ಮಡಿಕೇರಿ, ನ. ೭: ಜಸ್ಪೆçಟ್ ಕೌರ್ ಹಾಗೂ ನಂದಿನಿ ನಾಗರಾಜ್ ಅವರು ಗೋವಾದ ಲಾ ಗ್ರಾಸಿನಾ ರೆಸಾರ್ಟ್ನಲ್ಲಿ ಆಯೋಜಿಸಿದ್ದ “ಮಿಸಸ್ ಇಂಡಿಯಾ ಐಯಾಮ್ ಪವರ್ ಫುಲ್ ಎಂಡ್ ಇಂಡಿಯಾಸ್ ಚಾರ್ಮಿಂಗ್ ಫೇಸ್” ಸೌಂದರ್ಯ ಸ್ಪರ್ಧೆಯಲ್ಲಿ ಕೊಡಗಿನ ಪಿ & ಜಿ ಕ್ರಿಯೇಷನ್ಸ್ನ ರೂಪದರ್ಶಿಗಳು ಪ್ರಶಸ್ತಿ ಗೆದ್ದಿದ್ದಾರೆ.
ಮಲ್ಲಮಾಡ ಶಾಮಲಾ ಸುನಿಲ್ ಮಿಸೆಸ್ ಇಂಡಿಯಾ ಅರ್ಥ್ ಕಿರೀಟ ಧರಿಸಿದರು. ಇವರು ಮುಂದಿನ ವರ್ಷ ನಡೆಯಲಿರುವ ಮಿಸೆಸ್ ಅರ್ಥ್ ಸ್ಪರ್ಧೆಯಲ್ಲಿ ಪೈಪೋಟಿ ನೀಡಲಿದ್ದಾರೆ. ಕಳೆದ ತಿಂಗಳಷ್ಟೇ ಶಾಮಲಾ ದಕ್ಷಿಣ ಭಾರತದ ರಾಯಭಾರಿಯಾಗಿ ಆಯ್ಕೆಯಾಗಿದ್ದರು.
ಅಳಮೇಂಗಡ ದಿಶಾ ಚಂಗಪ್ಪ ಅವರು ಹದಿಹರೆಯದವರ ವಿಭಾಗದಲ್ಲಿ ಕಿರೀಟವನ್ನು ಗೆದ್ದರು ಮತ್ತು ಮಿಸ್ ಸೌತ್ ಇಂಡಿಯಾ ಟೀನ್ ಆಗಿ ಆಯ್ಕೆಯಾದರು. ಬಾನಂಗಡ ಭಾಗ್ಯ ಪ್ರದೀಪ್ ಅವರು ಮಿಸೆಸ್ ಇಂಡಿಯಾ ಫ್ಯಾಷನ್ ಐಕಾನ್ ಮತ್ತು ಮಿಸೆಸ್ ಇಂಡಿಯಾ ಆಂತರಿಕ ಸೌಂದರ್ಯ ಪ್ರಶಸ್ತಿಯನ್ನು ಗೆದ್ದುಕೊಂಡರು.
ಕುಪ್ಪಣಮಾಡ ಮೇಘನಾ ಮುತ್ತಮ್ಮ ಅವರು ಮಿಸ್ ಇಂಡಿಯಾ ಟೀನ್ ಎಲಿಗನ್ಸಿ ಪ್ರಶಸ್ತಿ ಪಡೆದರು. ಶಮಕ ಅವರು ಮಿಸಸ್ ಅಟಿಟ್ಯುಡ್ ಮತ್ತು ಮಿಸÀಸ್ ಬಾಡಿ ಬ್ಯೂಟಿಫುಲ್ ಪ್ರಶಸ್ತಿ ಗೆದ್ದರು.
ಫ್ಯಾಷನ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ ಪಿ & ಜಿ ಕ್ರಿಯೇಷನ್ಸ್ ನ ಬಾಳೆಯಡ ಪ್ರತೀಶ್ ಪೂವಯ್ಯ, ಎ.ಗಗನ್ ಗಣಪತಿ ಹಾಗೂ ಬ್ರಾಂಡ್ ಅಂಬಾಸಿಡರ್ ಕೆ. ಕಾವ್ಯ ಅವರ ಮಾರ್ಗದರ್ಶನದಲ್ಲಿ ಇವರುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು. ಗೋವಾದ ಲಾ ಗ್ರಾಸಿನಾ ರೆಸಾರ್ಟ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾರತದ ವಿವಿಧ ಭಾಗಗಳಿಂದ ಆಗಮಿಸಿದ್ದ ೬೦ಕ್ಕೂ ಅಧಿಕ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.