*ಗೋಣಿಕೊಪ್ಪ, ನ. ೧೧: ಕೆರೆಗೆ
ಹಾರಿ ಆತ್ಮಹತ್ಯೆಗೆ
ಮುಂದಾಗಿದ್ದ ವೃದ್ಧನನ್ನು ಕಾಪಾಡಿದ ಗೋಣಿಕೊಪ್ಪ ಸೀಗೆತೋಡು ನಿವಾಸಿ ಶಬರೀಶ್ ಹಾಗೂ ಶಾಂತಿ ದಂಪತಿ ಪುತ್ರಿ ಎಂ.ಎಸ್. ನಮೃತ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ. ತಾ. ೧೪ರಂದು ನಡೆಯುವ ಮಕ್ಕಳ ದಿನಾಚರಣೆಯಲ್ಲಿ ಈ ಪ್ರಶಸ್ತಿಯನ್ನು ಮುಖ್ಯಮಂತ್ರಿ ಮತ್ತು ಇತರ ಸಚಿವರು ಪ್ರದಾನ ಮಾಡಲಿದ್ದಾರೆ. ಅರವತ್ತೊಕ್ಲು ಸರ್ವದೈವತಾ ಶಾಲೆಯ ವಿದ್ಯಾರ್ಥಿ ಯಾಗಿರುವ ಈಕೆ ಕಳೆದ ವರ್ಷ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮನೆಯ ಸಮೀಪವೇ ಇದ್ದ ಕೆರೆಗೆ ವ್ಯಕ್ತಿ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದುದನ್ನು ಗಮನಿಸಿದ ನಮೃತ ತನ್ನ ಜೀವದ ಹಂಗು ತೊರೆದು ಕೆರೆಗೆ ಹಾರಿ ವ್ಯಕ್ತಿಯ ಜೀವ ಉಳಿಸಿದ್ದಳು.