ಮಡಿಕೇರಿ, ನ. ೧೨: ಕಾವೇರಿ ನಿಸರ್ಗಧಾಮ, ಹಾರಂಗಿ- ಚಿಕ್ಲಿಹೊಳೆ ಜಲಾಶಯ, ದುಬಾರೆ ಆನೆ ಶಿಬಿರ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳನ್ನು ಒಳಗೊಂಡಿರುವ ಕುಶಾಲನಗರ ತಾಲೂಕಿನ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ಪ್ರಮುಖ ರಸ್ತೆಗಳು ಹದಗೆಟ್ಟು ಹೋಗಿದ್ದು, ಪ್ರವಾಸಿಗರ ವಾಹನಗಳು ಸೇರಿದಂತೆ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ತೊಡಕುಂಟಾಗಿದೆ.
ಕೂಡಿಗೆ
ಕೂಡುಮAಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಸನ ಹೆದ್ದಾರಿಗೆ ಹೊಂದಿಕೊAಡAತೆ ಇರುವ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ತೆರಳುವ ರಸ್ತೆಯು ಹಾರಂಗಿ ರಸ್ತೆಗೆ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಯು ಕಳೆದ ೫ ವರ್ಷಗಳಿಂದ ಸಮರ್ಪಕ ರಸ್ತೆ ಕಾಮಗಾರಿ ನಡೆಯದೆ, ಭಾರೀ ಗುಂಡಿಗಳಿAದಾಗಿ ಈ ಭಾಗದಲ್ಲಿ ವಾಹನಗಳ ಚಾಲನೆಗೆ ತೊಂದರೆ ಆಗುತ್ತಿದೆ.
ಈ ರಸ್ತೆಯು ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ದೊಡ್ಡತ್ತೂರು, ಆನೆಕೆರೆ, ಸೇರಿದಂತೆ ನಾಲ್ಕು ಉಪ ಗ್ರಾಮಗಳಿಗೆ ತೆರಳುವ ಮಾರ್ಗವಾಗಿದೆ.
ಈ ರಸ್ತೆಯನ್ನು ಸರಿಪಡಿಸಲು ಜಿಲ್ಲಾ ಪಂಚಾಯಿತಿ ಅನುದಾನವನ್ನು ಬಳಕೆ ಮಾಡಲು ಅವಕಾಶವಿದ್ದರೂ ಸಹ ಇದುವರೆಗೆ ಸರಿಪಡಿಸಿಲ್ಲ. ಹಾರಂಗಿ ಅಚ್ಚುಕಟ್ಟು ಪ್ರದೇಶವಾಗಿರುವ ಕಾರಣ ರಸ್ತೆ ದುರಸ್ತಿ ಜವಾಬ್ದಾರಿ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯದ್ದಾಗಿದ್ದು, ಕಳೆದ ೪ ವರ್ಷಗಳಿಂದ ಕಾವೇರಿ ನಿಗಮದ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಹೋಗಿದೆ ವಿನÀಃ ಇದುವರೆಗೂ ಯಾವುದೇ ಪ್ರಕ್ರಿಯೆ ನಡೆದಿರುವುದಿಲ್ಲ.
