ಮಡಿಕೇರಿ, ನ.೧೨: ಕರ್ನಾಟಕ ಸರಕಾರದ ದಂತಭಾಗ್ಯ ಯೋಜನೆ ಯನ್ನು ಕೊಡಗು ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಅನುಷ್ಠಾನಗೊಳಿಸಲಾಗಿದೆ ಎಂದು ಕೊಡಗು ದಂತ ಮಹಾವಿದ್ಯಾಲಯದ ಉಪ ಪ್ರಾಂಶುಪಾಲ ಡಾ. ಜಿತೇಶ್ ಜೈನ್ ಹೇಳಿದರು. ಕರ್ನಾಟಕ ಸರಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ರಾಷ್ಟಿçÃಯ ಬಾಯಿ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಕೊಡಗು ದಂತ ಮಹಾವಿದ್ಯಾಲಯದ ಸಹಯೋಗದಲ್ಲಿ ವೀರಾಜಪೇಟೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮೈಸೂರು ವಿಭಾಗ ದಂತ ಆರೋಗ್ಯಾಧಿಕಾರಿಗಳ ವ್ಯವಸ್ಥಿತ ಸಂವಾದ ಹಾಗೂ ವೈಜ್ಞಾನಿಕ ತರಬೇತಿ ಕಾರ್ಯಾಗಾರ 'ದಂತ ಸಮ್ಮಿಲನ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾಲೇಜು ವತಿಯಿಂದ ಕೊಡಗು ಜಿಲ್ಲೆ ಮಾತ್ರವಲ್ಲದೆ ಬೇರೆ ಜಿಲ್ಲೆಗಳಿಗೂ ತೆರಳಿ ಯೋಜನೆಯನ್ನು ಅನುಷ್ಠಾನ ಗೊಳಿಸಲು ಸಹಕರಿಸಲಾಗುತ್ತಿದೆ ಎಂದು ತಿಳಿಸಿದರು. ಕೊಡಗು ಜಿಲ್ಲೆಯ ಆತಿಥ್ಯದಲ್ಲಿ ನಡೆದ ಮೈಸೂರು ವಿಭಾಗದ ಈ ಕಾರ್ಯಾಗಾರವನ್ನು ಉದ್ಘಾಟಿಸಿದ ‘ಓರಲ್ ಹೆಲ್ತ್ ಪಾಲಿಸಿ ಮತ್ತು ಡೆಂಟಲ್ ಹೆಲ್ತ್’ ಉಪನಿರ್ದೇಶಕ ಡಾ. ಲೋಕೇಶ್ ಪಿ. ಮಾತನಾಡಿ ದಂತ ಆರೋಗ್ಯಾಧಿಕಾರಿಗಳ ಕಾರ್ಯಕ್ಷಮತೆ ಹಾಗೂ ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಉತ್ತಮ ಚಿಕಿತ್ಸೆಯನ್ನು ನೀಡಲು ಕಾರ್ಯಾಗಾರವನ್ನು ಏರ್ಪಡಿಸ ಲಾಗಿದ್ದು, ಇದರ ಸದುಪಯೋಗಪಡಿಸಿ ಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ವೆಂಕಟೇಶ್ ಆರ್. ಮಾತನಾಡಿ ಕಾರ್ಯಾಗಾರಗಳಿಂದ ದಂತ ಆರೋಗ್ಯಾಧಿಕಾರಿಗಳು ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ ಎಂದರು.
ಜಿಲ್ಲಾ ದಂತ ನೋಡಲ್ ಅಧಿಕಾರಿ ಡಾ. ರೇವಣ್ಣ ಜಿ.ಎಂ. ಸ್ವಾಗತ ಕೋರಿದರು. ವಿಭಾಗೀಯ ಮೇಲ್ವಿಚಾರಕ ಡಾ. ಸತ್ಯಪ್ರಕಾಶ್ ದೊಂಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಘಾಟನಾ ಕಾರ್ಯಕ್ರಮವನ್ನು ಡಾ. ಅನಿತಾ ಮತ್ತು ಡಾ. ಅಫ್ರೀನ್ ನಡೆಸಿಕೊಟ್ಟರು. ಡಾ. ನೂರ್ ಫಾತೀಮಾ ವಂದಿಸಿದರು.
ದಂತ ಸಮ್ಮಿಲನ ಕಾರ್ಯಗಾರಕ್ಕೆ ೮ ಜಿಲ್ಲೆಗಳಿಂದ ದಂತ ಆರೋಗ್ಯಾಧಿಕಾರಿಗಳು ಆಗಮಿಸಿದ್ದರು.