ಶ್ರೀಮಂಗಲ, ನ. ೯: ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿ- ಪರಂಪರೆ ಬೆಳೆಸಲು, ಇತಿಹಾಸ ಅಧ್ಯಯನ ಉದ್ದೇಶದಿಂದ ಮತ್ತು ಕೊಡವ ಭಾಷೆ ಕಲಿಯಲು ಅನುಕೂಲವಾಗುವಂತೆ ತಾ.೧೧ರಂದು ಪೂರ್ವಾಹ್ನ ೧೦.೩೦ಕ್ಕೆ ಕೊಡವ ಪುಸ್ತಕ ಭಂಡಾರ (ಗ್ರಂಥಾಲಯ) ಉದ್ಘಾಟನೆಯಾಗಲಿದೆ ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರು ತಿಳಿಸಿದ್ದಾರೆ.
ಭಾಷೆಯನ್ನು ಬೆಳೆಸುವ ಉದ್ದೇಶದಿಂದ ಸಮಾಜದಲ್ಲಿ ಇದೇ ಪ್ರಥಮವಾಗಿ ಪುಸ್ತಕ ಭಂಡಾರ ತೆರೆಯಲು ನಿರ್ಧರಿಸಲಾಗಿದೆ. ಕೊಡವ ಸಾಹಿತ್ಯ ಅಭಿಮಾನಿಗಳು ಸಮಾಜದ ಕಚೇರಿ ವೇಳೆಯಲ್ಲಿ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಓದಲು ಅವಕಾಶ ಕಲ್ಪಿಸಲಾಗಿದೆ. ಇದನ್ನು ಕೊಡವ ಭಾಷಾಭಿಮಾನಿಗಳು ಸದುಪಯೋಗಪಡಿಸಿಕೊಳ್ಳುವಂತೆ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.