ಆದರೆ ವರ್ಷಂಪ್ರತಿ ನಡೆಯುವ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವದ ಅಂಗವಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಹೆದ್ದಾರಿ ರಸ್ತೆಯಿಂದ ದೇವಾಲಯದವರೆಗೆ ಗುಂಡಿ ಮುಚ್ಚಲಾಗುತ್ತಿದೆ. ನಂತರ ರಥೋತ್ಸವದ ಕಾರ್ಯಕ್ರಮ ನಡೆಯುತ್ತದೆ. ಆದರೆ ಒಂದು ಮಳೆಗೆ ಗುಂಡಿ ಮುಚ್ಚಿದ ಮಣ್ಣು ನೀರಿನಲ್ಲಿ
(ಮೊದಲ ಪುಟದಿಂದ) ಕೊಚ್ಚಿಹೋಗಿ ಮತ್ತೆ ಗುಂಡಿಮಯವಾಗುತ್ತಿದೆ. ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿಗಳ ಮೂಲಕ ಕಾಂಕ್ರೀಟ್ ರಸ್ತೆಯ ಕಾಮಗಾರಿಗೆ ರಾಜ್ಯ ಮಟ್ಟಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
-ಕೆ.ಕೆ. ನಾಗರಾಜ ಶೆಟ್ಟಿ.ಚೆಟ್ಟಳ್ಳಿ : ಹಲವು ತಿರುವುಗಳ ಇಕ್ಕಟ್ಟಿನಿಂದ ಕೂಡಿದ ಚೆಟ್ಟಳ್ಳಿ- ಮಡಿಕೇರಿ ರಸ್ತೆಯ ದುಸ್ಥಿತಿ ಹೇಳತೀರದು. ಮಳೆಗಾಲ ಬಂತೆAದರೆ ಸಾಕು ಚೆಟ್ಟಳ್ಳಿ -ಕತ್ತಲೆಕಾಡು ನಡುವಿನ ರಸ್ತೆಗಳುದ್ದಕ್ಕೂ ನಿರಂತರ ಬರೆಜರಿತ, ರಸ್ತೆ ಕುಸಿತ ಚಿತ್ರಣ. ಅಬ್ಯಾಲ ಎಂಬಲ್ಲಿ ಒಂದು ಬದಿ ಬರೆಯಾದರೆ ಮತ್ತೊಂದು ಬದಿ ಪ್ರಪಾತ. ಕಳೆದ ಎರಡು ವರ್ಷಗಳ ಹಿಂದಿನ ಮಹಾಮಳೆಗೆ ಭಾರೀ ಭೂಕುಸಿತ ಉಂಟಾದ ಪರಿಣಾಮ ಬರೆಜರಿತದೊಂದಿಗೆ ಮರಗಳೆಲ್ಲ ರಸ್ತೆಗೆ ಕುಸಿದು ತಿಂಗಳುಗಳವರೆಗೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ವಾಹನಗಳೆಲ್ಲ ಚೆಟ್ಟಳ್ಳಿ -ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿ ತಲುಪುವಂತಾಗಿತ್ತು.
ವಿಪತ್ತು ನಿರ್ವಹಣಾ ಯೋಜನೆಯಡಿ ಸುಮಾರು ೬ ಕೋಟಿಗೂ ಮೇಲ್ಪಟ್ಟ ವೆಚ್ಚದಲ್ಲಿ ರಸ್ತೆ ಬದಿಗೆ ೯ ರಿಂದ ೧೦ ಅವೈಜ್ಞಾನಿಕರೀತಿಯ ಕಳಪೆ ತಡೆಗೋಡೆ ನಿರ್ಮಾಣ ಮಾಡಲಾಯಿತು. ನಿರ್ಮಾಣ ಹಂತದಲ್ಲೇ ತಡೆಗೋಡೆ ಕುಸಿದ ಪರಿಣಾಮ ತಡೆಗೋಡೆಯನ್ನು ಮಣ್ಣಿನೊಳಗೇ ಮುಚ್ಚಿ ಸಲಾಕೆಯ ಗೇಬಿಯನ್ ಮಾದರಿಯ ಒಂದು ತಡೆಗೋಡೆ ನಿರ್ಮಿಸಲಾಗಿದೆ. ಇನ್ನುಳಿದ ಮುಖ್ಯ ರಸ್ತೆಯ ತಡೆಗೋಡೆ ಬಿರುಕುಗೊಂಡರೂ ಹಾಗೇ ಬಿಡಲಾಗಿದೆ. ಮುಂದೆ ಶಾಶ್ವತವಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾದ್ಯತೆ ಇದ್ದು ಯಾರು ಹೊಣೆ?
