ಮಡಿಕೇರಿ, ನ. ೯: ಆಧುನಿಕತೆ ಯೊಂದಿಗೆ ಬೆಳೆಯುವ ಮಕ್ಕಳಿಗೆ ಕಲಿಕೆಯೊಂದಿಗೆ ಜೀವನ ಪಾಠ ತಿಳಿಸುವ ಜವಾಬ್ದಾರಿ ಶಿಕ್ಷಕರಿಗಿದೆ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಂಬAಧಗಳು ಮತ್ತು ವಿದ್ಯಾರ್ಥಿಗಳನ್ನು ಅಧ್ಯಯನದ ಕಡೆಗೆ ಆಕರ್ಷಿಸುವಂತೆ ಮಾಡುವ ವiಹತ್ತರ ಕೆಲಸ ಶಿಕ್ಷಕರಿಂದಾಗಬೇಕಾಗಿದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು ಆದ ಡಾ. ರೇಣುಕಾ ಪ್ರಸಾದ್ ಕೆ.ವಿ ಅವರು ಅಭಿಪ್ರಾಯಪಟ್ಟರು.

ಅವರು ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ನಡೆದ ಕೆ.ವಿ.ಜಿ. ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಸಭಾಂಗಣದಲ್ಲಿ ನಡೆದ ಅಧ್ಯಾಪಕರುಗಳಿಗೆ ಮಾಹಿತಿ ಮಾರ್ಗದರ್ಶನ ಕಾರ್ಯP್ರÀಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಣಕ್ಕೆ ಅದರದ್ದೇ ಆದ ಮಹತ್ವವಿದೆ. ಗುರುಕುಲ ಪದ್ಧತಿಯಿಂದ ಆರಂಭವಾದ ಶಿಕ್ಷಣ ಇದೀಗ ಆಧುನಿಕ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಬೋಧಿಸುವ ಮಟ್ಟಕ್ಕೆ ಮುಟ್ಟಿರುತ್ತದೆ.

ಗುರು ಹಿರಿಯರ ಮೇಲಿನ ಪ್ರೀತಿ, ಬಾಂಧವ್ಯ, ಗೌರವಗಳು ಮತ್ತು ಸಂಬAಧಗಳ ಮೌಲ್ಯಗಳನ್ನು ಕಳೆದುಕೊಳ್ಳುವ ಈ ಸಂದರ್ಭ ಅಧ್ಯಾಪಕರಿಗೆ ಬೋಧನೆ ಮಾಡುವುದೇ ಒಂದು ಸವಾಲು. ಇಂತಹ ಸಮಯದಲ್ಲಿ ಶಿಕ್ಷಕರು ಕೂಡ ಸರಿಯಾದ ಮಾರ್ಗದರ್ಶನ ಪಡೆದು ಅದನ್ನು ಶಿಷ್ಯವೃಂದಕ್ಕೆ ಧಾರೆಯೆರೆಯ ಬೇಕಾದ ಅನಿರ್ವಾತೆ ಇದೆ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಲಯನ್ ಸಂಸ್ಥೆಯ ಡಾ. ಮೆಲ್ವಿನ್ ಡಿಸೋಜಾ ಮತ್ತು ರೊನಾಲ್ಡ್ ಗೋಮ್ಸ್, ಲಯನ್ಸ್ P್ಲÀಬ್ ಅಧ್ಯP್ಷÀ ರೂಪ ರೈ, ಕಾರ್ಯP್ರÀಮ ತರಬೇತುದಾರರಾದ ಕವಿತಾ ಶಾಸ್ತಿç, ಜಿಲ್ಲಾ ಸಂಯೋಜಕಿ ಮಂದಾಕಿನಿ ಉಪಾಧ್ಯಾಯ ಮತ್ತು ಕೆ.ವಿ.ಜಿ. ಇಂಟರ್ ನಾಷನಲ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ಅರುಣ್ ಕುಮಾರ್ ಹಾಜರಿದ್ದರು.