ಮಡಿಕೇರಿ, ನ. ೮: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲೆ ವತಿಯಿಂದ ತಾ. ೯ ರಂದು (ಇಂದು) ಹಾಗೂ ೧೦ ರಂದು ವಿಶ್ವೇಶ್ವರಯ್ಯ ಕ್ರೀಡಾಂಗಣ ಚಿಕ್ಕಬಳ್ಳಾಪುರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ಸಂತ ಅಂತೋಣಿ ಪದವಿಪೂರ್ವ ಕಾಲೇಜು ಪೊನ್ನಂಪೇಟೆ, ಚೆನ್ನಮ್ಮ ಕಾಲೇಜು ಮಾದಾಪುರ, ಕಾವೇರಿ ಕಾಲೇಜು ಭಾಗಮಂಡಲ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳು ಕೊಡಗು ಜಿಲ್ಲಾ ತಂಡವನ್ನು ಪ್ರತಿನಿಧಿಸಲಿದ್ದು, ತಂಡದ ಉಸ್ತುವಾರಿಯನ್ನು ಸಂತ ಅಂತೋಣಿ ಪದವಿಪೂರ್ವ ಕಾಲೇಜು ಪೊನ್ನಂಪೇಟೆ ವಹಿಸಿಕೊಂಡಿದೆ.
ಸಂಸ್ಥೆಯ ಮುಖ್ಯಸ್ಥ ಫಾ. ಡೇವಿಡ್ ಸಗಯ್ರಾಜ್, ಪ್ರಾಂಶುಪಾಲ ಶಂಭು ಕಾರ್ಯಪ್ಪ, ಮುಖ್ಯ ಶಿಕ್ಷಕಿ ರಜನಿ, ತಂಡದ ತರಬೇತುದಾರ ಪವನ್ ಎಂ.ಟಿ. ಹಾಗೂ ಪೌಶಿಕ ಮಾರ್ಗದರ್ಶನ ನೀಡಿದ್ದಾರೆ.