ಮಡಿಕೇರಿ, ನ. ೮ : ಕೊಡಗಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಬಹು ನಿರೀಕ್ಷಿತ ಮೈಸೂರು-ಕುಶಾಲನಗರ ನಡುವಿನ ರೈಲ್ವೆ ಮಾರ್ಗಕ್ಕೆ ಸಂಬAಧಿಸಿದAತೆ ಅಂತಿಮ ಹಂತದ ಸರ್ವೆ ಕಾರ್ಯ ಕುಶಾಲನಗರ ಸಮೀಪಕ್ಕೆ ಬಂದು ತಲುಪಿದೆ. ಕುಶಾಲನಗರಕ್ಕೆ ಹೊಂದಿಕೊAಡAತೆ ಇರುವ ಕಾವೇರಿ ನದಿಯಾಚೆಗಿನ ಮೈಸೂರು ಜಿಲ್ಲೆಗೆ ಸೇರಿದ ಪ್ರದೇಶಗಳ ಖಾಸಗಿ ಜಮೀನುಗಳಲ್ಲಿ ಮಂಗಳವಾರ ಸವೆÀð ಕಾರ್ಯ ನಡೆಸಲಾಗಿದೆ.
ಮೈಸೂರು-ಬೆಳಗೊಳ- ಕುಶಾಲನಗರ ರೈಲ್ವೇ ಮಾರ್ಗದ ಕೊಪ್ಪ ತನಕದ ೮೭.೨ ಕಿ.ಮೀಗೆ ಸಂಬAಧಿಸಿದAತೆÀ ಅಂತಿಮ ಹಂತದ ಸರ್ವೆ ಕಾರ್ಯ ಮೈಸೂರಿನಿಂದ ಕಂಪಲಾಪುರವರೆಗಿನ ಮೊದಲ ಹಂತದ ಸರ್ವೆ ಕೆಲಸ ಕಳೆದ ತಿಂಗಳು ಪೂರ್ಣಗೊಂಡಿತ್ತು. ಕೊಡಗು ಮತ್ತು ಜಿಲ್ಲೆಯ ಪಕ್ಕದ ಮೈಸೂರು ಗಡಿಭಾಗದಲ್ಲಿ ಮಳೆಯಾಗುತ್ತಿದ್ದ ಕಾರಣ ಸರ್ವೆ ಕಾರ್ಯ ನಿಧಾನಗೊಂಡಿತ್ತು.
ಸರ್ವೆಯ ಹೊಣೆ ಹೊತ್ತಿರುವ ಸಂಸ್ಥೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉತ್ತರಭಾರತ ಕಡೆಯ ೭ ಮಂದಿ ಕಾರ್ಮಿಕರು ಇದೀಗ ಕುಶಾಲನಗರ ಭಾಗದಲ್ಲಿ ಸರ್ವೆ ನಡೆಸುತ್ತಿದ್ದಾರೆ. ಪಿರಿಯಾಪಟ್ಟಣ ತಾಲೂಕು ಗಿರುಗೂರು ಗ್ರಾಮಕ್ಕೆ ಸೇರಿರುವ ಕಾವೇರಿ ನದಿ ದಂಡೆಗೆ ಹೊಂದಿಕೊAಡಿರುವ ಜಮೀನುಗಳಲ್ಲಿ ಸರ್ವೆ ನಡೆದಿದೆ. ಪಿರಿಯಾಪಟ್ಟಣಕ್ಕೆ ನೀರು ಪೂರೈಸುವ ಪಂಪ್ಹೌಸ್ ತನಕ ಇಂದು ಸರ್ವೆ ನಡೆಸಲಾಗಿದೆ. ಈ ತಿಂಗಳಾAತ್ಯಕ್ಕೆ ಈ ಮಾರ್ಗದ ಅಂತಿಮ
(ಮೊದಲ ಪುಟದಿಂದ) ಸರ್ವೆಯ ಸಂಪೂರ್ಣ ವರದಿಯನ್ನು ರೈಲ್ವೆ ಇಲಾಖೆಗೆ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ರೈಲ್ವೆ ಇಲಾಖೆ ಮೂಲಗಳ ಪ್ರಕಾರ ಈಗಾಗಲೇ ಭೂ ಸ್ವಾಧೀನ ಸರ್ವೇ, ರೈಲ್ವೇ ಹಳಿ ಸರ್ವೆ, ರೈಲು ಹಾದು ಹೋಗುವ ಪ್ರದೇಶದ ಸರ್ವೇ ಪೂರ್ಣಗೊಂಡಿದೆ. ಈಗ ನಡೆಯುತ್ತಿರುವುದು ರೈಲು ಮಾರ್ಗವೊಂದರ ನಿರ್ಮಾಣಕ್ಕೂ ಮೊದಲು ನಡೆಯುವ ಕೊನೆಯ ಹಂತದ ಸರ್ವೆ. ಡಿಫರೆನ್ಷಿಯಲ್ ಗ್ಲೋಬಲ್ ಪೊಜಿಷನಿಂಗ್ ಸಿಸ್ಟಂ(ಡಿಜಿಪಿಎಸ್) ಎನ್ನುವ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಈ ಸರ್ವೆ ಮಾಡಲಾಗುತ್ತಿದೆ. ರೈಲ್ವೆ ಮಾರ್ಗ ಹಾದು ಹೋಗಲಿರುವ ಸ್ಥಳದ ಭೂಮಿಯ ಗುಣ ಲಕ್ಷಣಗಳ ಬಗ್ಗೆ ಮಾಹಿತಿ ಕಲೆ ಹಾಕಲು ಈ ಪ್ರಕ್ರಿಯೆ ನಡೆಸಲಾಗುತ್ತದೆ.
