ಮಡಿಕೇರಿ, ನ. ೧೧ : ಮಹಾರಾಷ್ಟçದ ಪುಣೆಯಲ್ಲಿ ಇತ್ತೀಚೆಗೆ ನಡೆದ ರಾಷ್ಟçಮಟ್ಟದ ಅಥ್ಲೆಟಿಕ್ ಚಾಂಪಿಯನ್ ಶಿಪ್ನಲ್ಲಿ ಗೋಣಿಕೊಪ್ಪದ ಕಾಲ್ಸ್ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಪ್ರತಿನಿಧಿಸಿ ಹೆಚ್ಚು ಪದಕ ಪಡೆಯುವುದರೊಂದಿಗೆ ‘ರನ್ನರ್ ಅಪ್’ ಟ್ರೋಫಿ ಗಳಿಸಿ ಸಾಧನೆ ಗೈದಿದ್ದಾರೆ.
ಜೊತೆಗೆ ೯ ವಿದ್ಯಾರ್ಥಿಗಳು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಶಾಲೆಯ ಸ್ವಯಂ ಬೋಪಯ್ಯ ಅತೀ ಹೆಚ್ಚು ಪದಕ ಪಡೆದು ವೈಯಕ್ತಿಕ ಚಾಂಪಿಯನ್ಶಿಪ್ ಟ್ರೋಫಿ ತನ್ನದಾಗಿಸಿಕೊಂಡಿದ್ದಾನೆ. ೧೪ ವರ್ಷದೊಳಗಿನ ಬಾಲಕರ ೪೦೦ ಹಾಗೂ ೬೦೦ಮೀಟರ್ ಓಟ ವಿಭಾಗದಲ್ಲಿ ಸ್ವಯಂ ಬೋಪಯ್ಯ ಚಿನ್ನ, ಬಾಲಕಿಯರ ವಿಭಾಗದಲ್ಲಿ ಪ್ರಾರ್ಥನಾ ಜಿಜೊ ಬೆಳ್ಳಿ ೧೭ ವಯೊಮಾನದೊಳಗಿನ ಬಾಲಕರ ವಿಭಾಗದಲ್ಲಿ ದ್ವೀಪ ಮೇದಪ್ಪ ಚಿನ್ನ , ಬಾಲಕಿಯರ ೧೫೦೦ ಮೀಟರ್ ವಿಭಾಗದಲ್ಲಿ ಆಶಾ ಮಿಠಾಯಿವಾಲ ಕಂಚು, ೪x೪೦೦ ಮೀ. ರಿಲೇಯಲ್ಲಿ ಬೆಳ್ಳಿ, ಎಂ.ಬಿ. ಪೊನ್ನಮ್ಮ ೪x೪೦೦ ಮೀ. ರಿಲೇಯಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
೩ ಸಾವಿರ ಮೀಟರ್ ಹಾಗೂ ೧೫೦೦ ಮೀಟರ್ ಹಾಗೂ ೧೫೦೦ ಮೀ ಓಟದಲ್ಲಿ ಕೃತಿನ್ ಬೆಳೆವಾರ ತಲಾ ಒಂದು ಚಿನ್ನ ಹಾಗೂ ಬೆಳ್ಳಿ, ಎಂ.ಹೆಚ್. ಆತ್ರೇಯ ೮೦೦ ಮೀಟರ್ನಲ್ಲಿ ಚಿನ್ನ, ೪x೪೦೦ ಮೀಟರ್ ರಿಲೇಯಲ್ಲಿ ಕಂಚು, ಶಾಲೆಯ ಸ್ವಯಂ ಬೋಪಯ್ಯ, ದ್ವೀಪ ಮೇದಪ್ಪ, ಆತ್ರೇಯ, ಕೃತಿನ್ ಬೆಳೆವಾರ, ಶ್ರೀನಿಧಿ, ವರ್ಷಿತ್, ಆಶಾ ಮಿಠಾಯಿವಾಲ, ಬಿನ್ನಹ ಭರತ್, ಕೆ.ಸಿಶ್ರೀ, ಎಸ್.ಜಿ.ಎಫ್.ಐಗೆ ಆಯ್ಕೆಯಾದ ವಿದ್ಯಾರ್ಥಿಗಳು.
ಕೆ.ವಿ. ವರ್ಷಿತ್ ೫ ಕಿ.ಮೀ. ವಾಕ್ರೇಸ್ನಲ್ಲಿ ಚಿನ್ನ, ೪೦೦ ಮೀ,. ಓಟ ಹಾಗೂ ೪x೧೦೦ ಮೀಟರ್ನಲ್ಲಿ ಶ್ರೀನಿಧಿ ಪಿ.ಎಸ್. ಬೆಳ್ಳಿ ಕಾರ್ಯಪ್ಪ ಎಸ್.ಡಿ. ೪x೪೦೦ ಮೀ ರಿಲೇಯಲ್ಲಿ ಬೆಳ್ಳಿ, ೧೯ರ ವಯೋಮಾನದ ಬಾಲಕಿಯರ ವಿಭಾಗದ ೪೦೦ ಮೀ., ೧೫೦೦ ಮೀಟರ್ ಓಟ, ೪x೪೦೦ ಮೀಟರ್ ರಿಲೇಯಲ್ಲಿ ಕೆ.ಸಿ. ಶ್ರೀ ಕಂಚು, ೪x೪೦೦ ಮೀಟರ್ ರಿಲೇಯಲ್ಲಿ ಬಿನ್ನಹ ಭರತ್ ಚಿನ್ನ, ೧೦೦ ಹಾಗೂ ೨೦೦ ಮೀಟರ್ ಓಟದಲ್ಲಿ ತಲಾ ಒಂದು ಕಂಚು, ೪x೪೦೦ ಮೀಟರ್ ರಿಲೇಯಲ್ಲಿ ಶಿಖ ಬೋಪಣ್ಣ ಕಂಚಿನ ಪದಕ ಗಳಿಸಿಕೊಂಡಿದ್ದಾರೆ.