ಮಡಿಕೇರಿ, ನ. ೯: ಅರಣ್ಯ ಇಲಾಖೆಯ ‘ಇ-ಪ್ರಹಾರಿ’ ತಂತ್ರಾAಶದ ಮೂಲಕ ಅರಣ್ಯ ಗಡಿಯ ಸರ್ವೆ ನಡೆಸುವ ಸಂದರ್ಭ ಕಾಲು ಜಾರಿ ಹೊಳೆಗೆ ಬಿದ್ದು ಅರಣ್ಯ ವೀಕ್ಷಕ ಸಾವನ್ನಪ್ಪಿರುವ ಘಟನೆ ಭಾಗಮಂಡಲ ಅರಣ್ಯ ವಲಯದ ತೊಡಿಕಾನ ಗಡಿಭಾಗದ ಮಾವಿನಕಟ್ಟೆ ನರವೋಳು ಅರಣ್ಯದಲ್ಲಿ ನಡೆದಿದೆ.

ಮೂಲತಃ ಸುಂಟಿಕೊಪ್ಪ ಸಮೀಪದ ಕಂಬಿಬಾಣೆ ನಿವಾಸಿ ೩೦ ವರ್ಷಗಳಿಂದ ಭಾಗಮಂಡಲ ವಲಯ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೀಕ್ಷಕ ಚಿನ್ನಪ್ಪ (೫೮) ಸಾವನ್ನಪ್ಪಿದ್ದ ವ್ಯಕ್ತಿ.

ತಾ. ೮ ರಂದು ಅರಣ್ಯ ಗಡಿ ಗುರುತು ಸಂಬAಧ ಸರ್ವೆಗೆಂದು ಚಿನ್ನಪ್ಪ ಹಾಗೂ ಮೂವರು ಸಿಬ್ಬಂದಿಗಳು ಅರಣ್ಯಕ್ಕೆ ತೆರಳಿದ್ದಾರೆ. ಈ ಸಂದರ್ಭ ಇವರುಗಳು ದಾರಿ ತಪ್ಪಿಸಿಕೊಂಡಿದ್ದು, ಸ್ಥಳೀಯರಿಗೆ ಈ ಬಗ್ಗೆ ಮಾಹಿತಿ ನೀಡಿ ಅಲ್ಲೇ ಪಕ್ಕದ ಬಂಡೆಯ ಮೇಲೆ ಕುಳಿತಿದ್ದರು. ನೀರು ಕುಡಿಯಲೆಂದು ಚಿನ್ನಪ್ಪ ಹೋದ ಸಂದರ್ಭ ಕಾಲು ಜಾರಿ ಹೊಳೆಗೆ ಬಿದ್ದಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಸಹೋದ್ಯೋಗಿಗಳು ಸ್ಥಳೀಯರನ್ನು ಕರೆಸಿಕೊಂಡು ಹೊಳೆಯಲ್ಲಿ ಹುಡುಕಾಟ ನಡೆಸಿದಾಗ ಶವ ದೊರೆತಿದೆ.

ಕಳೆದ ಕೆಲವು ದಿನಗಳ ಹಿಂದೆ ಬ್ರಹ್ಮಗಿರಿ ವನ್ಯಧಾಮ ವ್ಯಾಪ್ತಿಯ ಮಾಕುಟ್ಟ ಮೀಸಲು ಅರಣ್ಯ ವಲಯದ ಕೊಕ್ಕ ವೈಲ್ಡ್ಲೈಫ್‌ನಲ್ಲಿ ಇದೇ ರೀತಿ ಸರ್ವೆಗೆಂದು ತೆರಳಿದ್ದ ಅರಣ್ಯ ವೀಕ್ಷಕ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದರು.

ಮೃತ ಚಿನ್ನಪ್ಪ ಪತ್ನಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ. ಘಟನೆ ಸಂಬAಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿದೆ.