ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ
ಬೆಂಗಳೂರು, ನ. ೧೧: ಕೆಂಪೇಗೌಡ ವಿಮಾನ ನಿಲ್ದಾಣ ಬಳಿ ೧೦೮ ಅಡಿ ಎತ್ತರದ ಕೆಂಪೇಗೌಡ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು. ಬಳಿಕ ಸಾರ್ವಜನಿಕ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಕನಕದಾಸ ಮತ್ತು ಒನಕೆ ಓಬವ್ವ ಅವರ ಜನ್ಮ ಜಯಂತಿಯಾಗಿದ್ದು ಈ ಶುಭಗಳಿಗೆಯಲ್ಲಿ ವಿಶ್ವದಲ್ಲಿ ಮನ್ನಣೆಗಳಿಸಿರುವ ಬೆಂಗಳೂರಿನಲ್ಲಿರುವುದು ನನಗೆ ಅತ್ಯಂತ ಸಂತಸ ತಂದಿದೆ. ಕೆಂಪೇಗೌಡರ ಪ್ರತಿಮೆ ಮತ್ತು ಜಲಾಭಿಷೇಕಕ್ಕೆ ನನಗೆ ಅವಕಾಶ ಸಿಕ್ಕಿದ್ದು ಪುಣ್ಯವಾಗಿದೆ ಎಂದು ಹೇಳಿದರು. ವಿಜಯನಗರ ರಾಜರ ಕಾಲದಲ್ಲಿದ್ದ ಸುವರ್ಣ ಯುಗವನ್ನು ಬೆಂಗಳೂರಿಗರಿಗೆ ತೋರಿಸಿಕೊಟ್ಟ ದೂರದೃಷ್ಟಿಯ ನಾಡಪ್ರಭು ಕೆಂಪೇಗೌಡರು. ಇಂದು ಅವರ ಪ್ರತಿಮೆ ಅನಾವರಣಗೊಂಡಿದ್ದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ನಾಡಿನ ಕಲೆ, ಸಂಸ್ಕೃತಿ, ಪರಂಪರೆಗೆ ಗೌರವ ಕೊಟ್ಟಿದ್ದೇವೆ. ಅವರ ಚಿಂತನೆಯಲ್ಲಿ ನಾಡನ್ನು ಕಟ್ಟಲು ಸಂಕಲ್ಪ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಗೆ ಚಾಲನೆ
ಬೆಂಗಳೂರು, ನ. ೧೧: ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಚಾಲನೆಗೆ ಹಸಿರು ನಿಶಾನೆ ತೋರಿಸಿದರು. ಪ್ರಧಾನಿಯನ್ನು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ವಾಗತಿಸಿದರು. ಪ್ಲಾಟ್ಫಾರಂ ಸಂಖ್ಯೆ ೭ರಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಇದಕ್ಕೂ ಮೊದಲು ಕೆಲ ಸಮಯ ರೈಲಿನೊಳಗೆ ಪ್ರವೇಶಿಸಿ ಪರಿಶೀಲಿಸಿದರು.