ಹಲವು ವರ್ಷಗಳ ಹಿಂದೆ ಬರೆಕುಸಿತದ ಜಾಗದಲ್ಲಿ ಮಣ್ಣಿನ ಮೂಟೆಯನ್ನು ತುಂಬಿಡಲಾಗಿದ್ದು, ಅದು ಕಿತ್ತು ಹೋಗಿ ಅಪಾಯಕಾರಿಯಾಗಿದೆ. ಈ ಬಾರಿಯೂ ರಸ್ತೆಯ ಕೆಲವೆಡೆ ತಾತ್ಕಾಲಿಕವಾಗಿ ಮೂಟೆಯನ್ನಿಡಲಾಗಿದೆ.
ಕತ್ತಲೆಕಾಡಿನ ರಸ್ತೆಗಳಿಗೆ ಚರಂಡಿ ನಿರ್ಮಿಸಿದರೂ ಕೆಲವೆಡೆ ಮಣ್ಣುಮುಚ್ಚಿ ಕಾಡು ಬೆಳೆಯತೊಡಗಿದೆ. ಡಾಮರೀಕರಣಗೊಂಡ ರಸ್ತೆಗಳೆಲ್ಲ ಗುಂಡಿಗಳಾಗಿ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಜಿಲ್ಲಾಧಿಕಾರಿಗಳು ಚೆಟ್ಟಳ್ಳಿಯಲ್ಲಿ ಗ್ರಾಮವಾಸ್ತವ್ಯ ಸಂದರ್ಭ ಗ್ರಾಮಸ್ಥರು ಚೆಟ್ಟಳ್ಳಿ- ಕತ್ತಲೆಕಾಡುವರೆಗಿನ ರಸ್ತೆಗಳ ದುಸ್ಥಿತಿಯ ಬಗ್ಗೆ ತಿಳಿಸಿದ್ದರು. ಚೆಟ್ಟಳ್ಳಿ ಗ್ರಾಮ ಸಭೆಗಳಲ್ಲೂ ಚರ್ಚೆಯಾದರೂ ಅಧಿಕಾರಿಗಳ ನಿರ್ಲಕ್ಷö್ಯವೇ ಕಾರಣವೆನ್ನುತ್ತಾರೆ ಗ್ರಾಮಸ್ಥರು.
-ಕರುಣ್ ಕಾಳಯ್ಯ ಸುಂಟಿಕೊಪ್ಪ: ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಗಮನ ಹರಿಸದ ಅಧಿಕಾರಿಗಳ ಬೇಜವಾಬ್ದಾರಿ ನಡೆಯಿಂದ ಮಸಣಿಕಮ್ಮ ದೇವಸ್ಥಾನಕ್ಕೆ ತೆರಳುವ ರಸ್ತೆ ಹಾಳಾಗಿದ್ದು, ಈ ಭಾಗದ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆÀ.
ಸುAಟಿಕೊಪ್ಪ ಗ್ರಾಮ ಪಂಚಾಯತಿಯ ಪಂಪ್ ಹೌಸ್ ರಸ್ತೆಗಾಗಿ ಗುಡ್ಡಪ್ಪ ರೈ ಬಡಾವಣೆಗೆ ತೆರಳುವ ರಸ್ತೆ ಹದಗೆಟ್ಟಿದ್ದು, ಈ ಬಡಾವಣೆಯಲ್ಲಿ ನೂರಾರು ವಾಸದ ಮನೆಗಳು ಮಸಣಿಕಮ್ಮ ದೇವಸ್ಥಾನ, ಅಂಗನವಾಡಿ. ಮಸೀದಿಯಿದ್ದು, ನೂರಾರು ಮೀಟರ್ ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿಗಳಾಗಿವೆ. ಈ ರಸ್ತೆಯಲ್ಲಿ ಸಂಚಾರ ಮಾಡುವುದು ಕಷ್ಟಸಾದ್ಯವಾಗಿದೆ. ಈ ರಸ್ತೆಯಲ್ಲಿ ಎದುರು ಬದುರಾಗಿ ಸಂಚರಿಸುವ ವಾಹನ ಸವಾರರ ಮಧ್ಯೆ ಗುಂಡಿಗಳನ್ನು ತಪ್ಪಿಸುವ ವಿಚಾರದಲ್ಲಿ ಗಲಾಟೆ ನಡೆದು ಕೈ ಕೈ ಮಿಲಾಯಿಸಿದ ಘಟನೆಯು ನಡೆದಿದೆ. ದಿನ ನಿತ್ಯ ಈ ಭಾಗದಲ್ಲಿ ಸಾರ್ವಜನಿಕರು, ವಯೋವೃದ್ಧರು, ಶಾಲಾ ಮಕ್ಕಳು ನಡೆದಾಡಲು ಹರಸಾಹಸ ಪಡಬೇಕಾಗಿದೆ. ಡಾಮರು ಕಿತ್ತು ಹೋಗಿ ಈ ರಸ್ತೆಯಲ್ಲಿ ದ್ವಿಚಕ್ರ ಸೇರಿದಂತೆ ಇತರ ವಾಹನಗಳ ಚಾಲಕರು ಜೀವ ಕೈಯಲ್ಲಿ ಹಿಡಿದು ಚಾಲನೆ ಮಾಡುವಂತಾಗಿದೆ.
