ಕುಶಾಲನಗರ, ನ. ೧೧: ಕಾವೇರಿ ನದಿ ಸಂರಕ್ಷಣೆ ಸಂಬAಧ ತಲಕಾವೇರಿ ಕ್ಷೇತ್ರದಿಂದ ಜಿಲ್ಲೆಯ ಗಡಿಭಾಗ ಶಿರಂಗಾಲ ಗ್ರಾಮದ ತನಕ ೨೪ ಗ್ರಾಮಗಳ ಕಾವೇರಿ ನದಿ ತಟದಲ್ಲಿ ಹುಣ್ಣಿಮೆ ದಿನದಂದು ಏಕಕಾಲದಲ್ಲಿ ಮಹಾ ಆರತಿ ಬೆಳಗುವ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತನೆ ಹರಿಸಲಾಗಿದೆ ಎಂದು ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು, ಕುಶಾಲನಗರದಲ್ಲಿ ಹುಣ್ಣಿಮೆ ಅಂಗವಾಗಿ ನಡೆದ ೧೩೮ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಸಕರುಗಳ ನೇತೃತ್ವದಲ್ಲಿ ಪ್ರಥಮ ಬಾರಿಗೆ ಸರ್ಕಾರದ ಮೂಲಕ ನಡೆದ ಕಾವೇರಿ ನದಿ ಉತ್ಸವ ಸಂದರ್ಭ ಭಾಗಮಂಡಲ ಸಂಗಮ ಮತ್ತು ಕುಶಾಲನಗರ ಕಾವೇರಿ ಆರತಿ ಕ್ಷೇತ್ರದಲ್ಲಿ ಗಂಗಾ ಆರತಿ ಮಾದರಿಯಲ್ಲಿ ಜೀವನದಿ ಕಾವೇರಿಗೆ ಅಕ್ಟೋಬರ್ ೨೧ ರಂದು ಆರತಿ ಕಾರ್ಯಕ್ರಮ ನಡೆದಿದೆ. ಈ ಮೂಲಕ ಜನರಿಗೆ ನದಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆ ಎಂದರು.

ತಲಕಾವೇರಿ, ಭಾಗಮಂಡಲ ಮತ್ತು ಕುಶಾಲನಗರದಲ್ಲಿ ಯಶಸ್ವಿಯಾಗಿ ನಡೆದ ಕಾವೇರಿ ನದಿ ಉತ್ಸವ ಆಯೋಜಿಸಿದ ಕಾವೇರಿ ನೀರಾವರಿ ನಿಗಮ ಮತ್ತು ಕಾರ್ಯಕ್ರಮದಲ್ಲಿ ಕೈಜೋಡಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಸಂಘ-ಸAಸ್ಥೆಗಳು ಮತ್ತು ಸಾರ್ವಜನಿಕರಿಗೆ ಈ ಸಂದರ್ಭ ಕೃತಜ್ಞತೆ ಸಲ್ಲಿಸಿದರು.

ಅರ್ಚಕ ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ಅಷ್ಟೋತ್ತರ, ಕುಂಕುಮಾರ್ಚನೆ ನಂತರ ನದಿಗೆ ಮಹಾ ಆರತಿ ಬೆಳಗಲಾಯಿತು. ಕಾವೇರಿ ಮಹಾ ಆರತಿ ಬಳಗದ ಪ್ರಮುಖರಾದ ಮಂಡೆಪAಡ ಬೋಸ್ ಮೊಣ್ಣಪ್ಪ, ಕೆ.ಆರ್. ಶಿವಾನಂದನ್, ಬಿ.ಜೆ. ಅಣ್ಣಯ್ಯ, ವೈಶಾಖ್, ಪ್ರವೀಣ್, ಮಂಡುವAಡ ಜೋಯಪ್ಪ, ಮಹಿಳಾ ಭಜನಾ ಮಂಡಳಿಯ ಪದ್ಮ ಪುರುಷೋತ್ತಮ್, ಶೈಲಾ ಪುಂಡರೀಕಾಕ್ಷ ಮತ್ತಿತರರು ಇದ್ದರು.