ಜ್ಞಾನವಾಪಿ ಮಸೀದಿ ಶಿವಲಿಂಗ ಪ್ರದೇಶದ ರಕ್ಷಣೆ ವಿಸ್ತರಣೆ
ನವದೆಹಲಿ, ನ. ೧೧: ವಾರಣಾಸಿಯ ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾದ ಪ್ರದೇಶದ ರಕ್ಷಣೆಯನ್ನು ಮುಂದಿನ ಆದೇಶದವರೆಗೆ ಸುಪ್ರೀಂ ಕೋರ್ಟ್ ವಿಸ್ತರಿಸಿದೆ. ಜ್ಞಾನವಾಪಿ ವಿವಾದ ಕುರಿತ ಎಲ್ಲಾ ದಾವೆಗಳ ಕ್ರೋಢೀಕರಣಕ್ಕಾಗಿ ವಾರಣಾಸಿಯ ಜಿಲ್ಲಾ ನ್ಯಾಯಾಧೀಶರ ಮುಂದೆ ಅರ್ಜಿ ಸಲ್ಲಿಸುವಂತೆ ಹಿಂದೂ ಅರ್ಜಿದಾರರಿಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಪಿ.ಎಸ್. ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠ ಅನುಮತಿ ನೀಡಿದೆ. ಸರ್ವೆ ಕಮಿಷನರ್ ನೇಮಕಕ್ಕೆ ಸಂಬAಧ ಅಲಹಾಬಾದ್ ಹೈಕೋರ್ಟ್ ನೀಡಿರುವ ಆದೇಶ ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿಯ ಆಡಳಿತ ಸಮಿತಿಯು ಸಲ್ಲಿಸಿದ ಮೇಲ್ಮನವಿಯ ಬಗ್ಗೆ ಹಿಂದೂ ಅರ್ಜಿದಾರರು ಮೂರು ವಾರಗಳಲ್ಲಿ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಪೀಠ ನಿರ್ದೇಶಿಸಿತು. ಸರ್ವೆಯಲ್ಲಿ ‘ಶಿವಲಿಂಗ' ಕಂಡುಬAದಿದೆ ಎಂದು ಹೇಳಲಾದ ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದೊಳಗಿನ ಪ್ರದೇಶದ ರಕ್ಷಣೆಗೆ ಖಾತ್ರಿಗೆ ವಾರಣಾಸಿಯ ಜಿಲ್ಲಾ ಮ್ಯಾಜಿಸ್ಟೆçÃಟ್ಗೆ ನಿರ್ದೇಶಿಸಿ ಸರ್ವೋಚ್ಛ ನ್ಯಾಯಾಲಯ ಮೇ ೧೭ ರಂದು ಮಧ್ಯಂತರ ಆದೇಶ ನೀಡಿತ್ತು. ಸಮಸ್ಯೆಯ ಸಂಕೀರ್ಣತೆ ಮತ್ತು ಸೂಕ್ಷö್ಮತೆಯನ್ನು ನೋಡಿ, ೨೫-೩೦ ವರ್ಷಕ್ಕಿಂತ ಹೆಚ್ಚು ಅನುಭವವಿರುವ ಹಿರಿಯ ನ್ಯಾಯಾಂಗ ಅಧಿಕಾರಿ ಪ್ರಕರಣವನ್ನು ನಿಭಾಯಿಸಿದರೆ ಉತ್ತಮ ಎಂದು ಭಾವಿಸಿ ಮೇ ೨೦ ರಂದು ಜ್ಞಾನವಾಪಿ ಮಸೀದಿಯ ಮೇಲೆ ಹಿಂದೂ ಭಕ್ತರು ಸಲ್ಲಿಸಿದ ಸಿವಿಲ್ ಮೊಕದ್ದಮೆಯನ್ನು ಸಿವಿಲ್ ನ್ಯಾಯಾಧೀಶರಿಂದ (ಹಿರಿಯ ವಿಭಾಗ) ವಾರಣಾಸಿಯ ಜಿಲ್ಲಾ ನ್ಯಾಯಾಧೀಶರಿಗೆ ಸುಪ್ರೀಂಕೋರ್ಟ್ ವರ್ಗಾಯಿಸಿತ್ತು.
