ಮಡಿಕೇರಿ, ನ. ೮: ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಕೊಡಗು ಜಿಲ್ಲಾ ಹಾಗೂ ತಾಲೂಕು ಘಟಕಗಳ ಪೂರ್ವಭಾವಿ ಸಭೆ ಮಡಿಕೇರಿ ಗೌಡ ಸಮಾಜ ಸಭಾಂಗಣ ದಲ್ಲಿ ನಡೆಯಿತು.

ಸಭೆಯಲ್ಲಿ ಜಿಲ್ಲಾ ಸಮಿತಿ ರಚಿಸುವ ಕುರಿತು ಹಾಗೂ ಪುರುಷ, ಮಹಿಳಾ ಘಟಕಗಳ ರಚಿಸುವ ಬಗ್ಗೆ ಚರ್ಚಿಸಲಾಯಿತು. ಅಖಿತ ಕರ್ನಾಟಕ ಒಕ್ಕಲಿಗರ ಒಕ್ಕೂಟದ ರಾಜ್ಯ ಅಧ್ಯಕ್ಷ ಮಧುಸೂಧನ್ ಮಾತನಾಡಿ, ಸಮುದಾಯವರು ಒಗ್ಗಟ್ಟಿನಿಂದ ಮುಂದುವರೆಯಬೇಕಾಗಿದೆ. ಸಂಘದ ಬೆಳವಣಿಗೆಗೆ ಸದಸ್ಯರು ದಿನದ ಕನಿಷ್ಟ ಅರ್ಧಗಂಟೆಗಳಷ್ಟು ಸಮಯವನ್ನಾ ದರೂ ಮೀಸಲಿಡಬೇಕು ಎಂದು ಹೇಳಿದರು.

ಒಕ್ಕೂಟದ ಖಜಾಂಚಿ ಅಮ್ಮಾಜಿರ ಪೊನ್ನಪ್ಪ ಮಾತನಾಡಿ, ಜನಾಂಗದಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಸಂಘಟಿತರಾಗ ಬೇಕಾಗಿದೆ. ಗೌಡ ಪಂಗಡಗಳನ್ನು ಒಗ್ಗೂಡಿಸಿ ಎಲ್ಲರೂ ಒಗ್ಗಟ್ಟಿನಿಂದ ಮುಂದುವರೆಯಬೇಕು ಎಂದರು.

ಸಭೆಯಲ್ಲಿ ಪ್ರಮುಖರಾದ ಪೈಕೆರ ಮನೋಹರ್, ಬಾಲಾಡಿ ಮನೋಜ್, ಕಡ್ಯದ ಪಾರ್ವತಿ, ರಾಜ್ಯ ಘಟಕದ ಅನುಸೂಯ, ದೇವರಾಜು ಇತರರು ಇದ್ದರು.