ಕೂಡಿಗೆ, ನ. ೯: ಜಿಲ್ಲೆಯ ಪರಿಶಿಷ್ಟ ಪಂಗಡ ಮತ್ತು ಗಿರಿಜನ ಆದಿವಾಸಿ ಕುಂದು ಕೊರತೆಗಳ ಬಗ್ಗೆ ಮತ್ತು ಅರಣ್ಯ ಹಕ್ಕಿನಡಿ ಹಕ್ಕು ಪತ್ರ, ಮತ್ತ್ತು ಹಾಡಿಗಳಿಗೆ ಆರೋಗ್ಯ ಆ್ಯಂಬುಲೆನ್ಸ್ ಅನ್ನು ಮುಂದುವರೆಸುವ ಬಗ್ಗೆ ಸೇರಿದಂತೆ ಮೂಲಭೂತ ಸೌಕರ್ಯಗಳ ಜೊತೆಗೆ ಹೆಚ್ಚಿನ ಕಾಮಗಾರಿಯನ್ನು ಹಾಡಿಗಳಲ್ಲಿ ಕೈಗೊಳ್ಳುವಂತೆ ಸಮಿತಿಯ ವತಿಯಿಂದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಆರ್. ಪ್ರಭಾಕರ್, ರಾಜ್ಯ ಸಮಿತಿಯ ಸದಸ್ಯ ಬಿ.ಕೆ. ಮೋಹನ್, ಜೇನು ಕುರುಬರ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರಕಾಶ್, ಸೋಮವಾರಪೇಟೆ ತಾಲೂಕು ಮಂಡಲ ಎಸ್.ಟಿ. ಮೋರ್ಚಾ ಅಧ್ಯಕ್ಷ ರವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕುಮಾರ್ ಹೇರೂರು ಸುರೇಶ್, ಸೇರಿದಂತೆ ಗಿರಿಜನ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.