ಶನಿವಾರಸAತೆ, ನ. ೧೧: ಶನಿವಾರಸಂತೆ ಸಾರ್ವಜನಿಕ ರಸ್ತೆಯಲ್ಲಿ ಮದ್ಯ ಸೇವನೆ ಮಾಡಿ ಕಾರನ್ನು (ಕೆ.ಎ. ೧೩ ಸಿ.೦೩೭೪) ಚಾಲನೆ ಮಾಡುತ್ತಿದ್ದ ಕಾರಿನ ಮಾಲೀಕರಿಗೆ ಸೋಮವಾರಪೇಟೆ ನ್ಯಾಯಾಲಯ ರೂ. ೧೦ ಸಾವಿರ ದಂಡ ವಿಧಿಸಿದೆ.

ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ಹುಲುಸೆ ಗ್ರಾಮದ ನಿವಾಸಿ ಹೆಚ್.ಎನ್. ದೇವರಾಜ್ ಮದ್ಯ ಸೇವಿಸಿ ತನ್ನ ಕಾರನ್ನು ಚಾಲನೆ ಮಾಡುತ್ತಿದ್ದು, ಶನಿವಾರಸಂತೆ ಪೊಲೀಸ್ ಆರಕ್ಷಕ ಉಪ ನಿರೀಕ್ಷಕ ಗೋವಿಂದರಾಜ್, ಸಿಬ್ಬಂದಿಗಳಾದ ಸೋಮಶೇಖರ್, ಲೋಹಿತ್, ಲೋಕೇಶ್, ಪ್ರದೀಪ್, ಕುಮಾರ್ ಇತರರು ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾಗ ಈ ಕಾರಿನ ಚಾಲಕನನ್ನು ಆಲ್ಕೊಮೀಟರ್‌ಗೆ ಒಳಪಡಿಸಲಾಗಿ, ಮದ್ಯಸೇವನೆ ದೃಢಪಟ್ಟಿದ್ದು, ಪ್ರಕರಣ ದಾಖಲಾಗಿದೆ. ಕಾರನ್ನು ವಶಪಡಿಸಿಕೊಂಡ ಪೊಲೀಸರು, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ಚಾಲಕ ತಾ. ೯ ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದು, ರೂ. ೧೦ ಸಾವಿರ ದಂಡ ಪಾವತಿ ಮಾಡಿದ್ದಾನೆ.