ಎರಡು ವರ್ಷದ ಹಿಂದೆ ರಸ್ತೆಯಲ್ಲಿ ೫೦ ಮೀಟರ್ ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದು, ಕಾಂಕ್ರಿಟ್ ರಸ್ತೆ ಎಲ್ಲ್ಲಿದೆ ಎಂದು ಹುಡುಕುವಂತಾಗಿದೆ. ರಸ್ತೆಯ ಬದಿಯಲ್ಲಿ ನಡೆದಾಡುವ ಜನರಿಗೆ ಈ ಭಾಗದಲ್ಲಿ ಸಂಚರಿಸುವ ವಾಹನಗಳು ಹೊಂಡಕ್ಕಿಳಿದ ಸಂದರ್ಭ ಮಳೆಗಾಲದಲ್ಲಿ ಮೈಮೇಲೆ ಕೆಸರು ಹಾರುವುದು ಮಾಮೂಲಾಗಿದೆ. ಗರ್ಭಿಣಿ ಮಹಿಳೆಯರು ಆಸ್ಪತ್ರೆಗೆ ತಲುಪುವ
ಮೊದಲೇ ಹೆÀರಿಗೆಯಾಗುವುದರಲ್ಲಿ ಸಂಶಯವಿಲ್ಲ. ರಸ್ತೆ ನಿರ್ಮಾಣದಲ್ಲಿ ಗುಣಮಟ್ಟದ ಸಾಮಗ್ರಿಗಳನ್ನು ಬಳಕೆ ಮಾಡದಿರುವುದರಿಂದ ಕಾಮಗಾರಿ ಮಾಡಿ ತಿಂಗಳು ಉರುಳುತ್ತಿದ್ದಂತೆ ಗುಂಡಿ ಬಿದ್ದು ರಸ್ತೆ ಹಾಳಾಗುತ್ತಿದ್ದು, ಈ ರಸ್ತೆಯಲ್ಲಿ ದಿನ ನಿತ್ಯ ತೆರಳುವ ಸಾರ್ವಜನಿಕರು ನರಕಯಾತನೆ ಅನುಭವಿಸುವಂತಾಗಿದೆ
-ರಾಜು ರೈ. ಸುಂಟಿಕೊಪ್ಪ ಮಡಿಕೇರಿ: ಚೆಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂಡಕರೆ,ಕೂಡ್ಲೂರು ಚೆಟ್ಟಳ್ಳಿ ಹಾಗೂ ವಾಲ್ನೂರು ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಗುಂಡಿಯಮವಾಗಿದೆ.
ಕಳೆದ ಹತ್ತು ವರ್ಷಗಳಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ವಾಹನ ಚಲಾಯಿಸಲು ಹರಸಾಹಸ ಪಡುವಂತಾಗಿದೆ. ಈ ಮಾರ್ಗದಲ್ಲಿ ಶಾಲಾ ವಾಹನಗಳು ಸಂಚರಿಸುತ್ತಿದ್ದು, ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಬಸ್ಸ್ ನಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.
