ಗೋಣಿಕೊಪ್ಪಲು, ನ. ೧೧: ಬುಡಕಟ್ಟು ಕೃಷಿಕರ ಸಂಘ, ಗಿರಿಜನ ಸಮಗ್ರ ಅಭಿವೃದ್ದಿ ಕಲಾ ಸಂಸ್ಥೆ, ಹಾಡಿ ಅರಣ್ಯ ಹಕ್ಕು ಸಮಿತಿ ಪೊನ್ನಂಪೇಟೆ, ವೀರಾಜಪೇಟೆ ತಾಲೂಕು ಇವರ ವತಿಯಿಂದ ತಾ.೧೫ರಂದು ತಿತಿಮತಿಯ ಸಮುದಾಯ ಭವನದಲ್ಲಿ ಆದಿವಾಸಿ ಸ್ವಾತಂತ್ರö್ಯ ಹೋರಾಟಗಾರ ಬಿರ್ಸಾಮುಂಡಾರವರ ೧೪೭ನೇ ಜಯಂತಿ ಕಾರ್ಯಕ್ರಮವು ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಆದಿವಾಸಿ ಮುಖಂಡರಾದ ಪಿ.ಸಿ. ರಾಮುರವರ ಅಧ್ಯಕ್ಷತೆಯಲ್ಲಿ ತಿತಿಮತಿಯ ಬೊಂಬುಕಾಡು ಹಾಡಿ ಯಲ್ಲಿ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿ.ಸಿ. ರಾಮು, ಆದಿವಾಸಿಗಳ ಸ್ವಾತಂತ್ರö್ಯ ಹೋರಾಟಗಾರ ಬಿರ್ಸಾಮುಂಡಾರವರ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಕೊರೊನಾ ಕಾರಣದಿಂದ ೩ ವರ್ಷಗಳು ಜಯಂತಿ ನಡೆಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ೨ ತಾಲೂಕಿನ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಿತಿಮತಿ ಸಮುದಾಯ ಭವನದಲ್ಲಿ ಸಮಾಗಮಗೊಳ್ಳುವ ಮೂಲಕ ಜಯಂತಿ ಆಚರಣೆಯನ್ನು ಅತ್ಯಂತ ಯಶಸ್ವಿಯಾಗಿಸಲು ಕೈಜೋಡಿಸಬೇಕು. ಈಗಾಗಲೇ ಕಾರ್ಯಕ್ರಮದ ಯಶಸ್ವಿಗೆ ಸಮಿತಿಯ ಪದಾಧಿಕಾರಿಗಳು ಸಕಲ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ ಎಂದರು.
ಬುಡಕಟ್ಟು ಹೋರಾಟಗಾರ ಬಸಪ್ಪ ಮಾತನಾಡಿ, ಕಾರ್ಯಕ್ರಮದಂದು ಮುಂಜಾನೆ ೯ ಗಂಟೆಗೆ ಸಾಂಸ್ಕೃತಿಕ ಜಾಥಾವು ಮರೂರು ಆಶ್ರಮ ಶಾಲೆಯಿಂದ ಬೆಳಿಗ್ಗೆ ೯ ಗಂಟೆಗೆ ಆರಂಭಗೊಳ್ಳಲಿದೆ. ಬಿರ್ಸಾಮುಂಡಾ ರವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿಟ್ಟು ಮೆರವಣಿಗೆ ಮೂಲಕ ಸಮುದಾಯ ಭವನವನ್ನು ತಲುಪಲಿದೆ. ಸಮುದಾಯದ ಹಿರಿಯರಾದ ಪಿ.ಸಿ. ಮಾದ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಪೊನ್ನಂಪೇಟೆಯ ರಾಮಕೃಷ್ಣ ಶಾರದಾ ಆಶ್ರಮದ ಸ್ವಾಮೀಜಿಗಳು ಸೇರಿದಂತೆ ಇನ್ನಿತರ ಪ್ರಮುಖರು ಭಾಗವಹಿಸಲಿದ್ದಾರೆ. ಕಲಾ ತಂಡಗಳು ಸಾಂಸ್ಕೃತಿಕ ಪ್ರದರ್ಶನವನ್ನು ನೀಡಲಿವೆ ಎಂದು ಮಾಹಿತಿ ನೀಡಿದರು.
ಲ್ಯಾಂಪ್ ಸೊಸೈಟಿಯ ಉಪಾಧ್ಯಕ್ಷ ಜೆ.ಆರ್. ಪುಷ್ಪ ಮಾತನಾಡಿ, ವೇದಿಕೆ ಕಾರ್ಯಕ್ರಮವು ಮಧ್ಯಾಹ್ನ ೧೧ ಗಂಟೆಗೆ ಸಮುದಾಯ ಭವನದಲ್ಲಿ ಆರಂಭಗೊಳ್ಳಲಿದೆ. ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಪಿ.ಸಿ.ರಾಮು ಅಧ್ಯಕ್ಷತೆಯಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರೊ.ಡಾ. ಜಡೇಗೌಡ ಉದ್ಘಾಟಿಸಲಿದ್ದು, ಪ್ರಾಸ್ತಾವಿಕವಾಗಿ ಲ್ಯಾಂಪ್ ಸೊಸೈಟಿಯ ಅಧ್ಯಕ್ಷ ಪಿ.ಕೆ. ಮಣಿಕುಂಞ ಮಾತನಾಡಲಿದ್ದಾರೆ. ಮುಖ್ಯ ಭಾಷಣಕಾರರಾಗಿ ನಿವೃತ್ತ ಉಪನ್ಯಾಸಕ ಡಾ.ಜೆ. ಸೋಮಣ್ಣ ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೈಕೋರ್ಟ್ನ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ, ಮಾಜಿ ಎಂಎಲ್ಸಿ ಸಿ.ಎಸ್. ಅರುಣ್ ಮಾಚಯ್ಯ, ತಿತಿಮತಿ ಗ್ರಾ.ಪಂ. ಅಧ್ಯಕೆÀ್ಷ ಕೆ. ಸರಸ್ವತಿ, ದೇವರಪುರ ಗ್ರಾ.ಪಂ. ಅಧ್ಯಕೆÀ್ಷ ಪಿ.ಜೆ. ಶಾರದ, ಮಾಯಮುಡಿ ಗ್ರಾ.ಪಂ. ಅಧ್ಯಕೆÀ್ಷ ಎಂ.ಪಿ. ಮೀನಾ, ಸಮಗ್ರ ಗಿರಿಜನ ಅಭಿವೃದ್ಧಿ ಸಮನ್ವಯ ಅಧಿಕಾರಿ ಎಸ್. ಹೊನ್ನೆಗೌಡ, ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಎನ್.ಎಸ್. ಪ್ರಶಾಂತ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಗಿರಿಜನ ಕಲ್ಯಾಣಾಧಿಕಾರಿ ಡಿ.ಜೆ. ಗುರುಶಾಂತಪ್ಪ, ಬಿಇಒ ಶ್ರೀಶೈಲ ಬಿಳಗಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಎನ್.ಬಿ. ಚಂದ್ರಶೇಖರ್, ಗಿರಿಜನ ಮುಖಂಡರಾದ ಪಿ.ಎಂ. ಚುಬ್ರು, ಸೇರಿದಂತೆ ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆಯ ಅಧ್ಯಕ್ಷ ರಮೇಶ್ ಮಾತನಾಡಿ, ಕಾರ್ಯಕ್ರಮದ ಅಂಗವಾಗಿ ಜೇನುಕುರುಬರ, ಯರವರ, ಆದಿವಾಸಿಗಳ ವಿವಿಧ ನೃತ್ಯಗಳು, ಕೋಲಾಟ, ವೇದಿಕೆ ಕಾರ್ಯಕ್ರಮದಲ್ಲಿ ಮೂಡಿಬರಲಿವೆೆ. ವಿವಿಧ ಭಾಗದಿಂದ ಆದಿವಾಸಿಗಳ ಕಲಾತಂಡಗಳು ಭಾಗವಹಿಸಲಿದ್ದು, ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಲಿದೆ ಎಂದರು.
ಸಭೆಯಲ್ಲಿ ಮಾಜಿ ಜಿ.ಪಂ. ಸದಸ್ಯರಾದ ಪಿ.ಆರ್. ಪಂಕಜ, ಆದಿವಾಸಿ ಮುಖಂಡರಾದ ಜೆ.ಕೆ. ಸೋಮಯ್ಯ. ಪಿ.ರವಿನಾ ಮಣಿಕುಂಞ, ವೈ.ಎಂ. ಪ್ರಕಾಶ್, ಪಿ.ಎಂ. ಚುಬ್ರು, ಜೆ.ಕೆ. ತಿಮ್ಮ, ಜಿ.ಬಿ. ರಮೇಶ್, ಪಿ.ಕೆ. ಸಿದ್ದಪ್ಪ, ಪಿ.ಜೆ. ಮಲ್ಲಪ್ಪ, ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಮಣಿಕುಂಞ ಸ್ವಾಗತಿಸಿ, ವಂದಿಸಿದರು.