ಮಡಿಕೇರಿ, ನ. ೧೧: ಕಾಂಗ್ರೆಸ್ ಯುವ ಮುಖಂಡ ಡಾ. ಮಂತರ್ ಗೌಡ ಅವರು ತಮ್ಮ ಜನ್ಮ ದಿನವನ್ನು ವೃದ್ಧಾಶ್ರಮಗಳಲ್ಲಿ ಆಚರಿಸಿದರು. ನಗರದ ತನಲ್ ಹಾಗೂ ಶ್ರೀಶಕ್ತಿ ವೃದ್ಧಾಶ್ರಮಕ್ಕೆ ಪತ್ನಿ ದಿವ್ಯ ಅವರೊಂದಿಗೆ ಭೇಟಿ ನೀಡಿದ ಅವರು ಅಲ್ಲಿ ಆಶ್ರಯ ಪಡೆದಿರುವ ಬಂಧುಗಳ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು. ಎರಡೂ ಆಶ್ರಮಗಳಲ್ಲಿ ಸಿಹಿ ಊಟವನ್ನು ವಿತರಿಸಿ ಜನ್ಮ ದಿನದ ಸಂಭ್ರಮವನ್ನು ಹಂಚಿಕೊAಡರು. ನಗರ ಕಾಂಗ್ರೆಸ್ ಅಧ್ಯಕ್ಷ ಬಿ. ರಾಜೇಶ್ ಯಲ್ಲಪ್ಪ, ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ, ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ. ಪೀಟರ್, ಯಾಕುಬ್, ವಕ್ತಾರ ತೆನ್ನಿರ ಮೈನಾ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಿ.ಎನ್. ಮುದ್ದುರಾಜು, ಆಶ್ರಮಗಳ ವ್ಯವಸ್ಥಾಪಕರು ಮತ್ತಿತರ ಪ್ರಮುಖರು ಈ ಸಂದರ್ಭ ಹಾಜರಿದ್ದರು.