ಕಳೆದ ಒಂದು ದಶಕದಿಂದ ರಸ್ತೆ ಸಂಪೂರ್ಣ ಗುಂಡಿಗಳಿAದ ಕೂಡಿದ್ದರೂ ಸಹಾ, ಆಡಳಿತ ವರ್ಗ ಇತ್ತ ತಿರುಗಿ ನೋಡದೆ ನಿರ್ಲಕ್ಷ್ಯ ವಹಿಸಿದೆ.
ಕಾಟಾಚಾರಕ್ಕೆ ತೇಪೆÀ ಹಾಕಿದ ಇಲಾಖೆ
ಕಂಡಕರೆ ಹಾಗೂ ಕೂಡ್ಲೂರು ಚೆಟ್ಟಳ್ಳಿ ಭಾಗದ ಜನರಿಗೆ, ತಾಲೂಕು ಕೇಂದ್ರ ಕುಶಾಲನಗರಕ್ಕೆ ಈ ಮಾರ್ಗದಿಂದ ಪ್ರಯಾಣಿಸುವದಾದರೆ,ಕೇವಲ ೧೮ ಕಿಲೋಮೀಟರ್ ಮಾತ್ರ ಇರುವುದು. ಆದರೆ ಹದಗೆಟ್ಟ ರಸ್ತೆಯಿಂದ, ಸುಂಟಿಕೊಪ್ಪ ಮಾರ್ಗವಾಗಿ ೩೫ ಕಿಲೋಮೀಟರ್ ಸಂಚರಿಸಿ ಕುಶಾಲನಗರ ತಲುಪಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ.
ಕಂಡಕರೆ -ಕೂಡ್ಲೂರು ಚೆಟ್ಟಳ್ಳಿ ಸಂಪರ್ಕ ಕಲ್ಪಿಸುವ ಮೂರು ಕೀ.ಮೀ ರಸ್ತೆ ಗುಂಡಿಗಳಿAದಲೇ ಕೂಡಿದೆ.
ಡಾಂಬರು ರಸ್ತೆಯಲ್ಲಿ, ಡಾಂಬರು ಮಾಯವಾಗಿ, ಸಂಪೂರ್ಣ ಗುಂಡಿಗಳೇ ತುಂಬಿವೆೆ. ರಸ್ತೆಯಲ್ಲೇ ಬೃಹತ್ ಕಲ್ಲುಗಳು ಇದ್ದು, ದ್ವಿಚಕ್ರ ವಾಹನ ಸವಾರರು ಈ ಮಾರ್ಗದಲ್ಲಿ ವಾಹನ ಚಲಾಯಿಸಲು ಹಿಂದೇಟು ಹಾಕುತ್ತಿದ್ದಾರೆ. ವರ್ಷದ ಹಿಂದೆ ಲೋಕೋಪಯೋಗಿ ಇಲಾಖೆ ಕಾಟಾಚಾರಕ್ಕೆ ರಸ್ತೆಗೆ ತೇಪೆ ಹಾಕಿ ಕೈತೊಳೆದುಕೊಂಡಿದೆ. ತೇಪೆ ಕಾಮಗಾರಿ ಕೂಡ ಸಂಪೂರ್ಣ ಕಳಪೆಯಿಂದ ಕೂಡಿದ್ದು ಈ ಭಾಗದ ಜನರು ಆಕ್ರೋಶ ಹೊರಹಾಕಿದ್ದಾರೆ. ರಸ್ತೆಯ ಕಳಪೆ ಕಾಮಗಾರಿಯಿಂದ ರಸ್ತೆಯಿಂದ ಜಲ್ಲಿಕಲ್ಲುಗಳು ಎದ್ದು ಬಂದು, ಸಾರ್ವಜನಿಕರಿಗೆ ನಡೆದಾಡಲು ಕೂಡ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.
