ಸುಂಟಿಕೊಪ್ಪ, ನ. ೧೧: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಿAದ ‘ಸೆಸ್ಕ್’ಗೆ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಪಾವತಿಸಲು ಬಾಕಿ ಇರುವುದರಿಂದ ಪಂಚಾಯಿತಿ ಕಚೇರಿಯ ವಿದ್ಯುತ್ ಸಂಪರ್ಕ ಕಡಿತಗೊಂಡು ದಿನನಿತ್ಯದ ಚಟುವಟಿಕೆ ಸ್ತಬ್ಧಗೊಂಡಿದೆ.

ಸುಂಟಿಕೊಪ್ಪ ಗ್ರಾ.ಪಂ.ನಿAದ ‘ಸೆಸ್ಕ್’ಗೆ ರೂ. ೨೮ ಲಕ್ಷದ ೬೬ ಸಾವಿರಗಳ ವಿದ್ಯುತ್ ಬಿಲ್ ಪಾವತಿಯಾಗಬೇಕಾಗಿದೆ. ಈ ಬಗ್ಗೆ ಹಲವು ಬಾರಿ ಬಿಲ್ ಪಾವತಿಸಲು ನೋಟೀಸ್ ನೀಡಿದ್ದರೂ ಸಕಾರಾತ್ಮಕ ಸ್ಪಂದನ ದೊರಕದೆ ಇರುವುದರಿಂದ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಗ್ರಾಮ ಪಂಚಾಯಿತಿ ಕಚೇರಿಯ ವಿದ್ಯುತ್ ಸಂಪರ್ಕವನ್ನು ತಾ. ೪ ರಂದು ಕಡಿತಗೊಳಿಸಲಾಗಿದೆ ಎಂದು ‘ಸೆಸ್ಕ್’ ಕಿರಿಯ ಅಭಿಯಂತರ ಜೈದೀಪ್ ತಿಳಿಸಿದ್ದಾರೆ.

ಸುಂಟಿಕೊಪ್ಪ ಪಂಚಾಯಿತಿಯ ಹಿಂದಿನ ಆಡಳಿತ ಮಂಡಳಿ ಹಾಗೂ ಅದಕ್ಕಿಂತ ಹಿಂದೆ ಆಡಳಿತ ನಡೆಸಿದವರ ಅವಧಿಯಲ್ಲಿ ೪೦ ಲಕ್ಷ ರೂ ವಿದ್ಯುತ್ ಶುಲ್ಕ ಪಾವತಿಸಲು ಬಾಕಿ ಉಳಿಸಿಕೊಂಡಿದ್ದರಿAದ ಈಗಿನ ಆಡಳಿತ ಮಂಡಳಿಗೆ ದೊಡ್ಡ ಹೊಡೆತ ಬಿದ್ದಿದೆ. ೨೦೨೨ ಮಾರ್ಚ್ ೨೨ ರಂದು ‘ಸೆಸ್ಕ್’ ನಿಂದ ಇಲ್ಲಿನ ಪಂಚಾಯಿತಿ ಕಛೇರಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಆ ನಂತರ ಎಚ್ಚೆತುಕೊಂಡ ಪಂಚಾಯಿತಿ ರೂ. ೩೦ ಲಕ್ಷ ಪಾವತಿಸಿದ್ದರು. ಪತ್ರಿಕೆಗೆ ಲಭ್ಯವಾದ ಮಾಹಿತಿಯಂತೆ ಒಟ್ಟು ರೂ. ೬೭ ಲಕ್ಷಕ್ಕೂ ಹೆಚ್ಚು ಮೊತ್ತದ ವಿದ್ಯುತ್ ಬಿಲ್ ಬಾಕಿಯಾಗಿದ್ದು, ಈ ಪೈಕಿ ರೂ. ೩೦ ಲಕ್ಷ ಮತ್ತು ರೂ. ೧೭ ಲಕ್ಷದ ೨೫ ಸಾವಿರವನ್ನು ೨ ಹಂತದಲ್ಲಿ ಪಾವತಿ ಮಾಡಲಾಗಿದೆ. ಆದರೂ ರೂ. ೨೮ ಲಕ್ಷಕ್ಕೂ ಅಧಿಕ ಬಾಕಿ ಇರುವ ಹಿನ್ನೆಲೆಯಲ್ಲಿ ಸೆಸ್ಕೆಂನ ಮೇಲಾಧಿಕಾರಿಗಳ ಆದೇಶದಂತೆ ವಿದ್ಯುತ್ ಕಡಿತಗೊಳಿಸಲಾಗಿದೆ. ಈ ಹಿಂದೆಯೇ ಹೇಳಿದಂತೆ ಸರಕಾರ ಗ್ರಾಮ ಪಂಚಾಯಿತಿಗಳಿಗೆ ವಿದ್ಯುತ್ ಬಿಲ್ ಪಾವತಿಗಾಗಿ ವಿಶೇಷ ಅನುದಾನ ನೀಡದ ಹೊರತು ಈ ಸಮಸ್ಯೆಗೆ ಪರಿಹಾರ ಇಲ್ಲ ಎಂಬದು ಗ್ರಾ.ಪಂ. ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಹಾಗೂ ಆಡಳಿತ ಮಂಡಳಿ ಅಭಿಪ್ರಾಯವಾಗಿದೆ.

