ಮಡಿಕೇರಿ, ನ. ೧೨: ಸುದೀರ್ಘ ೪೯ ವರ್ಷಗಳ ಸೇವೆಯ ಬಳಿಕ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಸ್ವಯಂ ನಿವೃತ್ತಿ ಘೋಷಿಸಿದ್ದಾರೆ. ಶುಕ್ರವಾರ ವೀರಾಜಪೇಟೆಯ ಅಖಿಲ ಕೊಡವ ಸಮಾಜ ಸಭಾಂಗಣದಲ್ಲಿ ಮಾತಂಡ ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅವರು ನಿವೃತ್ತಿ ಘೋಷಿಸಿದ್ದು, ಕೆಲವು ಕ್ಷಣ ಭಾವುಕರಾದಂತೆ ಕಂಡು ಬಂದರು.

(ಮೊದಲ ಪುಟದಿಂದ) ಮಾತಂಡ ಮೊಣ್ಣಪ್ಪ ಅವರು ಮಾತನಾಡುತ್ತಾ “ನನ್ನ ಜನಾಂಗ ನನಗೆ ಒಂದು ದೊಡ್ಡ ಜವಾಬ್ದಾರಿಯನ್ನು ೪೯ ವರ್ಷಗಳ ಹಿಂದೆ ನೀಡಿತ್ತು. ಇದನ್ನು ದೇವರು ಮೆಚ್ಚುವ ರೀತಿ ಮಾಡಿದ್ದೇನೆ. ಬಹುಶಃ ನಾನು ಈ ಸಮಾಜದ ಅಧ್ಯಕ್ಷನಾಗಿ ಆಯ್ಕೆ ಆಗದೆ ಹೋಗದೆ ಇದ್ದಿದ್ದರೆ ಜನ ಸಾಮಾನ್ಯರಲ್ಲಿ ನಾನೂ ಕೂಡ ಒಬ್ಬನಾಗಿರುತ್ತಿದ್ದೆ ಎಂದರು . ನಾನು ಇವತ್ತು ಈ ಸಮಾಜಕ್ಕೆ ಏನೇ ನೀಡಿದ್ದರೂ ಅದಕ್ಕೆ ಕಾರಣ ನಮ್ಮ ಹಿರಿಯರು ೧೯೪೨ರಲ್ಲಿ ದೂರದೃಷ್ಟಿಯಿಂದ ಕಟ್ಟಿದ ಅಖಿಲ ಕೊಡವ ಸಮಾಜ ಹಾಗೂ ನನ್ನ ಜನಾಂಗ ಬಾಂಧವರು” ಎಂದರು.

ಮುAದುವರಿದು ಮಾತನಾಡಿದ ಅವರು ತಕ್ಕಾಮೆಯ ನೆರಳಿನಲ್ಲಿ ಹಿರಿಯರು ಕಟ್ಟಿಬೆಳೆಸಿದ ಈ ಸಮಾಜವನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ನಮ್ಮ ಹಿರಿಯರು ಸ್ವಾತಂತ್ರ‍್ಯ ಪೂರ್ವದಲ್ಲಿಯೇ ಈ ಸಂಸ್ಥೆಯನ್ನು ಹುಟ್ಟುಹಾಕಬೇಕಾದರೆ ಅವರ ಅದ್ಭುತ ಚಿಂತನೆ ಹಾಗೂ ದೂರದೃಷ್ಟಿಗೆ ನಾವು ತಲೆಬಾಗಿ ಇದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ ಎಂದರು. ಸಭೆಯ ಮೊದಲಿಗೆ ಮಹಾಸಭೆಯಲ್ಲಿ ಉಪಸ್ಥಿತರಿದ್ದ ನಾಲ್ಕು ದೇಶ ತಕ್ಕ ಕುಟುಂಬದವರಾದ ಪರದಂಡ, ಬೊಳ್ಳೇರ, ಪಾಂಡೀರ ಹಾಗೂ ಪರುವಂಡ ಕುಟುಂಬದಲ್ಲಿ ತಲಾ ಒಬ್ಬೊಬ್ಬರನ್ನು ಕರೆದು ವೇದಿಕೆಯಲ್ಲಿ ಆಸನ ನೀಡಿ ಗೌರವ ನೀಡಲಾಯಿತು. ಕಳೆದ ಹಲವಾರು ವರ್ಷಗಳಿಂದ ಮಹಾಸಭೆಯಲ್ಲಿ ಇದೇ ಮೊದಲ ಬಾರಿಗೆ ಎಂಬAತೆ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದು ವಿಶೇಷವಾಗಿತ್ತು. ಜಿಲ್ಲೆಯ ವಿವಿಧ ಕೊಡವ ಸಮಾಜಗಳು, ವಿವಿಧ ನಾಡಿನ ತಕ್ಕ ಮುಖ್ಯಸ್ಥರು ಸೇರಿದಂತೆ ಬಹುತೇಕ ಕೊಡವ ಕುಟುಂಬದ ಪ್ರತಿನಿಧಿಗಳು ಭಾಗವಹಿಸಿ ಗಮನ ಸೆಳೆದರು. ಅಲ್ಲದೆ ಮಹಾಸಭೆಯಲ್ಲಿ ಹಲವಾರು ವಿಷಯಗಳು ಚರ್ಚೆಗೆ ಬಂದು ನಿರ್ಣಯಗಳನ್ನು ಸರ್ವಾನುಮತದಿಂದ ಒಪ್ಪಲಾಯಿತು.

ಸರಕಾರ, ಜಿಲ್ಲಾಡಳಿತ ಅಥವಾ ಜನಪ್ರತಿನಿಧಿಗಳು ಕೊಡವ ಜನಾಂಗದ ಕುರಿತು ಅಥವಾ ವಿಶೇಷವಾಗಿ ತಲಕಾವೇರಿಯ ತುಲಾಸಂಕ್ರಮಣದ ಕುರಿತು ಯಾವುದೇ ನಿರ್ಣಯ ಕೈಗೊಳ್ಳಬೇಕಾದರೆ ಮೊದಲು ಅಖಿಲ ಕೊಡವ ಸಮಾಜದ ಗಣನೆಗೆ ತಂದು ಸಮಾಜದ ಪ್ರಮುಖರನ್ನು ಕರೆದು ಸಭೆ ನಡೆಸಬೇಕು ; ಇತರ ಜನಾಂಗಕ್ಕೆ ಮಠಗಳು ಹೇಗೆ ಪ್ರಮುಖ ಪಾತ್ರ ವಹಿಸುತ್ತದೆಯೋ ಹಾಗೇ ಕೊಡವ ಜನಾಂಗಕ್ಕೆ ಅಖಿಲ ಕೊಡವ ಸಮಾಜ ಜನಾಂಗದ ಮಾತೃ ಸಂಸ್ಥೆಯಾಗಿದೆ. ಕೊಡವರ ಮನೆಯಲ್ಲಿ ಜನಿಸಿದ ಪ್ರತಿ ಮಗು ಕೂಡ ಅಖಿಲ ಕೊಡವ ಸಮಾಜದ ಸದಸ್ಯನಾಗುತ್ತಾನೆ, ಹೀಗಿರುವಾಗ ಅಖಿಲ ಕೊಡವ ಸಮಾಜದ ಕಡೆಗಣನೆ ಸರಿಯಲ್ಲ ಎಂಬ ಮಾತು ಸಭೆಯಲ್ಲಿ ಕೇಳಿಬಂದು ಇದಕ್ಕೆ ಸಭೆ ಸರ್ವಾನುಮತದಿಂದ ಒಪ್ಪಲಾಯಿತು. ತಲಕಾವೇರಿ ಭಾಗಮಂಡಲದಲ್ಲಿ ಕೊಡವರನ್ನು ಕಡೆಗಣನೆ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಖಂಡನೆಯ ಮಾತು ಕೇಳಿಬಂದಿತು, ಕೊಡವ ಜನಾಂಗಕ್ಕೆ ಮಾತ್ರ ಕಾವೇರಿ ಮಾತೆ ಕುಲದೇವಿಯಾಗಿದ್ದು, ಹಾಗಿರುವಾಗ ತಲಕಾವೇರಿ ಭಾಗಮಂಡಲದಲ್ಲಿ ಕೊಡವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕಿದೆ, ಕೊಡವ ಜನಾಂಗಕ್ಕೆ ಅಲ್ಲಿನ ವ್ಯವಸ್ಥಾಪನಾ ಸಮಿತಿಯಲ್ಲಿ ಖಾಯಂ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ ಸಭೆ ಕೊಡವ ಜನಾಂಗದ ಹಿರಿಯಣ್ಣನಂತಿರುವ ಅಖಿಲ ಕೊಡವ ಸಮಾಜಕ್ಕೆ ಸೀಮಿತವಾಗಿ ಮೂರು ಖಾಯಂ ಸದಸ್ಯ ಸ್ಥಾನವನ್ನು ಕಾಯ್ದಿರಿಸಬೇಕಿದೆ ಎಂದು ಸಭೆ ನಿರ್ಣಯವನ್ನು ಕೈಗೊಂಡಿತು. ಇದರೊಂದಿಗೆ ಕೊಡವ ಜನಾಂಗದಲ್ಲಿ ಹಿರಿಯ ಸಾಹಿತಿಗಳು ಹಾಗೂ ಕೊಡವ ಜಾನಪದ ತಜ್ಞರು ಆಗಿರುವ ಬಾಚರಣಿಯಂಡ ಅಪ್ಪಣ್ಣ ಅವರಿಗೆ ಮಂಗಳೂರು ವಿಶ್ವ ವಿದ್ಯಾಲಯದಿಂದ ನೀಡಲಾಗುವ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಬೇಕು ಎಂಬ ಕೊಡವ ಮಕ್ಕಡ ಕೂಟದ ಒತ್ತಾಯವಿದೆ ಎಂದು ಯೂತ್ ವಿಂಗ್ ಪ್ರಸ್ತಾಪಿಸುತ್ತಿದ್ದಂತೆ ಇದಕ್ಕೆ ದ್ವನಿಗೂಡಿಸಿದ ಮುಲ್ಲೇಂಗಡ ಮಧೋಶ್ ಪೂವಯ್ಯ ಸಭೆ ಇದನ್ನು ನಿರ್ಣಯ ಮಾಡಬೇಕು ಎಂದಾಗ ಸಂಪೂರ್ಣ ಸಭೆ ಒಪ್ಪಿಗೆ ನೀಡಿತು. À ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೊಡಂದೇರ ಕಾರ್ಯಪ್ಪ ಹಾಗೂ ಜನರಲ್ ಕೊಡಂದೇರ ತಿಮ್ಮಯ್ಯ ಅವರಿಗೆ ಸರಕಾರ ಭಾರತ ರತ್ನ ಪ್ರಶಸ್ತಿ ನೀಡಲು ಮೀನಾಮೇಷ ಎಣಿಸುತ್ತಿದ್ದು ಇದನ್ನು ಖಂಡಿಸಿ ನಿರ್ಣಯ ಕೈಗೊಳ್ಳುವುದರ ಜೊತೆಗೆ ಇವರಿಬ್ಬರಿಗೆ ಭಾರತ ರತ್ನ ಪದವಿ ನೀಡುವಂತೆ ಒತ್ತಾಯಿಸಲಾಯಿತು. ಜಿಲ್ಲೆಯ ಪ್ರಮುಖ ಹಬ್ಬಗಳಾದ ಕಾವೇರಿ ತುಲಾಸಂಕ್ರಮಣ ಹಾಗೂ ಪುತ್ತರಿ ಹಬ್ಬಕ್ಕೆ ತಲಾ ಎರಡೆರಡು ದಿವಸ ಸರಕಾರ ರಜೆ ನೀಡುವಂತೆ ಹಾಗೂ ಇದರಲ್ಲಿ ಒಂದೊAದು ದಿವಸ ಸಾರ್ವತ್ರಿಕ ರಜೆಯನ್ನು ನೀಡಬೇಕು ; ಹಾಗೇ ಕಾವೇರಿ ಈ ದೇಶದ ಮೂರು ರಾಜ್ಯಗಳ ನದಿನೀರಿನ ವಿಷಯವಾಗಿದ್ದು