ಮುಳ್ಳೂರು, ನ. ೮: ಶನಿವಾರಸಂತೆ ಹೋಬಳಿಯ ಮಾಲಂಬಿ ಗ್ರಾಮದ ಗಾಂಧಿ ಕಾಲೋನಿಯ ರಾಮ ಮಂದಿರದಲ್ಲಿ ತಾ. ೧೪ ರಂದು ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೧-೩೦ ರವರೆಗೆ ಪೌತಿ ಖಾತೆ ಆಂದೋಲನ ನಡೆಯಲಿದೆ.
ಆಲೂರುಸಿದ್ದಾಪುರ ವೃತ್ತಕ್ಕೆ ಒಳಪಡುವ ಗ್ರಾಮಗಳಾದ ಆಲೂರು, ಸಿದ್ದಾಪುರ, ಮಾಲಂಬಿ, ಕಂತೆ ಬಸವನಹಳ್ಳಿ, ಮೆಣಸ, ಮನೆಹಳ್ಳಿ, ಅಂಕನಹಳ್ಳಿ, ಕಣಿವೆ ಬಸವನಹಳ್ಳಿ, ಗಂಗಾವಾರ, ನಾಗವಾರ, ಮೈಲಾತಪುರ ಸುತ್ತಮುತ್ತಲಿನ ಗ್ರಾಮಸ್ಥರು ಅರ್ಜಿ ನಮೂನೆ-೩ ಅನ್ನು ನಾಡ ಕಚೇರಿಯಲ್ಲಿ ಪಡೆದುಕೊಂಡು ಪಹಣೆ, ಮೃತರ ಮರಣ ಸಮರ್ಥನಾ ಪತ್ರ, ವಂಶವೃಕ್ಷ, ಪಡಿತರ ಚೀಟಿ, ಆಧಾರ್ ಕಾರ್ಡ್ನೊಂದಿಗೆ ಆಂದೋಲನದಲ್ಲಿ ಭಾಗಿಯಾಗಿ ಯೋಜನೆಯನ್ನು ಸದುಪಯೋಗಿಸಿಕೊಳ್ಳುವಂತೆ ಗ್ರಾಮ ಲೆಕ್ಕಾಧಿಕಾರಿ ವಾಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.