ವರ್ಕೌಟ್ ವೇಳೆ ಕಿರುತೆರೆ ನಟ ಸಾವು
ಮುಂಬೈ, ನ. ೧೧: ಕಿರುತೆರೆ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಜಿಮ್ನಲ್ಲಿ ವರ್ಕ್ಔಟ್ ಮಾಡುತ್ತಿರಬೇಕಾದರೆ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಮಾಡೆಲಿಂಗ್ನಲ್ಲಿಯೂ ಗುರುತಿಸಿಕೊಂಡಿದ್ದ ಸಿದ್ಧಾಂತ್, ಕೊನೆಯದಾಗಿ ಪೊಲೀಸ್ ಕಥೆಯನ್ನು ಆಧರಿತ ಕಂಟ್ರೋಲ್ ರೂಮ್ ಎನ್ನುವ ಟಿವಿ ಕಾರ್ಯಕ್ರಮದಲ್ಲಿ ಡಿಸಿಪಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ಕಸೌತಿ ಝಿಂದಗಿ ಕೇ, ಕೃಷ್ಣ-ಅರ್ಜುನ್, ಕ್ಯಾ ದಿಲ್ ಮೇ ಹೈ, ಝಿದ್ದಿ ದಿಲ್, ಕ್ಯೂ ರಿಶ್ತೋ ಮೇ ಕಟ್ಟಿ ಬಟ್ಟಿ ಸೇರಿದಂತೆ ಹಲವು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.
ಗುಜರಾತ್ : ಕಾಂಗ್ರೆಸ್ ಜೊತೆ ಎನ್ಸಿಪಿ ಮೈತ್ರಿ
ಅಹಮದಾಬಾದ್, ನ. ೧೧: ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಮತ್ತು ಎನ್ಸಿಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಇದರಿಂದಾಗಿ ರಾಜ್ಯದ ಒಟ್ಟು ೧೮೨ ಸ್ಥಾನಗಳ ಪೈಕಿ ೩ ಕ್ಷೇತ್ರಗಳಲ್ಲಿ ಎನ್ ಸಿಪಿ ಸ್ಪರ್ಧಿಸಲಿದೆ. ಉಭಯ ಪಕ್ಷಗಳ ಮುಖಂಡರು ಶುಕ್ರವಾರ ಇದನ್ನು ಪ್ರಕಟಿಸಿದ್ದಾರೆ. ೨೦೧೭ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎನ್ಸಿಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಎನ್ಸಿಪಿಯ ಕಂಧಲ್ ಜಡೇಜಾ ಮಾತ್ರ ಗೆಲುವು ಸಾಧಿಸಿದ್ದರು. ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿಯೊಂದಿಗೆ ಎನ್ಸಿಪಿ ಪೈಪೋಟಿ ನಡೆಸಲಿದೆ ಎಂದು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್ ಹೇಳಿದರು. ಮೈತ್ರಿ ಭಾಗವಾಗಿ ಎನ್ಸಿಪಿ ಉಮ್ರೇತ್ (ಆನಂದ್ ಜಿಲ್ಲೆ) ನರೋಡಾ (ಅಹಮದಾಬಾದ್) ಮತ್ತು ದೇವಗಢ್ ಬರಿಯಾ (ದಹೋಡ್ ಜಿಲ್ಲೆ) ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ಈ ಮೂವರು ಕ್ಷೇತ್ರಗಳು ಸದ್ಯ ಆಡಳಿತಾರೂಢ ಬಿಜೆಪಿ ವಶದಲ್ಲಿದೆ.