ಉದ್ದೇಶಿತ ರೈಲ್ವೆ ಯೋಜನೆಗೆ ಒಟ್ಟು ೧೮೫೪.೬೨ ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿದ್ದು. ೨೦೧೯ರ ಫೆಬ್ರವರಿ ೨೭ರಂದು ರೈಲ್ವೇ ಸಚಿವಾಲಯ ಅನುಮೋದನೆ ಕೊಟ್ಟಿತ್ತು. ನಂತರ ೨೦೨೦ರ ಅಕ್ಟೋಬರ್ನಲ್ಲಿ ನೈರುತ್ಯ ರೈಲ್ವೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ನಿರ್ಮಾಣ) ಈ ರೈಲ್ವೇ ಮಾರ್ಗದ ಸರ್ವೆಗೆ ಸೂಚನೆ ನೀಡಿದ್ದರು. ೨೦೧೮-೧೯ರಲ್ಲಿ ರೈಲ್ವೇ ಇಲಾಖೆಯ ಪಿಂಕ್ ಬುಕ್ನಲ್ಲಿ ಈ ಯೋಜನೆಯನ್ನು ದಾಖಲಿಸಲಾಗಿತ್ತು.
ಉದ್ದೇಶಿತ ರೈಲ್ವೆ ಮಾರ್ಗದ ಸರ್ವೆಗೆ ೨೦೨೧ರ ಆಗಸ್ಟ್ ತಿಂಗಳಲ್ಲಿ ಖಾಸಗಿ ಸಂಸ್ಥೆಯೊAದಕ್ಕೆ ಟೆಂಡರ್ ನೀಡಲಾಗಿತ್ತು. ಸರ್ವೆ ಕಾರ್ಯಕ್ಕಾಗಿ ೧.೨೬ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ರೈಲ್ವೆ ಮಾರ್ಗ ಆರಂಭವಾಗಲಿರುವ ಬೆಳಗೊಳದಿಂದ ಪಿರಿಯಾಪಟ್ಟಣ ತಾಲೂಕಿನ ಆರಂಭದ ತನಕ ಭೌಗೋಳಿಕ ಲಕ್ಷಣಗಳು ಬಹುತೇಕ ಸಮತಟ್ಟು ಆಗಿರುವುದರಿಂದ ಆ ಭಾಗದಲ್ಲಿ ಸರ್ವೆ ಕಾರ್ಯ ನಿಗದಿಯಂತೆ ಪೂರ್ಣಗೊಂಡಿದೆ. ಆದರೆ ನಂತರದ ಪ್ರದೇಶಗಳು ಹೆಚ್ಚು ಸವಾಲುಗಳಿಂದ ಕೂಡಿರುವ ಕಾರಣ ಹೆಚ್ಚು ಸಮಯ ತೆಗೆದುಕೊಂಡಿದೆ ಎನ್ನುತ್ತಾರೆ ಸರ್ವೆ ನಡೆಸುತ್ತಿರುವ ಸಂಸ್ಥೆಯ ಅಧಿಕಾರಿಗಳು. - ಸುನಿಲ್ ಪೊನ್ನೇಟಿ