ನಾಪೋಕ್ಲು, ನ. ೧೨: ಜನಾಂಗದ ಸಾಧಕರನ್ನು ಸನ್ಮಾನಿಸುವ ಮೂಲಕ ಯುವ ಜನಾಂಗಕ್ಕೆ ಸ್ಪೂರ್ತಿಯನ್ನು ನೀಡುವ ಕೆಲಸವನ್ನು ಗೌಡ ಸಮಾಜ ಮಾಡುತ್ತಿದೆ ಎಂದು ಗೌಡ ಸಮಾಜದ ಅಧ್ಯಕ್ಷ ಪಾಣತಲೆ ಹರೀಶ್ ಹೇಳಿದರು. ಸಮೀಪದ ಮೂರ್ನಾಡಿನ ಗೌಡ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಮೂರ್ನಾಡು ಗೌಡ ಸಮಾಜದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರತಿಭಾವಂತರಿದ್ದಾರೆ. ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಗೌಡ ಸಮಾಜ ಮಾಡುತ್ತಿದೆ. ಜನಾಂಗದ ಸಂಸ್ಕೃತಿಯನ್ನು ಇಂದಿನ ತಲೆಮಾರಿಗೆ ತಿಳಿಸುವ ಕೆಲಸ ಆಗಬೇಕಿದೆ ಎಂದರು. ಈ ಸಂದರ್ಭ ಗೌಡ ಸಮಾಜದ ನೂತನ ಪ್ರವೇಶ ದ್ವಾರದ ಗೇಟ್ ಅನ್ನು ದಾನಿ ಪಾಣತಲೆ ಸೀತಮ್ಮ ಸೋಮಯ್ಯ ಅವರ ಮಗ ಮೋಹನ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು. ಭಾರದ ಕಲ್ಲು ಎಸೆಯುವ ಅಂರ್ರಾಷ್ಟಿçÃಯ ಕ್ರೀಡಾಪಟು ಪಾರೆಮಜಲು ಕುಸುಮ ಕಾರ್ಯಪ್ಪ ಹಾಗೂ ಅಂರ್ರಾಷ್ಟಿçÃಯ ಹಾಕಿಪಟು ಮೇರುಕಜೆ ಗಣಪತಿ, ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಮಾಜದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮವನ್ನು ಅಂಚೆಮನೆ ದಮಯಂತಿ ನಿರೂಪಿಸಿ, ಕೋರನ ಪ್ರಕಾಶ್ ವಂದಿಸಿದರು.