ಪ್ರತಿ ತಿಂಗಳು ಕುಡಿಯುವ ನೀರಿನ ಮೋಟಾರ್, ಬೀದಿ ದೀಪ, ಪಂಚಾಯಿತಿ ಕಛೇರಿಯ ವಿದ್ಯುತ್ ಬಿಲ್ ಸರಾಸರಿ ರೂ. ೨ ಲಕ್ಷದ ೬೦ ಸಾವಿರದಿಂದ ರೂ. ೨ ಲಕ್ಷದ ೯೦ ಸಾವಿರದವರೆಗೆ ವೆಚ್ಚವಾಗುತ್ತದೆ. ಅದರಲ್ಲೂ ಪಂಚಾಯಿತಿಯ ವತಿಯಿಂದ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ೬ ಹೈಮಾಸ್ಟ್ ಬೀದಿ ದೀಪಕ್ಕೆ ದುಬಾರಿ ವಿದ್ಯುತ್ ಖರ್ಚು ಆಗುತ್ತಿದೆ.

(ಮೊದಲ ಪುಟದಿಂದ) ಕುಡಿಯುವ ನೀರಿಗೆ ಮತ್ತಷ್ಟು ವೆಚ್ಚ ತಗುಲುತ್ತಿದೆ. ಈಗಾಗಲೇ ಪಂಚಾಯಿತಿ ಕಚೇರಿಯ ವಿದ್ಯುತ್ ಸಂಪರ್ಕ ಕಡಿತವಾಗಿ ೭ ದಿನ ಕಳೆದಿದ್ದು, ಪಂಚಾಯಿತಿ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಡಕಾಗಿದೆ. ಅಭಿವೃದ್ಧಿ ಕೆಲಸಕ್ಕೂ ಕುತ್ತು ಬಂದಿದೆ. ‘ಸೆಸ್ಕ್’ಗೆ ಪಂಚಾಯಿತಿಯಿAದ ಬಾಕಿ ಇರುವ ಹಣ ಒಂದೆರೆಡು ದಿನಗಳಲ್ಲಿ ಪಾವತಿಸದಿದ್ದಲ್ಲಿ ಬೀದಿ ದೀಪದ ಸಂಪರ್ಕವನ್ನು ಮುಂದಿನ ದಿನಗಳಲ್ಲಿ ಕಡಿತಗೊಳಿಸಲು ಮೇಲಾಧಿಕಾರಿಗಳ ಆದೇಶ ಬರುವ ಸಾಧ್ಯತೆಯು ಇದೆ ಎಂದು ಕಿರಿಯ ಅಭಿಯಂತರ ಜೈದೀಪ್ ತಿಳಿಸಿದ್ದಾರೆ.