ಶೂಟೌಟ್ ಪ್ರಕರಣ - ಮೂವರ ಬಂಧನ
ಫರೀದ್ಕೋಟ್, ನ. ೧೧: ಪಂಜಾಬ್ನ ಫರೀದ್ಕೋಟ್ನಲ್ಲಿ ಡೇರಾ ಸಚ್ಚಾ ಸೌದಾ ಅನುಯಾಯಿ ಪ್ರದೀಪ್ ಸಿಂಗ್ನನ್ನು ಹತ್ಯೆಗೈದ ಮೂವರು ಶೂಟರ್ಗಳನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪಂಜಾಬ್ ಪೊಲೀಸ್ ಗುಪ್ತಚರ ಘಟಕ ಮತ್ತು ದೆಹಲಿ ಪೊಲೀಸ್ ಕೌಂಟರ್ ಇಂಟೆಲಿಜೆನ್ಸ್ ಯುನಿಟ್ ಫರೀದ್ಕೋಟ್ನಲ್ಲಿ ಪ್ರದೀಪ್ ಸಿಂಗ್ನನ್ನು ಕೊಂದ ಆರು ಆರೋಪಿಗಳನ್ನು ಗುರುತಿಸಿತ್ತು. ಇದಾದ ನಂತರ ಅವರನ್ನು ಹಿಡಿಯಲು ಪೊಲೀಸ್ ಪಡೆಗಳು ದಾಳಿ ನಡೆಸಿದ್ದವು. ಶುಕ್ರವಾರ ಬೆಳಗಿನ ಜಾವ ೩.೩೦ರ ಸುಮಾರಿಗೆ ಪಟಿಯಾಲಾದ ಬಕ್ಷಿವಾಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ಪೊಲೀಸ್ ತಂಡ ಡೇರಾ ಸಚ್ಚಾ ಸೌಧದ ಅನುಯಾಯಿಯ ಹತ್ಯೆಯಲ್ಲಿ ಭಾಗಿಯಾಗಿದ್ದ ಆರು ಮಂದಿಯಲ್ಲಿ ಮೂವರನ್ನು ಬಂಧಿಸಿದೆ. ಬಂಧಿತರನ್ನು ಹರಿಯಾಣದ ನಿವಾಸಿಗಳೆಂದು ಪೊಲೀಸರು ಗುರುತಿಸಿದ್ದಾರೆ. ಇಬ್ಬರು ರೋಹ್ಟಕ್ ನಿವಾಸಿಗಳಾಗಿದ್ದು ಮತ್ತೋರ್ವ ಭಿವಾನಿ ನಿವಾಸಿಯಾಗಿದ್ದಾನೆ. ಇನ್ನು ತಲೆಮರೆಸಿಕೊಂಡಿರುವ ಮೂರು ಆರೋಪಿಗಳ ಪತ್ತೆಗೆ ತಂಡ ಹೆಚ್ಚಿನ ಪ್ರಯತ್ನ ನಡೆಸುತ್ತಿದೆ.
ರಾಜೀವ್ ಗಾಂಧಿ ಹತ್ಯೆ ಹಂತಕರ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ
ನವದೆಹಲಿ, ನ. ೧೧: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದ ಆರು ಹಂತಕರನ್ನು ಜೈಲಿನಿಂದ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ನೀಡಿದೆ. ಈ ಪ್ರಕರಣದಲ್ಲಿ ನಳಿನಿ ಶ್ರೀ ಹರನ್ ಸೇರಿದಂತೆ ಐವರು ತಮಿಳುನಾಡಿನ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಹಿಂದೆ ತಮಿಳುನಾಡು ಸರ್ಕಾರ ಕೂಡಾ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಇದನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದ್ದು, ಅವರ ಬಿಡುಗಡೆಗೆ ಆದೇಶಿಸಿದೆ. ಮೇ ತಿಂಗಳಲ್ಲಿ ಮತ್ತೋರ್ವ ಆರೋಪಿ ಪೇರಾರಿವಾಳನ್ ಅವರನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿತ್ತು. ನಳಿನಿ ಶ್ರೀ ಹರನ್ ಅಲ್ಲದೇ, ಶ್ರೀಹರನ್, ಸಂತನ್, ಮುರುಗನ್, ರಾಬರ್ಟ್ ಪಾಯಸ್ ಮತ್ತು ರವಿಚಂದ್ರನ್ ಜೈಲಿನಲ್ಲಿದ್ದಾರೆ. ಮೇ ೨೧, ೧೯೯೧ರಲ್ಲಿ ತಮಿಳುನಾಡಿನ ಪೆರಂಬೂರಿನಲ್ಲಿ ಎಲ್ಟಿಟಿಐ ಗುಂಪಿನ ಮಹಿಳಾ ಆತ್ಮಾಹುತಿ ಬಾಂಬರ್ಗಳಿAದ ರಾಜೀವ್ ಗಾಂಧಿ ಅವರ ಹತ್ಯೆಯಾಗಿತ್ತು.