ಮಡಿಕೇರಿ, ನ. ೯: ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಸಮೀಕ್ಷೆ ಮೂಲಕ ಗುರುತಿಸಲು ಅರ್ಹ ಸಂಸ್ಥೆಗಳಿAದ ಅರ್ಜಿ ಆಹ್ವಾನಿಸಲಾಗಿದೆ. ಸೂಕ್ತ ದಾಖಲೆಗಳ ಸಮೇತ ಅರ್ಜಿ ಸಲ್ಲಿಸುವುದು. ಸರ್ಕಾರೇತರ ಸಂಘ-ಸAಸ್ಥೆಗಳು ನಿಗದಿತ ದಾಖಲೆಗಳೊಂದಿಗೆ ತಾ. ೧೭ ರೊಳಗೆ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ಇಲಾಖೆ, ಮೊದಲನೆ ಮಹಡಿ, ಕೊಠಡಿ ಸಂಖ್ಯೆ ೧೧. ಜಿಲ್ಲಾಡಳಿತ ಭವನ, ಮಡಿಕೇರಿ ಕೊಡಗು ಜಿಲ್ಲೆ ಇವರಿಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಸರ್ಕಾರೇತರ ಸಂಘ-ಸAಸ್ಥೆಗಳ ಅರ್ಹತೆಗಳು ಸಂಸ್ಥೆಯು ಸಕ್ಷಮ ನೋಂದಣಿ ಅಧಿಕಾರಿಗಳಲ್ಲಿ ನೋಂದಣಿ ಹೊಂದಿದ್ದು, ಕನಿಷ್ಟ ೩ ವರ್ಷಗಳ ಅವಧಿಯಾಗಿರಬೇಕು ಕಾಲಕಾಲಕ್ಕೆ ನವೀಕರಿಸಿದ ಪ್ರಮಾಣ ಪತ್ರ ಹೊಂದಿರಬೇಕು. ಈ ಹಿಂದೆ ಇಂತಹ ಯಾವುದಾದರು ಸಮೀಕ್ಷೆ ನಡೆಸಿದ ಅನುಭವ ಹೊಂದಿದ್ದಲ್ಲಿ, ಅನುಭವ ಪ್ರಮಾಣ ಪತ್ರ ಸಲ್ಲಿಸಬೇಕು. ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ, ದತ್ತಾಂಶ ಸಂಗ್ರಹಿಸಿ, ವಿಶ್ಲೇಷಿಸಿದ ಸಾಫ್ಟ್ ಹಾಗೂ ಹಾರ್ಡ್ ಪ್ರತಿ ಒದಗಿಸಬೇಕು.
ಅಪಾಯಕಾರಿ ಹಾಗೂ ಅಪಾಯಕಾರಿ ಅಲ್ಲದ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಬಾಲಕಾರ್ಮಿಕರನ್ನು ಗುರುತಿಸುವ ಕಾರ್ಯವನ್ನು ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೬ ರವರೆಗೆ ಮಾಡುವುದು. ಆಯ್ಕೆಯಾಗುವ ಸರ್ಕಾರೇತರ ಸಂಸ್ಥೆಯ ಸಮೀಕ್ಷಾದಾರರು ಈ ಕಾರ್ಯಾಲಯದಿಂದ ತರಬೇತಿ ನೀಡಲಾಗುವುದು. ಸಮೀಕ್ಷೆ ಕಾರ್ಯ ಕೈಗೊಳ್ಳಲು ಆದೇಶ ನೀಡಿದ ೧೫ ದಿನಗಳಲ್ಲಿ ಪೂರ್ಣಗೊಳಿಸಲು ಬದ್ಧರಿರಬೇಕು. ಜಿಲ್ಲಾ/ ತಾಲೂಕು ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಅಪಾಯಕಾರಿ ಹಾಗೂ ಅಪಾಯಕಾರಿ ಅಲ್ಲದ ಸಂಸ್ಥೆಗಳಿಗೆ ಹಾಗೂ ಕೊಳಚೆ ಪ್ರದೇಶಗಳಿಗೆ ಭೇಟಿ ನೀಡಿ ಬಾಲಕಾರ್ಮಿಕರಿದ್ದಲ್ಲಿ ಗುರುತಿಸಿ, ನಮೂನೆಯನ್ನು ಭರ್ತಿ ಮಾಡಬೇಕು.
ಜಿಲ್ಲಾ/ ತಾಲೂಕು ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಅಪಾಯಕಾರಿ ಹಾಗೂ ಅಪಾಯಕಾರಿ ಅಲ್ಲದ ಸಂಸ್ಥೆಗಳಿಗೆ ಭೇಟಿ ನೀಡಿ ಗುರುತಿಸಿದ, ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರ ಕುಟುಂಬಗಳನ್ನು ಭೇಟಿ ಮಾಡಿ ನಮೂನೆ ಭರ್ತಿ ಮಾಡುವುದು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಆದಿವಾಸಿಗಳು/ ಅಲ್ಪಸಂಖ್ಯಾತ/ ಕೊಳಕೇರಿ ಪ್ರದೇಶಗಳನ್ನು ಗುರುತಿಸಿ, ಭೇಟಿ ಮಾಡಿ ನಮೂನೆ ಭರ್ತಿಮಾಡಬೇಕು. ಸಮೀಕ್ಷೆ ಮಾಡಿದ ಮಾಹಿತಿಯು ಶೇ. ೧೦ ಕ್ಕಿಂತ ಹೆಚ್ಚು ತಪ್ಪು ಎಂದು ಕಂಡುಬAದಲ್ಲಿ ಅಂತಹ ಸರ್ಕಾರೇತರ ಸಂಸ್ಥೆಗೆ ಹಣ ಪಾವತಿ ಮಾಡುವುದಿಲ್ಲ. ಹೆಚ್ಚಿನ ಮಾಹಿತಿಯನ್ನು ಯೋಜನಾ ನಿರ್ದೇಶಕರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಮೊದಲನೆ ಮಹಡಿ, ಕೊಠಡಿ ಸಂಖ್ಯೆ ೧೧, ಜಿಲ್ಲಾಡಳಿತ ಭವನ, ಕೊಡಗು ಜಿಲ್ಲೆ, ಮಡಿಕೇರಿ ಕಚೇರಿಯಿಂದ ಪಡೆಯಬಹುದು ಎಂದು ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ ತಿಳಿಸಿದ್ದಾರೆ.