ಒಂದು ದಿವಸ ಕೇಂದ್ರ ಸರಕಾರವೇ ಸಾರ್ವತ್ರಿಕ ರಜೆಯನ್ನು ನೀಡಬೇಕು ಎಂದು ಸಭೆ ಒತ್ತಾಯಿಸಿತು. ಸಭೆಯಲ್ಲಿ ಮಂದ್‌ಮಾನಿ ಕೊಡವರ ಸ್ಮಶಾನಗಳ ಬಗ್ಗೆ ಇದರಲ್ಲಿ ಸರಕಾರ ಅಥವಾ ಪಂಚಾಯತ್ ಪ್ರವೇಶದ ಮಾತು ಕೇಳಿ ಬಂದು ಕೊಡವರ ಮಂದ್‌ಮಾನಿ ಸೇರಿದಂತೆ ಕೊಡವರ ಸ್ಮಶಾನಗಳು ಕೊಡವರಿಗಾಗಿ ಕಾಯ್ದಿರಿಸಬೇಕು ಎಂದು ಒತ್ತಾಯಿಸಲಾಯಿತು.

ಅಖಿಲ ಕೊಡವ ಸಮಾಜದ ಪ್ರಧಾನ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ ಕಳೆದ ಸಾಲಿನ ಮಹಾಸಭೆಯ ವರದಿಯನ್ನು ಓದಿದರು. À ಅಖಿಲ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ವರದಿಯನ್ನು ಪೊಮ್ಮಕ್ಕಡ ಪರಿಷತ್ ಉಪಾಧ್ಯಕ್ಷೆ ಮಂಡೇಪAಡ ಗೀತಾ ಮಂದಣ್ಣ ಓದಿದರು.

ಅಖಿಲ ಕೊಡವ ಸಮಾಜ ಯೂತ್‌ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಸಂಸ್ಥೆಯ ಬಗ್ಗೆ ಸಭೆಗೆ ಮಾಹಿತಿ ನೀಡುತ್ತಾ, ಕೊಡವ ಜನಾಂಗದ ಯುವಜನ ಮೇಳದಂತಹ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಯುವಜನಾಂಗವನ್ನು ಸಂಘಟಿಸಲಾಗುತ್ತದೆ ಎಂದರು. ರಾಜಕೀಯವಾಗಿ ಜನಾಂಗವನ್ನು ಮೂಲೆಗುಂಪು ಮಾಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಯಾವುದೇ ಪಕ್ಷವಿರಲಿ ಕೊಡಗಿನಲ್ಲಿ ಕೊಡವ ಜನಾಂಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕೊಡವ ಸಮಾಜ ಅಧ್ಯಕ್ಷರುಗಳು ಹಾಗೂ ಪ್ರಮುಖರು, ಊರು ನಾಡಿನ ತಕ್ಕ ಮುಖ್ಯಸ್ಥರುಗಳು ಮಾತನಾಡಿ ಗಮನ ಸೆಳೆದರು. ವೇದಿಕೆಯಲ್ಲಿ ಅಖಿಲ ಕೊಡವ ಸಮಾಜ ಉಪಾಧ್ಯಕ್ಷ ಅಜ್ಜಿಕುಟ್ಟೀರ ಮಾದಯ್ಯ ಸುಬ್ರಮಣಿ, ಸಹ ಕಾರ್ಯದರ್ಶಿ ನಂದೆಟೀರ ರಾಜ ಮಾದಪ್ಪ, ಖಜಾಂಚಿ ಮಂಡೇಪAಡ ಸುಗುಣ, ಅಪ್ಪುಮಣಿಯಂಡ ತುಳಸಿ ಕಾಳಪ್ಪ, ಸೇರಿದಂತೆ ದೇಶ ತಕ್ಕರ ಕುಟುಂಬದವರಾದ ಪರದಂಡ ಸುಬ್ರಮಣಿ, ಬೊಳ್ಳೇರ ಪಿ ಅಪ್ಪಯ್ಯ, ಪರುವಂಡ ಪೊನ್ನಪ್ಪ, ಪಾಂಡೀರ ಗಣಪತಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮಳವಂಡ ಪೂವಿ ಪ್ರಾರ್ಥಿಸಿದರು, ಉಪಾಧ್ಯಕ್ಷ ಅಜ್ಜಿಕುಟ್ಟೀರ ಮಾದಯ್ಯ ಸುಬ್ರಮಣಿ ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ ವಂದಿಸಿದರು. ೪೯ ವರ್ಷದ ಸುಧೀರ್ಘ ಸೇವೆಗಾಗಿ ಮಹಾಸಭೆಯಲ್ಲಿ ಜನಾಂಗದ ಪರವಾಗಿ ಮಾತಂಡ ಮೊಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು, ಈ ಸಂದರ್ಭ ಕಛೇರಿ ನಿರ್ವಾಹಕಿ ಮುಕ್ಕಾಟೀರ ರಶ್ಮಿ ವ್ಯಕ್ತಿ ಪರಿಚಯ ಮಾಡಿದರು.

ಮಾತನಾಡಿ ಗಮನ ಸೆಳೆದರು. ವೇದಿಕೆಯಲ್ಲಿ ಅಖಿಲ ಕೊಡವ ಸಮಾಜ ಉಪಾಧ್ಯಕ್ಷ ಅಜ್ಜಿಕುಟ್ಟೀರ ಮಾದಯ್ಯ ಸುಬ್ರಮಣಿ, ಸಹ ಕಾರ್ಯದರ್ಶಿ ನಂದೆಟೀರ ರಾಜ ಮಾದಪ್ಪ, ಖಜಾಂಚಿ ಮಂಡೇಪAಡ ಸುಗುಣ, ಅಪ್ಪುಮಣಿಯಂಡ ತುಳಸಿ ಕಾಳಪ್ಪ, ಸೇರಿದಂತೆ ದೇಶ ತಕ್ಕರ ಕುಟುಂಬದವರಾದ ಪರದಂಡ ಸುಬ್ರಮಣಿ, ಬೊಳ್ಳೇರ ಪಿ ಅಪ್ಪಯ್ಯ, ಪರುವಂಡ ಪೊನ್ನಪ್ಪ, ಪಾಂಡೀರ ಗಣಪತಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಮಳವಂಡ ಪೂವಿ ಪ್ರಾರ್ಥಿಸಿದರು, ಉಪಾಧ್ಯಕ್ಷ ಅಜ್ಜಿಕುಟ್ಟೀರ ಮಾದಯ್ಯ ಸುಬ್ರಮಣಿ ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ ವಂದಿಸಿದರು. ೪೯ ವರ್ಷದ ಸುಧೀರ್ಘ ಸೇವೆಗಾಗಿ ಮಹಾಸಭೆಯಲ್ಲಿ ಜನಾಂಗದ ಪರವಾಗಿ ಮಾತಂಡ ಮೊಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು, ಈ ಸಂದರ್ಭ ಕಛೇರಿ ನಿರ್ವಾಹಕಿ ಮುಕ್ಕಾಟೀರ ರಶ್ಮಿ ವ್ಯಕ್ತಿ ಪರಿಚಯ ಮಾಡಿದರು.