ಮರಗೋಡು, ನ. ೮: ಇಲ್ಲಿನ ಭಾರತೀ ಹೈಸ್ಕೂಲ್ ಮೈದಾನದಲ್ಲಿ ನಡೆದ ಎರಡು ದಿನಗಳ ಅಂತರ ಗ್ರಾಮ ಕ್ರೀಡಾಕೂಟದಲ್ಲಿ ನಾರಾಯಣ ಹೃದಯಾಲಯದಿಂದ ಉಚಿತ ಆ್ಯಂಬ್ಯಲೆನ್ಸ್ ಸೇವೆ ಒದಗಿಸಲಾಗಿತ್ತು. ದೂರ ಓಟದಲ್ಲಿ ನಿತ್ರಾಣಗೊಂಡು ಉಸಿರಾಟದ ಸಮಸ್ಯೆಗೆ ಸಿಲುಕಿದ ಬಾಲಕಿಗೆ ಆ್ಯಂಬ್ಯಲೆನ್ಸ್ ಸಿಬ್ಬಂದಿ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ ಬಾಲಕಿಯನ್ನ ಆ್ಯಂಬ್ಯಲೆನ್ಸ್ನಲ್ಲಿ ತಕ್ಷಣವೇ ಮಡಿಕೇರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಎರಡು ದಿನಗಳ ಕ್ರೀಡಾಕೂಟದಲ್ಲಿ ಕಟ್ಟೆಮಾಡು ತಂಡ ಪ್ರಥಮ ಸ್ಥಾನ ಗಳಿಸಿದರೆ, ಹೊಸ್ಕೇರಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.