ಗೋಣಿಕೊಪ್ಪ: ಪೊನ್ನಂಪೇಟೆ ಗ್ರಾ.ಪಂ. ವ್ಯಾಪ್ತಿಯ ಪೌತಿ ಖಾತೆ ಆಂದೋಲನ ಪೊನ್ನಂಪೇಟೆ ತಾಲೂಕು ಉಪತಹಶೀಲ್ದಾರ್ ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಪೊನ್ನಂಪೇಟೆ ನಾಡ ಕಚೇರಿಯಲ್ಲಿ ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಸಾರ್ವಜನಿಕರಿಗೆ ಅಗತ್ಯ ದಾಖಲಾತಿಗಳಾದ ಪಹಣಿ, ವಂಶವೃಕ್ಷ, ಮರಣ ದೃಢೀಕರಣ ಪತ್ರ, ನೈಜ ದೃಢೀಕೃತ ದಾಖಲಾತಿಗಳೊಂದಿಗೆ ಹಾಜರಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳವಂತೆ ತಿಳಿಸಿದರು.
ರಾಜಸ್ವ ನಿರೀಕ್ಷಕ ಸುಧೀಂದ್ರ ಪಿ.ಕೆ. ಪೌತಿ ಖಾತೆ ಬದಲಾವಣೆ, ಪಟ್ಟೆದಾರಿಕೆ ಬದಲಾವಣೆ ಅರ್ಜಿಗಳನ್ನು ಪರಿಶೀಲಿಸಿ ಸ್ವೀಕರಿಸಿದರು. ಹಳಿಗಟ್ಟು ಹುದೂರು ಗ್ರಾಮದ ರೈತರು ಪೌತಿ ಖಾತೆ ಆಂದೋಲನದ ಸದುಪಯೋಗ ಪಡೆದುಕೊಂಡರು
ಪೊನ್ನAಪೇಟೆ ಹೋಬಳಿಯ ಗ್ರಾಮ ಲೆಕ್ಕಾಧಿಕಾರಿಗಳಾದ ಪೂರ್ಣಿಮಾ, ಕಾವ್ಯ, ಮಹೇಶ್ ಟಿ.ಕೆ., ಗ್ರಾಮ ಸಹಾಯಕರುಗಳಾದ ಪೂವಯ್ಯ, ನಾಗರಾಜು, ಜತಿನ್ ಹಾಜರಿದ್ದರು.ನಾಪೋಕ್ಲು: ಸಮೀಪದ ಎಮ್ಮೆಮಾಡು ಗ್ರಾಮದಲ್ಲಿ ಪೌತಿ ಖಾತೆ ಆಂದೋಲನ ನಡೆಯಿತು. ಉಪತಹಶೀಲ್ದಾರ್ ಸುನಿಲ್ ಕುಮಾರ್, ಕಂದಾಯ ಪರಿವೀಕ್ಷಕ ರವಿಕುಮಾರ್, ಹೆಮ್ಮೆಮಾಡು ಗ್ರಾಮ ಪಂಚಾಯಿತಿ ಗ್ರಾಮ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಗ್ರಾಮಲೆಕ್ಕಿಗ ಸ್ವಾತಿ ಹಾಗೂ ಸಿಬ್ಬಂದಿಗಳು, ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡು ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದರು. ಪೌತಿ ಖಾತೆಗೆ ಸಂಬAಧಿಸಿದ ಕಡತಗಳನ್ನು ಪರಿಶೀಲಿಸಲಾಯಿತು.*ಗೋಣಿಕೊಪ್ಪ: ಬಾಳೆಲೆ ಹೋಬಳಿಯಲ್ಲಿ ಪೌತಿ ಖಾತೆ ಆಂದೋಲನವನ್ನು ಉಪತಹಶೀಲ್ದಾರ್ ರವಿಕುಮಾರ್ ಉಪಸ್ಥಿತಿಯಲ್ಲಿ ನಡೆಸಲಾಯಿತು.
ಪೊನ್ನಪ್ಪಸಂತೆ ಕಲ್ಲುಗುಡ್ಡೇಶ್ವರ ರಾಧ ಸ್ವಸಹಾಯ ಸಂಘ ಸಭಾಂಗಣದಲ್ಲಿ ಪೌತಿ ಖಾತೆ ಆಂದೋಲನ ನಡೆಯಿತು. ಬಾಳೆಲೆ, ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ರೈತರು ಇದರ ಅನುಕೂಲತೆಯನ್ನು ಪಡೆದುಕೊಂಡರು.
ಬಾಳೆಲೆ ಹೋಬಳಿಯ ಕಂದಾಯ ಪರಿವೀಕ್ಷಕ, ಗ್ರಾಮ ಲೆಕ್ಕಿಗ ಜಿ.ಕೆ. ನಿತಿನ್, ಗ್ರಾಮ ಸಹಾಯಕ ರಾಧ ಸೋಮಯ್ಯ ಇದ್ದರು.