ಮಡಿಕೇರಿ, ನ. ೧೧: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ “ಉತ್ಥಾನ” ಇದು ಕನ್ನಡ ಕಲಿಗಳ ಗುಣಗಾನ ಎಂಬ ಶೀರ್ಷಿಕೆಯಡಿಯಲ್ಲಿ ಈ ಬಾರಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕವಿ, ಲೇಖಕ ಹಾಗೂ ಸಂಗೀತಗಾರÀ ಹೆಚ್. ಡುಂಡಿರಾಜ್ ಅವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿ, ಕೊಡಗಿನಲ್ಲಿ ಈ ರೀತಿಯ ಅತೀ ವರ್ಣ ರಂಜಿತ ಕಾರ್ಯಕ್ರಮನ್ನು ಆಯೋಜಿಸಿರುವುದನ್ನು ಶ್ಲಾಘಿಸಿ ತಮ್ಮ ಹಾಸ್ಯ, ಚುಟುಕು, ಹನಿಗವನಗಳ ಮೂಲಕ ನೆರೆದಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ರಂಜಿಸುತ್ತ ಕನ್ನಡ ಭಾಷೆಯ ಶಕ್ತಿ, ಸಾಹಿತ್ಯ ಅದರ ವ್ಯಾಪ್ತಿಯನ್ನು ತಮ್ಮ ಕವನಗಳ ಮೂಲಕ ತಿಳಿಸುತ್ತ ವೈದ್ಯಕೀಯ ವಿದ್ಯಾರ್ಥಿಗಳು ಕೂಡ ದೈನಂದಿನ ಚಟುವಟಿಕೆಗಳಲ್ಲಿ ಕನ್ನಡವನ್ನು ಮೈಗೂಡಿಸಿಕೊಂಡು ಕನ್ನಡವನ್ನು ಬೆಳೆಸಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹೆಚ್. ಡುಂಡಿರಾಜ್ ಅವರನ್ನು ಸನ್ನಾನಿಸಲಾಯಿತು.
ಕರ್ನಾಟಕವನ್ನು ಆಳಿದ ರಾಜಮನೆತನಗಳ ಬಗ್ಗೆ ಬಿಂಬಿಸುವ ಹಲವಾರು ಕಾರ್ಯಕ್ರಮಗಳನ್ನು ಈ ಬಾರಿ ಆಯೋಜಿಸಲಾಗಿತ್ತು ಕಲೆ, ಸಂಸ್ಕೃತಿ, ವಾಸ್ತುಶಿಲ್ಪಗಳ ಬಗ್ಗೆ ಅರಿವು ಮೂಡಿಸಲು ಬಿತ್ತಿಚಿತ್ರಗಳು, ವಸ್ತು ಪ್ರದರ್ಶನವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಯಕ್ಷಗಾನ, ಹೊಯ್ಸಳರ ನಾಟಕ, ತೆನಾಲಿರಾಮ ನಾಟಕ, ಹುಲಿ ವೇಷ, ಉಮ್ಮತಾಟ್, ಕಂಸಾಳೆ ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹತ್ತು ದಿನಗಳ ಕಾಲ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೆಶಕ ಡಾ. ಕಳ್ಳಿಚಂಡ ಕಾರ್ಯಪ್ಪ, ಮುಖ್ಯ ಆಡಳಿತಾಧಿಕಾರಿ ಡಾ. ನಂಜುAಡೇಗೌಡ, ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್, ಆರ್ಥಿಕ ಸಲಹೆಗಾರ ಆನಂದ, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಡಾ ಜಯಲಕ್ಷಿö್ಮ ಪಾಟ್ಕರ್, ಜಿಲ್ಲಾ ಶಸ್ತçಚಿಕಿತ್ಸಕ ಡಾ. ನಂಜುAಡಯ್ಯ ಹಿರಿಯ ವೈದ್ಯ ಡಾ. ಪಾಟ್ಕರ್, ಕನ್ನಡ ಸಂಘದ ಪ್ರಮುಖರಾದ ಡಾ. ಶಶಾಂಕ್ ಎಂ.ಜೆ, ಡಾ. ಕುಶ್ವಂತ್ ಕೋಳಿಬೈಲ್, ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಎಂಬಿಬಿಎಸ್, ನರ್ಸಿಂಗ್, ಅರೆ ವೈದ್ಯಕೀಯ ವಿದ್ಯಾರ್ಥಿಗಳು ಹಾಜರಿದ್ದರು.
ನವೆಂಬರ್ ೧ ರಂದು ಉದ್ಘಾಟನೆಗೊಂಡ ಈ ಕಾರ್ಯಕ್ರಮವು ಸತತ ೧೦ ದಿನಗಳ ಕಾಲ ಹಲವಾರು ಕ್ರೀಡಾ ಮತ್ತು ಸಾಹಿತ್ಯ ಸ್ಪರ್ಧೆಗಳಾದ ಅಂತ್ಯಾಕ್ಷರಿ, ಉಕ್ತಲೇಖನ, ಚರ್ಚಾ ಸ್ಪರ್ಧೆ, ಹಾಸ್ಯೋತ್ಸವ, ಅನುವಾದ, ಅಣಕು ಪತ್ರಿಕಾಗೋಷ್ಠಿ, ರಸಪ್ರಶ್ನೆ, ನಲಿ ನುಲಿ ನಾಲಿಗೆ, ಚಿತ್ರಕಲೆ, ಕವಿತೆ ರಚನೆ, ಲಗೋರಿ, ಸ್ಯಾಕ್ ರೇಸ್, ಕುಂಟುಮುಟ್ಟಾಟ, ನಾಯಿ ಮೂಳೆ, ಬುಗುರಿ, ಚಿನ್ನಿದಾಂಡು, ಚೌಕಾಬಾರ, ಚದುರಂಗದಿAದ ಕೂಡಿತ್ತು. ಗ್ರಾಮೀಣ ಕ್ರೀಡೆಗಳಿಗೆ ಒತ್ತು ನೀಡಿ ಈ ಎಲ್ಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.