*ಸಿದ್ದಾಪುರ, ನ. ೯ : ಜೆಡಿಎಸ್ ರಾಜ್ಯ ವಕ್ತಾರರಾಗಿ ಆಯ್ಕೆಯಾದ ಮೇರಿಯಂಡ ಸಂಕೇತ್ ಪೂವಯ್ಯರವರನ್ನು ಅವರ ಸ್ವ ಗೃಹದಲ್ಲಿ ವೀರಾಜಪೇಟೆ ತಾಲೂಕಿನ ಜೆಡಿಎಸ್ ಮುಖಂಡರುಗಳು ಸನ್ಮಾನಿಸಿ ಗೌರವಿಸಿದರು. ಈ ಸಂಧರ್ಭ ಪಕ್ಷ ಬಲವರ್ಧನೆ ಕುರಿತು ಚರ್ಚಿಸಲಾಯಿತು. ಜೆಡಿಎಸ್ ಪಕ್ಷದ ವೀರಾಜಪೇಟೆ ತಾಲೂಕು ಅಧ್ಯಕ್ಷ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಯೂಸಫ್ ಹಾಜಿ ಕೊಂಡಗೇರಿ,
ಜೆಡಿಎಸ್ ವೀರಾಜಪೇಟೆ ತಾಲೂಕು ಅಧ್ಯಕ್ಷ ಸೈಪುದ್ದನ್ ಚಾಮಿಯಾಲ, ವೀರಾಜಪೇಟೆ ತಾಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಜೀದ್ ಚೋಕಂಡಳ್ಳಿ, ಪಕ್ಷದ ಪ್ರಮುಖರಾದ ಶಿಹಾಬುದ್ದಿನ್ ವಿಪಿಎಸ್ ನೆಲ್ಯಹುದಿಕೇರಿ, ಮಾಜಿ ಗ್ರಾ.ಪಂ. ಸದಸ್ಯೆ ಜಯಮ್ಮ ಹಾಜರಿದ್ದರು.