಲಪುರ ಊರೊಳಗಿನ ರಸ್ತೆ, ಕಾಲೋನಿ ರಸ್ತೆ,

ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡಳ್ಳಿ-ಕೂಗೂರು ರಸ್ತೆ, ಗೌಡಳ್ಳಿ ಮುಖ್ಯರಸ್ತೆಯಿಂದ ಹೆಗ್ಗುಳ ರಸ್ತೆ, ಚಿಕ್ಕಾರ-ಕೂಗೂರು ರಸ್ತೆ, ನಿಡ್ತ ಗ್ರಾ.ಪಂ.ನ ದೊಡ್ಡಳ್ಳಿ ಕಾಲೋನಿ ಸಂಪರ್ಕ ರಸ್ತೆ, ಸಿಡಿಗಳಲೆ-ಹಾರೆಹಾಸೂರು ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿವೆ. ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಯ ಕನ್ನಳ್ಳಿಕಟ್ಟೆಯಿಂದ ಕನ್ನಳ್ಳಿ ಗ್ರಾಮ ಮುಖಾಂತರ ನಗರಳ್ಳಿ ಸಂಪರ್ಕ ರಸ್ತೆ ತೀರಾ ಹಾಳಾಗಿದೆ. ಕುಂದಳ್ಳಿ-ಬೇಕನಳ್ಳಿ ರಸ್ತೆ ಹಾಳಾಗಿದೆ.

ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಾರಲಿಂಗೇಶ್ವರ ದೇವಾಲಯದಿಂದ ಕಾಕಲಕೊಪ್ಪ-ತಲ್ತರೆ ರಸ್ತೆ, ಗೌರಿಕೆರೆ ರಸ್ತೆ, ಶಾಂತಳ್ಳಿ-ಚಿಗಟಳ್ಳಿ, ಅಭಿಮಠ ಬಾಚಳ್ಳಿ ರಸ್ತೆಗಳು ಹಾಳಾಗಿವೆ. ಗರ್ವಾಲೆ-ಸೂರ್ಲಬ್ಬಿ-ಕುಂಬಾರಗಡಿಗೆ ಗ್ರಾಮಗಳ ಒಳರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿವೆ.

ಬೇಳೂರು ಗ್ರಾ.ಪಂ.ವ್ಯಾಪ್ತಿಯ ಕೆಂಚಮ್ಮನಬಾಣೆ ಊರೊಳಗಿನ ರಸ್ತೆ, ಕುಸುಬೂರು ಗ್ರಾಮ ಸಂಪರ್ಕ ರಸ್ತೆಗಳು ಹಾಳಾಗಿವೆ. ಮಾದಾಪುರ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ ಮುಂಭಾಗದಿAದ ಜಂಬೂರು ಫೀಲ್ಡ್ಮಾರ್ಷಲ್ ಕಾರ್ಯಪ್ಪ ಬಡಾವಣೆ ಸಂಪರ್ಕ ರಸ್ತೆ, ಜಂಬೂರಿನಿAದ ಬಸವೇಶ್ವರ ದೇವಾಲಯ ರಸ್ತೆ, ಚರ್ಚ್ನಿಂದ ಆಶ್ರಯ ಕಾಲೋನಿ ಸಂಪರ್ಕ ರಸ್ತೆ, ದೊಡ್ಡಿಯಿಂದ-ಜAಬೂರು ಅಂಗನವಾಡಿ ರಸ್ತೆಗಳಲ್ಲಿ ಸಂಚಾರ ದುಸ್ತರವಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಸಣ್ಣಪುಟ್ಟ ರಸ್ತೆಗಳು ಮಳೆಯಿಂದಾಗಿ ಹಾಳಾಗಿದ್ದರೆ, ಬಹುತೇಕ ರಸ್ತೆಗಳು ಕಳೆದ ೨ ದಶಕಗಳಿಂದ ಡಾಂಬರನ್ನೇ ಕಂಡಿಲ್ಲ. ಕನಿಷ್ಟಪಕ್ಷ ರಸ್ತೆಗಳನ್ನಾದರೂ ಸರಿಪಡಿಸಿಕೊಡಿ ಎಂದು ಗ್ರಾಮಸ್ಥರು ಪ್ರತಿ ಬಾರಿ ಬೇಡಿಕೆ ಮುಂದಿಡುತ್ತಿದ್ದಾರೆ. ಮಳೆಗಾಲದಲ್ಲಿ ರಸ್ತೆಯ ಗುಂಡಿಗಳಿಗೆ ಬಾಳೆ ಗಿಡಗಳನ್ನು ನೆಟ್ಟು ಆಕ್ರೋಶ ಹೊರಹಾಕಿದರೂ ಸಹ ಅಧಿಕಾರಿವರ್ಗ, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದು.

ಜನತೆಯ ಸಂಪರ್ಕಕ್ಕೆ ಮೂಲಭೂತವಾಗಿ ಬೇಕಾಗಿರುವ ರಸ್ತೆಯನ್ನು ಅಭಿವೃದ್ಧಿಪಡಿಸಲು ಇನ್ನಾದರೂ ಆಡಳಿತ ವರ್ಗ, ಜನಪ್ರತಿನಿಧಿಗಳು ಮುಂದಾಗುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.

-ವಿಜಯ್ ಹಾನಗಲ್