ವೀರಾಜಪೇಟೆ, ನ. ೧೧: ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಇಲ್ಲದಿದ್ದಲ್ಲಿ ಆಡಳಿತ ವ್ಯವಸ್ಥೆಯ ಎಲ್ಲ್ಲಾ ಹಂತಗಳು ಕುಸಿಯುತ್ತದೆ. ಇದರಿಂದ ಸಮಾಜದ ಸ್ವಾಸ್ಥö್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಚೆಪ್ಪುಡೀರ ಎಂ. ಪೂಣಚ್ಚ ಹೇಳಿದರು.

ನ್ಯಾಯಾಲಯದ ಆವರಣದಲ್ಲಿ ವೀರಾಜಪೇಟೆ ವಕೀಲರ ಸಂಘ ಆಯೋಜಿಸಲಾಗಿದ್ದ

(ಮೊದಲ ಪುಟದಿಂದ) ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಳೆದ ೧೦ ವರ್ಷದ ಹಿಂದೆ ನಾನು ಕೂಡ ವೀರಾಜಪೇಟೆ ನ್ಯಾಯಾಲಯದಲ್ಲಿ ವಕೀಲನಾಗಿ ಕಾರ್ಯ ನಿವಹಿಸುತ್ತಿದ್ದೆ. ವಕೀಲರ ಸಂಘದಲ್ಲಿ ಹಿರಿಯ ವಕೀಲರು ಕಿರಿಯ ವಕೀಲರಿಗೆ ಉತ್ತಮ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ವಕೀಲ ವೃತ್ತಿಯ ಸವಾಲು ಹಾಗೂ ಮಹತ್ವವನ್ನು ಅರಿತುಕೊಂಡು ಜವಾಬ್ದಾರಿ ಯುತವಾಗಿ ಕೆಲಸ ನಿರ್ವಹಿಸುವಂತೆ ಕರೆ ನೀಡಿದರು.

ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್ ಇಂದರೇಶ್ ವೀರಾಜಪೇಟೆ ವಕೀಲರ ಸಂಘ ಪ್ರಾರಂಭವಾಗಿ ೬೦ ವಸಂತಗಳನ್ನು ಕಂಡ ಹಿನ್ನೆಲೆಯಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಪ್ರಾಮಾಣಿಕತೆ ಹಾಗೂ ಪ್ರಾಮುಖ್ಯತೆ ಇದ್ದರೆ ಎಲ್ಲಾ ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಬಹುದು. ನ್ಯಾಯಾಂಗ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ನ್ಯಾಯಾಲಯ ಹಾಗೂ ವಕೀಲರ ಬಾಂದವ್ಯ ಎಣ್ಣೆ ಹಾಗೂ ದೀಪ ಇದ್ದಂತೆ. ಪ್ರಕರಣಗಳನ್ನು ಇತ್ಯರ್ಥ ಗೊಳಿಸುವಾಗ ಪ್ರಮುಖವಾಗಿ ನ್ಯಾಯದಾನ ಉತ್ತಮ ವಾಗಿರಬೇಕು. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಎಂ.ಎ ಬೋಪಣ್ಣ ಹಾಗೂ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ ಪೂಣಚ್ಚ ನ್ಯಾಯಾಂಗ ವ್ಯವಸ್ಥೆಯ ಎರಡು ನಕ್ಷತ್ರಗಳು ಎಂದು ಬಣ್ಣಿಸಿದರು.

ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಶುಕೂರೆ ಕಮಾಲ್ ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರಿಗೆ ನಂಬಿಕೆ ಇದೆ. ಕಾನೂನು ವೈಫಲ್ಯವಾದರೆ ಜನರ ನಿರೀಕ್ಷೆ ಕೂಡ ಹುಸಿಯಾಗುತ್ತದೆ ಎಂದರು.

ರಾಜ್ಯ ಉಚ್ಚ ನ್ಯಾಯಾಲಯದ ಅಡ್ವಕೇಟ್ ಜನರಲ್ ದ್ಯಾನ್ ಚಿಣ್ಣಪ್ಪ, ಜಿಲ್ಲಾ ಅಪರ ನ್ಯಾಯಾಧೀಶೆ ಸುಜಾತ, ಹಿರಿಯ ಸಿವಿಲ್ ನ್ಯಾಯಾಧೀಶ ಲೋಕೇಶ್, ಪ್ರಧಾನ ಸಿವಿಲ್ ನ್ಯಾಯಾಧೀಶ ಸಂತೋಷ್ ಕೊಠಾರಿ, ಅಪರ ಸಿವಿಲ್ ನ್ಯಾಯಾಧೀಶೆ ಮಹಾಲಕ್ಷಿö್ಮ, ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಐ.ಆರ್. ಪ್ರಮೋದ್, ಉಪಾಧ್ಯಕ್ಷ ಸುಬ್ಬಯ್ಯ, ಕಾರ್ಯದರ್ಶಿ ದಿನೇಶ್ ಉಪಸ್ಥಿತರಿದ್ದರು.

ಹಿರಿಯ ವಕೀಲರಾದ ಎಂ.ಕೆ ಪೂವಯ್ಯ, ಎಸ್.ಆರ್ ಜಗದೀಶ್, ಎನ್.ಜಿ. ಕಾಮತ್, ಬಿ.ಸಿ. ಸುಬ್ಬಯ್ಯ, ಶರತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಚೆಪ್ಪುಡೀರ ಎಂ ಪೂಣಚ್ಚ ಹಾಗೂ ಸವಿತಾ ಪೂಣಚ್ಚ ಅವರುಗಳನ್ನು ಸನ್ಮಾನಿಸಲಾಯಿತು. ಆರಂಭದಲ್ಲಿ ನ್ಯಾಯಾಧಿಶರುಗಳನ್ನು ಪ್ರವಾಸಿ ಮಂದಿರದಿAದ ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ನ್ಯಾಯಾಲಯ ಆವರಣಕ್ಕೆ ಕರೆ ತರಲಾಯಿತು.

ವಕೀಲರ ಸಂಘದ ಕಾರ್ಯದರ್ಶಿ ಎಂ.ಕೆ ದಿನೇಶ್ ಸ್ವಾಗತಿಸಿದರು. ಬಿ.ಬಿ ಮಾದಪ್ಪ ಕಾರ್ಯಕ್ರಮ ನಿರೂಪಿಸಿದರು. ವಿ.ಜಿ ರಾಕೇಶ್ ವಂದಿಸಿದರು.