ದುಬಾರೆಗೆ ಸುಲಭ ಮಾರ್ಗ
ಚೆಟ್ಟಳ್ಳಿ, ಕಂಡಕರೆ ಹಾಗೂ ಕೂಡ್ಲೂರು ಚೆಟ್ಟಳ್ಳಿ ಮಾರ್ಗವಾಗಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ದುಬಾರೆ ಸಾಕಾನೆ ಶಿಬಿರಕ್ಕೆ ತಲುಪಬಹುದಾಗಿದೆ. ಚೆಟ್ಟಳ್ಳಿಯಿಂದ ಕೇವಲ ೯ ಕಿ.ಮೀ. ಅಷ್ಟೇ ದುಬಾರೆಗೆ ಇರುವುದು. ಐದು ವರ್ಷಗಳ ಹಿಂದೆ ಈ ಮಾರ್ಗದಲ್ಲೇ ದುಬಾರೆಗೆ ಪ್ರವಾಸಿಗರು ಸಂಚರಿಸುತ್ತಿದ್ದರು. ಹದಗೆಟ್ಟ ರಸ್ತೆಯಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಕಡಿಮೆಯಾಗಿದೆ. ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ, ಕಾನನ್ ಕಾಡು ಮೂಲಕ ಪ್ರವಾಸಿಗರು ದುಬಾರೆ ತಲುಪುತ್ತಿದ್ದಾರೆ.
ಆಟೋ ಚಾಲಕರ ಹಿಂದೇಟು
ಕAಡಕರೆ ಹಾಗೂ ಕೂಡ್ಲೂರು ಚೆಟ್ಟಳ್ಳಿ ರಸ್ತೆಯಲ್ಲಿ ವಾಹನ ಚಲಾಯಿಸಲು ಆಟೋ ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ರಸ್ತೆಗಳು ಬೃಹತ್ ಹೊಂಡಗಳಿAದ ಕೂಡಿರುವುದರಿಂದ ಆಟೋ ಬೇಗ ದುಸ್ಥಿತಿಗೆ ತಲುಪುತ್ತದೆ ಎಂದು,ಆಟೋ ಚಾಲಕರು ಹಿಂದೇಟು ಹಾಕುತ್ತಿದ್ದಾರೆ.ಕಂಡಕರೆ ಹಾಗೂ ಕೂಡ್ಲೂರು ಚೆಟ್ಟಳ್ಳಿ ಭಾಗದಲ್ಲಿ ಅತೀ ಹೆಚ್ಚು ಕೂಲಿ ಕಾರ್ಮಿಕರೇ ಇದ್ದಾರೆ. ಎಲ್ಲರೂ ಬಾಡಿಗೆಗಾಗಿ ಆಟೋವನ್ನು ಅವಲಂಬಿಸಿದ್ದಾರೆ.
ಆದರೆ ಈ ರಸ್ತೆಯಲ್ಲಿ ಆಟೋಗಳು ಬರುತ್ತಿಲ್ಲ. ಒಂದು ವೇಳೆ ಬಾಡಿಗೆಗೆ ಆಟೋ ಬಂದರೆ, ದುಬಾರಿ ಬಾಡಿಗೆ ನೀಡಬೇಕಾದ ಅನಿವಾರ್ಯ ಪರಿಸ್ಥಿತಿ ಜನರದ್ದು.
ಅಲ್ಲದೇ ಕಂಡಕರೆ ಗ್ರಾಮದವರಿಗೆ ಸಿದ್ದಾಪುರ ತಲುಪಲು ಕೂಡ್ಲೂರು ಚೆಟ್ಟಳ್ಳಿ ಹಾಗೂ ವಾಲ್ನೂರು ಸುಲಭದ ಮಾರ್ಗ. ಆದರೆ ಹದಗೆಟ್ಟ ರಸ್ತೆಯಲ್ಲಿ ವಾಹನ ಚಲಾಯಿಸಲು ಹಿಂದೇಟು ಹಾರುತ್ತಿರುವ ಗ್ರಾಮಸ್ಥರು ಚೆಟ್ಟಳ್ಳಿ ಮಾರ್ಗವಾಗಿ ಸಿದ್ದಾಪುರಕ್ಕೆ ಹೋಗುತ್ತಿದ್ದಾರೆ.
-ಕೆ.ಎಂ. ಇಸ್ಮಾಯಿಲ್ ಕಂಡಕೆರೆ