ಶನಿವಾರಸಂತೆ, ನ. ೯: ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ವಿಜಯ ವಿನಾಯಕ ದೇವಾಲಯದಲ್ಲಿ ಶನಿವಾರ ರಾತ್ರಿ ಭಜನಾ ಮಂಡಳಿ ವತಿಯಿಂದ ಗುರುವಂದನೆ ಹಾಗೂ ತುಳಸಿ ಪೂಜೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.

ಪುರೋಹಿತ ಮಂಜುನಾಥ್ ಶರ್ಮ ಅವರು ಗಣಪತಿ ಹೋಮ, ದುರ್ಗಾಹೋಮ, ನವಗ್ರಹ ಹೋಮ, ತುಳಸಿ ವಿವಾಹ ಇತ್ಯಾದಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಭಜನಾ ಮಂಡಳಿಯವರು ಭಜನೆಗಳನ್ನು ಹಾಡಿದರು. ನಂತರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಭಜನಾ ಶಿಕ್ಷಕಿ ಎಸ್.ಆರ್. ಗಾಯತ್ರಿ, ಪುರೋಹಿತ ಮಂಜುನಾಥ್ ಶರ್ಮ ದಂಪತಿ ಹಾಗೂ ಸಮಿತಿಯ ಯಶವಂತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಟ್ಟಣ ಹಾಗೂ ಕಾಲೋನಿಯ ಅಧಿಕ ಸಂಖ್ಯೆಯ ಭಕ್ತರು ಭಕ್ತಿಯಿಂದ ಪಾಲ್ಗೊಂಡಿದ್ದರು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್. ಮಧು, ಪದಾಧಿಕಾರಿಗಳು, ವಿಜಯ ವಿನಾಯಕ ಭಜನಾ ಮಂಡಳಿ ಸದಸ್ಯರು ಹಾಜರಿದ್ದರು.