ಮಡಿಕೇರಿ, ನ. ೯: ವೀರಾಜಪೇಟೆಯ ಕೊಡವ ಸಮಾಜ ೧೦೦ರ ಸಂಭ್ರಮದಲ್ಲಿದ್ದು, ೨೦೨೩ರ ಮಾರ್ಚ್ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಶತಮಾನೋತ್ಸವ ಆಚರಣೆ ಮಾಡಲಾಗುವುದು ಎಂದು ಸಮಾಜದ ಅಧ್ಯಕ್ಷ ಕುಂಬೇರ ಮನು ಕುಮಾರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯರ ಚಿಂತನೆಯಲ್ಲಿ ೧೯೨೧ರಲ್ಲಿ ಸಮಾಜ ಸ್ಥಾಪನೆಯಾಗಿ ಕಟ್ಟಡ ನಿರ್ಮಾಣಕ್ಕೆ ಮುಕ್ಕಾಟೀರ ಕರುಂಬಯ್ಯ, ಮಾಳೇಟಿರ ಗಣಪತಿ, ಮಾಳೇಟಿರ ನಂಜಪ್ಪ ಸ್ಥಳವನ್ನು ನೀಡಿದರು. ಹಂತಹAತವಾಗಿ ದಾನಿಗಳ ನೆರವಿನೊಂದಿಗೆ ಸಮಾಜ ಅಭಿವೃದ್ಧಿಯಲ್ಲಿ ಸಾಗಿ ಇಂದು ಉತ್ತಮ ಕಟ್ಟಡವನ್ನು ಹೊಂದಿದ್ದೇವೆ. ಕೊರೊನಾದ ಕಾರಣಕ್ಕಾಗಿ ಶತಮಾನೋತ್ಸವವನ್ನು ಕಳೆದ ವರ್ಷ ಆಚರಿಸಲಾಗಲಿಲ್ಲ. ಇದೀಗ ಪರಿಸ್ಥಿತಿ ಸುಧಾರಿಸಿರುವುದರಿಂದ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.
ಶತಮಾನೋತ್ಸವ ಅಂಗವಾಗಿ ಕೊಡವ ಸಮಾಜಗಳ ನಡುವೆ ಹಾಕಿ, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಹಗ್ಗಜಗ್ಗಾಟದಂತಹ ಕ್ರೀಡಾಕೂಟಗಳನ್ನು ಆಯೋಜಿ¸ Àಲಾಗುವುದು. ಜೊತೆಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಿದವರಿಗೆ ‘ಅಭಿನಂದನಾ ಕಾರ್ಯಕ್ರಮ’ದ ಮೂಲಕ ಗೌರವಿಸಲಾಗುವುದು. ಕೊಡವ ಸಮಾಜದ ಅಧೀನದಲ್ಲಿರುವ ತ್ರಿವೇಣಿ ಶಾಲೆಯನ್ನು ಮೇಲ್ದರ್ಜೆಗೇರಿಸಿ ಶೈಕ್ಷಣಿಕವಾಗಿ ಸಾಧನೆ ಮಾಡುವ ಗುರಿಯನ್ನು ಹೊಂದಲಾಗಿದೆ. ಮಾರ್ಚ್ನಲ್ಲಿ ಕಾರ್ಯಕ್ರಮ
(ಮೊದಲ ಪುಟದಿಂದ) ನಡೆಯಲಿದ್ದು, ಮುಂದಿನ ದಿನಗಳಲ್ಲಿ ದಿನಾಂಕ ನಿಗದಿ ಮಾಡಲಾಗುವುದು. ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಸುವ ಚಿಂತನೆ ಇದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಮಾಜದ ಕಾರ್ಯದರ್ಶಿ ಮಾಳೇಟೀರ ಶ್ರೀನಿವಾಸ್, ನಿರ್ದೇಶಕರುಗಳಾದ ಪಟ್ಟಡ ಮನು ರಾಮಚಂದ್ರ, ಅಂಜಪರವAಡ ಅನಿಲ್ ಮಂದಣ್ಣ, ಕೂತಂಡ ಸಚಿನ್ ಕುಟ್ಟಯ್ಯ ಹಾಜರಿದ್ದರು.